ವಿ. ಸೋಮಣ್ಣ ಗೆಲುವಿನಿಂದ ಬಿಜೆಪಿಗೆ ಆನೆಬಲ

| Published : Jun 05 2024, 12:30 AM IST

ಸಾರಾಂಶ

ತುಮಕೂರು ಲೋಕಸಭಾ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಅವರ ನಿರೀಕ್ಷೆಗೂ ಮೀರಿ ಗೆಲುವು ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ. ಎಸ್. ನಾಗರಾಜು ತಿಳಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ತುಮಕೂರು ಲೋಕಸಭಾ ಚುನಾವಣೆಯ ಎನ್‌ಡಿಎ ಅಭ್ಯರ್ಥಿ ವಿ. ಸೋಮಣ್ಣ ಅವರ ನಿರೀಕ್ಷೆಗೂ ಮೀರಿ ಗೆಲುವು ಪಡೆದಿದ್ದಾರೆ ಎಂದು ಜೆಡಿಎಸ್ ಮುಖಂಡ ಬಿ. ಎಸ್. ನಾಗರಾಜು ತಿಳಿಸಿದರು.

ಪಟ್ಟಣದಲ್ಲಿ ಲೋಕಸಭಾ ಚುನಾವಣೆಯಲ್ಲಿ ವಿ ಸೋಮಣ್ಣ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ಆಚರಿಸಿ ಮಾತನಾಡಿದರು. ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು, ಮುಖಂಡರು ಒಟ್ಟುಗೂಡಿ ಕೆಲಸ ಮಾಡಿದ ಹಿನ್ನೆಲೆಯಲ್ಲಿ ತಾಲೂಕಿನಿಂದ 26,000 ಮತಗಳನ್ನು ಬಿ ಸೋಮಣ್ಣ ಪಡೆದಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಮುಖಂಡ ಎಸ್ ಡಿ ದಿಲೀಪ್ ಕುಮಾರ್ ಮಾತನಾಡಿ, ವಿ ಸೋಮಣ್ಣ ಅವರ ಗೆಲುವು ಖಂಡಿತವಾಗಿಯೂ ದೊಡ್ಡ ಶಕ್ತಿಯನ್ನು ರಾಜ್ಯಕ್ಕೆ ಮತ್ತು ಜಿಲ್ಲೆಗೆ ತಂದಿದೆ. ನೀರಾವರಿ, ಇತರ ಯೋಜನೆ ಅಭಿವೃದ್ಧಿಗೆ ಸೋಮಣ್ಣ ಶ್ರಮಿಸುತ್ತಾರೆ. ನಾವು 30 ರಿಂದ 40,000 ಅಂತರದಲ್ಲಿ ಗೆಲುವು ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 1,75,000ಕ್ಕೂ ಹೆಚ್ಚು ಲೀಡ್ ಪಡೆದಿರುವುದು ಇತಿಹಾಸವನ್ನು ಸೃಷ್ಟಿಸಿದೆ ಎಂದು ತಿಳಿಸಿದರು.

ಮುಖಂಡರಾದ ಯೋಗಾನಂದ ಮೂರ್ತಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಯಾವುದೇ ಗ್ಯಾರಂಟಿಗಳು ಸಹ ಇಲ್ಲಿ ನಡೆಯಲಿಲ್ಲ. ದೇಶ ಹಾಗೂ ವ್ಯಕ್ತಿ ಪಕ್ಷವನ್ನು ನೋಡಿ ಜನರು ಮತ ನೀಡಿದ್ದಾರೆ ಎಂದರು.

ಮುಖಂಡ ಕಳ್ಳಿಪಾಳ್ಯ ಲೋಕೇಶ್ ಮಾತನಾಡಿ, ಸೋಮಣ್ಣ ಹೊರಗಿನವರು ಎಂದು ಅಪಪ್ರಚಾರ ಮಾಡಲಾಯಿತು. ಆದರೆ ಮತದಾರರು ಸೋಮಣ್ಣ ನಮ್ಮವರೇ ಎಂದು ತೋರಿಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಪಂಚಾಕ್ಷರಿ, ಅಣ್ಣಪ್ಪ ಸ್ವಾಮಿ, ಕೃಷ್ಣಮೂರ್ತಿ, ಶಿವಕುಮಾರ್, ಸಿದ್ದಗಂಗಮ್ಮ, ಸುರೇಶ್ ಗೌಡ ಚಂದ್ರಶೇಖರ್, ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ವಿಜಯೋತ್ಸವದಲ್ಲಿ ಭಾಗಿಯಾಗಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.