ಸಾರಾಂಶ
ಬೈಲಹೊಂಗಲ : ರಾಜ್ಯದಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿದ್ದು, ಡೆಂಘೀ ಜ್ವರ ವ್ಯಾಪಕವಾಗಿ ಹರಡಿ ವಿವಿಧೆಡೆ ಸಾವು ಸಂಭವಿಸುತ್ತಿವೆ. ಆದ್ದರಿಂದ 8 ವರ್ಷದ ಮೇಲ್ಪಟ್ಟ ಮಕ್ಕಳಿಗೆ ಕಡ್ಡಾಯವಾಗಿ ಡೆಂಘೀ ಪ್ರತಿಬಂಧಕ ಲಸಿಕೆ ಹಾಕಿ ಮುಂಜಾಗ್ರತೆ ವಹಿಸಬೇಕು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಹೇಳಿದರು.
ಮಲ್ಲಮ್ಮನ ಬೆಳವಡಿಯ ಈಶಪ್ರಭು ಶಿಕ್ಷಣ ಸಂಸ್ಥೆಯ ರಾಣಿ ಮಲ್ಲಮ್ಮ ಸಂಯುಕ್ತ ಪದವಿ ಪೂರ್ವ ಮತ್ತು ಪ್ರೌಢ, ಪ್ರಾಥಮಿಕ ಶಾಲೆಯಲ್ಲಿ ಡೆಂಘೀ ಪ್ರತಿಬಂಧಕ ಲಸಿಕಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು. ಮಾರಕ ಸೊಳ್ಳೆ ಕಡಿತದಿಂದ ಡೆಂಘೀ ಜ್ವರ ಹರಡುತ್ತಿದ್ದು, ಮನೆ ಮುಂದೆ ಮತ್ತು ಇತರೆಡೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಎಂ.ಕಾಡೇಶನವರ ಮಾತನಾಡಿದರು. ಪ್ರಮುಖರಾದ ಶ್ರೀಶೈಲ ಎಡಳ್ಳಿ, ನಿಂಗಪ್ಪ ಚೌಡಣ್ಣವರ, ಮಡಿವಾಳಪ್ಪ ಹೋಟಿ, ಆನಂದ ಮೂಗಿ, ಅಶೋಕ ಮಾರಿಹಾಳ, ಎನ್.ಎಂ.ಕರೀಕಟ್ಟಿ, ಚಂದನ ಕೌಜಲಗಿ, ಆದರ್ಶ ಗುಂಡಗೋವಿ, ಎಂ.ಪಿ.ಉಪ್ಪಿನ, ರಾಜು ದಳವಾಯಿ ಮತ್ತಿತರರು ಉಪಸ್ಥಿತರಿದ್ದರು.
ದೊಡವಾಡ ಗ್ರಾಮದ ಶ್ರೀ ವೀರಭದ್ರೆಶ್ವರ ಪ್ರೌಢ ಮತ್ತು ಪ್ರಾಥಮಿಕ ಹಾಗೂ ಜ್ಞಾನ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಗಳಲ್ಲೂ ಕೂಡ ಡಾ.ವಿಶ್ವನಾಥ ಪಾಟೀಲರಿಂದ ಡೆಂಘೀ ಪ್ರತಿಬಂಧಕ ಲಸಿಕೆ ನೀಡುವ ಶಿಬಿರಕ್ಕೆ ಚಾಲನೆ ನೀಡಲಾಯಿತು. ವಿಜ್ಞಾನ ಶಿಕ್ಷಕ ಕೆ.ಬಿ.ಕಡೆಮನಿ ಡೆಂಘೀ ಪ್ರಮುಖ ಲಕ್ಷಣಗಳು ಮತ್ತು ಅದು ಬರದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರಿಸಿದರು. ಮುಖ್ಯ ಶಿಕ್ಷಕಿ ಬಿ.ಆರ್.ಹುತಮಲ್ಲಮನವರ, ದೈಹಿಕ ಶಿಕ್ಷಕ ಎಂ.ಸಿ.ಸಂಗೊಳ್ಳಿ ಮತ್ತು ಶಿಕ್ಷಕ ಶಿಕ್ಷಕಿಯರು ಪಾಲ್ಗೊಂಡಿದ್ದರು.