ಸಾರಾಂಶ
1896 ರಲ್ಲಿ ಪ್ರಾರಭವಾದ ಈ ಪತ್ರಿಕೆ ಕಾರಣಾಂತರಗಳಿಂದ ಪ್ರಕಟಣೆ ನಿಲ್ಲಿಸಿತ್ತು
ಧಾರವಾಡ: ವಾಗ್ಭೂಷಣ’ ಪತ್ರಿಕೆ ಕನ್ನಡ ಸಾಹಿತ್ಯ ಪ್ರಪಂಚಕ್ಕೊಂದು ಕಿರೀಟಪ್ರಾಯ. ಈ ಪತ್ರಿಕೆ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಸಾಧನೆಗೆ ಮಾರ್ಗದರ್ಶಿಯಾಗಿತ್ತು ಎಂದು ಕವಿವಿ ವಿಶ್ರಾಂತ ಗ್ರಂಥಾಲಯ ವಿಜ್ಞಾನಿ ಪ್ರೊ. ಸಿ.ಆರ್. ಕರಿಸಿದ್ಧಪ್ಪ ಹೇಳಿದರು. ಕರ್ನಾಟಕ ವಿದ್ಯಾವರ್ಧಕ ಸಂಘವು 136ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಮೂರು ದಿನಗಳ ನಾಟಕೋತ್ಸವ ಹಾಗೂ ಸಂಘದ ಹಿರಿಯ ಸದಸ್ಯರಿಗೆ ಗೌರವ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು, 1896 ರಲ್ಲಿ ಪ್ರಾರಭವಾದ ಈ ಪತ್ರಿಕೆ ಕಾರಣಾಂತರಗಳಿಂದ ಪ್ರಕಟಣೆ ನಿಲ್ಲಿಸಿತ್ತು. ಈಗ ಮತ್ತೆ ಹೊಸರೂಪದೊಂದಿಗೆ ಮರುಜೀವ ಪಡೆದಿದ್ದು, ಅಭಿನಂದನೀಯ ಎಂದರು.
ಸಂಘದ ಹಿರಿಯ ಸದಸ್ಯರಾಗಿ ಸನ್ಮಾನ ಸ್ವೀಕರಿಸಿ, ಪ್ರೊ. ಬಿ. ಆರ್. ದೇಶಪಾಂಡೆ ಹಾಗೂ ಡಾ. ಶಿವಪ್ಪ ಮುದಕವಿ ಹಾಗೂ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ಅಧ್ಯಕ್ಷತೆ ವಹಿಸಿ, ಸಂಘದ ಏಳು ದಿನಗಳ ವಿವಿಧ ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು. ನಂತರ ಸತ್ಯಶೋಧನ ರಂಗ ಸಮುದಾಯ, ಹೆಗ್ಗೋಡು ಅರ್ಪಿಸುವ ಜನುಮನದಾಟ ಅಭಿನಯಿಸುವ ಕೆ. ಪಿ. ಪೂರ್ಣಚಂದ್ರ ತೇಜಸ್ವಿ ಹಾಗೂ ಬಾನು ಮುಷ್ತಾಕ್ ಅವರ ಕಥೆಗಳನ್ನಾಧರಿಸಿದ ‘ಮಾಯಾಮೃಗ’ ಮತ್ತು ‘ಎದೆಯ ಹಣತೆ’ ನಾಟಕಗಳು ಪ್ರದರ್ಶನಗೊಂಡವು. ಸಂಘದ ಪದಾಧಿಕಾರಿಗಳಿದ್ದರು.