ರಾಜ್ಯಾದ್ಯಂತ ಪರವಾನಗಿ ಭೂಮಾಪಕರ ಮುಷ್ಕರ, ಸಿಬ್ಬಂದಿ ಕೊರತೆ ಸೇರಿ ನಾನಾ ಸಮಸ್ಯೆಗಳಿಂದ ತಾಲೂಕಿನ ಭೂಮಾಪನಾ ಇಲಾಖೆ ಬಳಲುತ್ತಿದ್ದು, ಕಳೆದ ಎರಡುವರೆ ತಿಂಗಳಿಂದ ಸಮರ್ಪಕವಾಗಿ ಜಮೀನು, ಆಸ್ತಿಗಳ ಸರ್ವೇಯಾಗದೇ ಸಂಕಷ್ಟ ತಂದೊಡ್ಡಿದೆ.
ಮುಷ್ಕರದ ಬಿಸಿ: ತಾಲೂಕಿನಲ್ಲಿ ಸರ್ವೇ ಕಾರ್ಯ ಸಂಪೂರ್ಣ ಅಸ್ತವ್ಯಸ್ತ
ರೈತರು, ರಿಯಲ್ ಎಸ್ಟೇಟ್ ಉದ್ಯಮಿಗಳ ಸಂಕಷ್ಟರಾಘು ಕಾಕರಮಠಕನ್ನಡಪ್ರಭ ವಾರ್ತೆ ಅಂಕೋಲಾರಾಜ್ಯಾದ್ಯಂತ ಪರವಾನಗಿ ಭೂಮಾಪಕರ ಮುಷ್ಕರ, ಸಿಬ್ಬಂದಿ ಕೊರತೆ ಸೇರಿ ನಾನಾ ಸಮಸ್ಯೆಗಳಿಂದ ತಾಲೂಕಿನ ಭೂಮಾಪನಾ ಇಲಾಖೆ ಬಳಲುತ್ತಿದ್ದು, ಕಳೆದ ಎರಡುವರೆ ತಿಂಗಳಿಂದ ಸಮರ್ಪಕವಾಗಿ ಜಮೀನು, ಆಸ್ತಿಗಳ ಸರ್ವೇಯಾಗದೇ ಸಂಕಷ್ಟ ತಂದೊಡ್ಡಿದೆ.ತಾಲೂಕಿನಲ್ಲಿ ಕಳೆದ 2 ತಿಂಗಳಿಂದ ಹದ್ದು ಬಸ್ತು, ಪೋಡಿ ಸೇರಿ ನಾನಾ ರೀತಿಗೆ ಸಂಬಂಧಿಸಿದ 360 ಅರ್ಜಿಗಳಿಗೆ ಈವರೆಗೂ ವಿಲೇವಾರಿಯಾಗುವ ಯೋಗವೇ ಲಭಿಸಿಲ್ಲ. ಹೀಗಾಗಿ, ಸರ್ವೇಗಾಗಿ ಶುಲ್ಕ ಪಾವತಿಸಿ 3 ತಿಂಗಳು ಕಳೆದರೂ ಇನ್ನೂ ಸಾಕಾರಗೊಂಡಿಲ್ಲ. ಇದರಿಂದ, ಹಕ್ಕು ಬದಲಾವಣೆ, ನಿವೇಶನ ಖರೀದಿ ಸೇರಿದಂತೆ ನಾನಾ ಕಾರ್ಯಕ್ಕೆ ಅಡ್ಡಿಯಾಗಿದೆ.ಸಿಬ್ಬಂದಿ ಕೊರತೆಯಿಂದ ಹಿನ್ನಡೆ:ತಾಲೂಕಿನ ಭೂಮಾಪನ ಮತ್ತು ಭೂದಾಖಲೆಗಳ ಇಲಾಖೆಗೆ ಸಂಬಂಧಿಸಿ ಸರಕಾರಿ ಭೂಮಾಪಕರ ಹುದ್ದೆಗಳು ಶೇ.65ರಷ್ಟು ಖಾಲಿ ಇವೆ. ಮೇಲ್ವಿಚಾರಕ 1 ಹುದ್ದೆ ಖಾಲಿ ಇದೆ. ಇದನ್ನು ಸರ್ವೆಯರ್ ರೋಷನ್ ಪ್ರಭಾರಿಯಾಗಿ ನಿರ್ವಹಿಸುತ್ತಿದ್ದಾರೆ. ಇನ್ನು ಭೂ ಮಾಪಕರು (ಸರ್ವೆಯರ್) 9 ಹುದ್ದೆಯಲ್ಲಿ 5 ಹುದ್ದೆ ಖಾಲಿ ಇದೆ. 12 ಪರವಾನಗಿ ಭೂಮಾಪಕರು ಅಂಕೋಲಾ ತಾಲೂಕಿನಲ್ಲಿ ಸೇವೆಯಲ್ಲಿದ್ದು, ಅವೆರೆಲ್ಲರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಸರ್ವೇ ಕಾರ್ಯದಲ್ಲಿ ತೊಡಕಾಗಿದೆ. ಈಗಿರುವ ಸರಕಾರಿ ಭೂಮಾಪಕರು ಸರಕಾರಿ ಯೋಜನೆಯ ಆಕಾರ್ ಬಂದ, ಡಿಜಟಲೀಕರಣ, ಧರಖಾಸ್ತ ಪೋಡಿ ಆಂದೋಲನ, ಕೇಂದ್ರ ಸರಕಾರದ ಸ್ವಾಮಿತ್ತ ಯೋಜನೆ ಕೆಲಸ ಮಾಡುತ್ತಿದ್ದಾರೆ.ಕಳೆದ ಫೆ.27 ರಿಂದ ಪರವಾನಗಿ ಭೂಮಾಪಕರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಕೈಗೊಂಡಿರುವುದರಿಂದ ಅವರೆಲ್ಲರೂ ಸರ್ವೇ, ಹದ್ದುಬಸ್ತು, ಪೋಡಿ ಸೇರಿ ನಾನಾ ಕಾರ್ಯ ಸ್ಥಗಿತಗೊಳಿಸಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿಂದಾಗಿ ರೈತರು ತಮ್ಮ ಜಮೀನುಗಳ ಸರ್ವೆ ಸೇರಿ ನಾನಾ ಕೆಲಸ ಮಾಡಿಸಿಕೊಳ್ಳುವುದಕ್ಕೆ ಕಾಯುವಂತಾಗಿದೆ.
ಆಸ್ತಿಗೆ ಸಂಬಂಧಿಸಿ ಪೋಡಿ ಆಗುತ್ತಿಲ್ಲವಾದ್ದರಿಂದ ಮಾರಾಟ ಮತ್ತು ಖರೀದಿಗೆ ಸಮಸ್ಯೆಯಾಗಿದೆ. ಇದಲ್ಲದೆ, ನೋಂದಣಿ, ಪಾಲು ಪತ್ರದ ನೋಂದಣಿ, ಕೃಷಿಯೇತರ ಭೂಮಿ (ಎನ್‌ಎ) ಪರಿವರ್ತನೆಯಾಗುತ್ತಿಲ್ಲ. ಬೇಸಿಗೆ ಸಮಯದಲ್ಲಿ ಸಾಕಷ್ಟು ಭೂಮಿಯಲ್ಲಿ ಫಸಲು ಇರುವುದಿಲ್ಲವಾದ್ದರಿಂದ ಹದ್ದುಬಸ್ತು, ಪೋಡಿ ಸೇರಿ ನಾನಾ ಕಾರ್ಯಕ್ಕೆ ಸೂಕ್ತವಾದ ಕಾಲವಾಗಿತ್ತು. ಆದರೆ, ಸರ್ವೇ ಇಲಾಖೆಯ ಸಮಸ್ಯೆಯಿಂದ ರೈತರು, ರಿಯಲ್ ಎಸ್ಟೇಟ್ ಉದ್ಯಮಿಗಳು ಸೇರಿ ಸಾಕಷ್ಟು ಜನರು ಯಾವಾಗ ಸರ್ವೆ ಕಾರ್ಯ ಸಲೀಸಾಗುತ್ತದೆ ಎಂಬ ಚಿಂತೆಯಿಂದ ನಲುಗುವಂತಾಗಿದೆ.ಪರವಾನಗಿ ಭೂಮಾಪಕರ ಪ್ರತಿಭಟನೆಯ ಕಾರಣದಿಂದ ಸರ್ವೇ ಕಾರ್ಯದಲ್ಲಿ ತೊಡಕಾಗಿದ್ದು ಸತ್ಯ. ಆದರೂ ಸರಕಾರಿ ಭೂಮಾಪಕರು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಪರವಾನಗಿ ಭೂಮಾಪಕ ಬೇಡಿಕೆ ಈಡೇರಿಕೆಗೆ ಮುಷ್ಕರ ಕೈಗೊಂಡಿರುವುದರಿಂದ ಜಿಲ್ಲೆಯಲ್ಲಿ ಜಮೀನು ಸರ್ವೇ, ಪೋಡಿ ಸೇರಿ ನಾನಾ ಕೆಲಸಗಳು ಬಾಕಿ ಉಳಿದಿವೆ ಎನ್ನುತ್ತಾರೆ ಎ.ಡಿ.ಎಲ್.ಆರ್. ಎನ್.ವಿ.ಗೋಪಾಲ.ನ್ಯಾಯಯುತವಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯಾದ್ಯಂತ ಪರವಾನಗಿ ಭೂಮಾಪಕರು ನಡೆಸುತ್ತಿರುವ ಶಾಂತಿಯುತ ಮುಷ್ಕರವನ್ನು ಹತ್ತಿಕ್ಕುವ ಪ್ರಯತ್ನ ಇಲಾಖೆಯಿಂದ ನಡೆಯುತ್ತಿದ್ದು, ಇದರ ಭಾಗವಾಗಿ ಜಿಲ್ಲಾ ಭೂಮಾಪನ ಇಲಾಖೆಯ ಉಪನಿರ್ದೇಶಕರು ನನ್ನನ್ನು ಅಮಾನತು ಮಾಡಿ ಶೋಷಣೆ ಮಾಡಿದ್ದಾರೆ. ಕೂಡಲೇ ಅಮಾನತು ಆದೇಶ ರದ್ದುಗೊಳಿಸುವಂತೆ ನಾವೆಲ್ಲರೂ ಸಭೆ ಸೇರಿ ಒತ್ತಾಯಿಸಿದ್ದೇವೆ ಎಂದು ಉಕ ಪರವಾನಗಿ ಭೂಮಾಪಕರ ಸಂಘದ ಜಿಲ್ಲಾಧ್ಯಕ್ಷ ಸೂರಜ್ ತಲಗೇರಿ ತಿಳಿಸಿದ್ದಾರೆ.