ರೇಬಿಸ್‌ ಹರಡದಂತೆ ಲಸಿಕೆಯೇ ಮದ್ದು

| Published : Nov 13 2025, 12:15 AM IST

ಸಾರಾಂಶ

ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಸೋಂಕಿಗೆ ಯಾವುದೇ ಔಷಧವಿಲ್ಲ. ಜತೆಗೆ ಇದು ಮಾರಣಾಂತಿಕವಾಗಿದೆ. ಆದ್ದರಿಂದ ನಾಯಿ ಕಡಿದರೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ವೈದ್ಯರಾದ ಡಾ. ನಿಧಾ ಮಾಹಿತಿ ನೀಡಿದರು. ಪುರಸಭೆಯ ಪರಿಸರ ಎಂಜಿನಿಯರ್ ರುಚಿದರ್ಶಿನಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ೫ ಸಾವಿರಕ್ಕೂ ಹೆಚ್ಚು ಬೀದಿನಾಯಿಗಳು ಇದ್ದು, ವಾರಕ್ಕೆ ಒಮ್ಮೆ ೧೨೦ ರಿಂದ ೧೫೦ ನಾಯಿಗಳಿಗೆ ಚುಚ್ಚುಮದ್ದು ನೀಡಲಾಗುತ್ತದೆ ಮತ್ತು ೬ ತಿಂಗಳಿಗೆ ಒಮ್ಮೆ ಚುಚ್ಚುಮದ್ದು ನೀಡಬೇಕಿರುವ ಕಾರಣದಿಂದ ಆ್ಯಂಟಿ - ರೇಬಿಸ್ ಲಸಿಕೆ, ಹುಚ್ಚು ನಾಯಿ ರೋಗದ ಲಸಿಕೆ ನೀಡುವ ಯೋಜನೆ ನಿರಂತರವಾಗಿರುತ್ತೆ ಎಂದು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ ನಾಯಿ ಕಡಿತದಿಂದ ಉಂಟಾಗುವ ರೇಬಿಸ್ ಸೋಂಕಿಗೆ ಯಾವುದೇ ಔಷಧವಿಲ್ಲ. ಜತೆಗೆ ಇದು ಮಾರಣಾಂತಿಕವಾಗಿದೆ. ಆದ್ದರಿಂದ ನಾಯಿ ಕಡಿದರೂ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಲು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಎಂದು ಪಶುಸಂಗೋಪನೆ ಇಲಾಖೆ ವೈದ್ಯರಾದ ಡಾ. ನಿಧಾ ಮಾಹಿತಿ ನೀಡಿದರು.

ಪಟ್ಟಣದ ಮಹಾತ್ಮ ಗಾಂಧಿ ವೃತ್ತದ ಸಮೀಪ ರಾಷ್ಟ್ರೀಯ ನಾಗರಿಕ ಹೆಮ್ಮೆಯ ದಿನದ ಪ್ರಯುಕ್ತ ಮಂಗಳವಾರ ಪುರಸಭೆ, "ಕೇರ್‌ ಆಫ್ ವಾಯ್ಸ್‌ಲೆಸ್ ಅನಿಮಲ್ಸ್ " ಟ್ರಸ್ಟ್ ಮತ್ತು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಸಹಯೋಗದಲ್ಲಿ ರೇಬಿಸ್‌ ನಿರ್ಮೂಲನಾ ಯೋಜನೆಯಡಿ ಬೀದಿ ನಾಯಿಗಳಿಗೆ ಉಚಿತ ಆ್ಯಂಟಿ - ರೇಬಿಸ್ ಲಸಿಕೆ, ಹುಚ್ಚುನಾಯಿ ರೋಗದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಪಶು ಆಸ್ಪತ್ರೆಯಲ್ಲಿ ಸಾಕು ಪ್ರಾಣಿಗಳಿಗೆ ಈ ಚುಚ್ಚುಮದ್ದು ನೀಡಲಾಗುತ್ತಿದ್ದು, ನಾಗರಿಕರು ಇದರ ಸದುಪಯೋಗ ಪಡೆಯಬೇಕೆಂದು ಸಲಹೆ ನೀಡಿದರು.

ಪುರಸಭೆಯ ಪರಿಸರ ಎಂಜಿನಿಯರ್ ರುಚಿದರ್ಶಿನಿ ಮಾತನಾಡಿ, ಪುರಸಭೆ ವ್ಯಾಪ್ತಿಯಲ್ಲಿ ೫ ಸಾವಿರಕ್ಕೂ ಹೆಚ್ಚು ಬೀದಿನಾಯಿಗಳು ಇದ್ದು, ವಾರಕ್ಕೆ ಒಮ್ಮೆ ೧೨೦ ರಿಂದ ೧೫೦ ನಾಯಿಗಳಿಗೆ ಚುಚ್ಚುಮದ್ದು ನೀಡಲಾಗುತ್ತದೆ ಮತ್ತು ೬ ತಿಂಗಳಿಗೆ ಒಮ್ಮೆ ಚುಚ್ಚುಮದ್ದು ನೀಡಬೇಕಿರುವ ಕಾರಣದಿಂದ ಆ್ಯಂಟಿ - ರೇಬಿಸ್ ಲಸಿಕೆ, ಹುಚ್ಚು ನಾಯಿ ರೋಗದ ಲಸಿಕೆ ನೀಡುವ ಯೋಜನೆ ನಿರಂತರವಾಗಿರುತ್ತೆ ಎಂದು ಮಾಹಿತಿ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಶಿವಶಂಕರ್, ವ್ಯವಸ್ಥಾಪಕಿ ಪಂಕಜಾ, ಅಧಿಕಾರಿ ರಮೇಶ್, ಆರೋಗ್ಯಾಧಿಕಾರಿ ವಸಂತ್, ಮೇಸ್ತ್ರಿ ಚಲುವ, ಮಾದಯ್ಯ, ನಾಗಮ್ಮ, ಕಿರಣ್ ಇತರರು ಇದ್ದರು.