ಸಾರಾಂಶ
- ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ.ಸಿ.ಜಿ. ಉಷಾದೇವಿ ಅಭಿಮತ
- ಶರಣು ದಿನಚರಿ, ಬಸವಭಾನು ಸಂಚಿಕೆ, ಶರಣ ಸೌರಭ ಕೃತಿ ಬಿಡುಗಡೆ- ಸಾಧಕರಿಗೆ ವಿವಿಧ ಪ್ರಶಸ್ತಿಗಳ ಪ್ರದಾನ---
ಕನ್ನಡಪ್ರಭ ವಾರ್ತೆ ಮೈಸೂರುವಚನ ಸಾಹಿತ್ಯಕ್ಕೆ ಇಡೀ ವಿಶ್ವವನ್ನು ಪ್ರಭಾವಿಸುವ ಶಕ್ತಿ ಇದೆ ಎಂದು ಟಿ. ನರಸೀಪುರ ವಿದ್ಯೋದಯ ಕಾಲೇಜಿನ ನಿವೃತ್ತ ಪ್ರಾಧ್ಯಾಪಕಿ, ಲೇಖಕಿ ಡಾ.ಸಿ.ಜಿ. ಉಷಾದೇವಿ ಹೇಳಿದರು.
ನಗರದ ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಶ್ರೀ ನಟರಾಜ ಸಭಾಭವನದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 2024ರ ಶರಣು ದಿನಚರಿ, ಬಸವಭಾನು ಸಂಚಿಕೆ ಮತ್ತು ಶರಣ ಸೌರಭ ಕೃತಿ ಬಿಡುಗಡ, ರಾಜ್ಯಮಟ್ಟದ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ, ಆದರ್ಶ ಶರಣ ದಂಪತಿ ಕಾಯಕಯೋಗಿ, ಕಾಯಕ ರತ್ನ, ಶರಣ ಶಾಂತರಸ, ವಚನ ಸೇವಾರತ್ನ ಮತ್ತು ವಚನ ಕೋಗಿಲೆ ಪ್ರಶಸ್ತಿ ಪ್ರದಾನ ಹಾಗೂ ಅಂತರ್ಜಾಲ ವಚನ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಸಂಸ್ಥೆಯ ದತ್ತಿದಾಸೋಹಿಗಳು, ಆಜೀವ ಸದಸ್ಯರು, ಪ್ರೋತ್ಸಾಹದಾಯಕರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.ವಚನ ಸಾಹಿತ್ಯಕ್ಕೆ ಅನೇಕ ಸಮಸ್ಯೆಗಳನ್ನು ನಿವಾರಿಸುವ ಶಕ್ತಿ ಇದೆ. ಅದಕ್ಕೆ ಯಾವತ್ತೋ ವಿಶ್ವಮಟ್ಟಕ್ಕೆ ಏರಬೇಕಿತ್ತು. ಅದು ವಿಳಂಬವಾಗಿದೆ.ಆದರೆ ಹನ್ನೆರಡನೇಯ ಶತಮಾನದಲ್ಲಿ ಬಸವಾದಿ ಪ್ರಮಥರಿಂದ ರಚನೆಯಾದ ವಚನ ಸಾಹಿತ್ಯ ಇಂದಿಗೂ ಪ್ರಸ್ತುತವಾಗಿದೆ. ಲೋಕ ಕಲ್ಯಾಣದ ಗುಣಗಳಿರುವುದು ಇದಕ್ಕೆ ಕಾರಣ. ಆದ್ದರಿಂದ ಪ್ರತಿಯೊಬ್ಬರೂ ಪ್ರತಿದಿನ, ಪ್ರತಿಕ್ಷಣ ವಚನ ಸಾಹಿತ್ಯವನ್ನು ನೆನಯಬೇಕು ಎಂದರು.
ವಚನ ಸಾಹಿತ್ಯ, ಶರಣ ಸಾಹಿತ್ಯಕ್ಕೆ ಉತ್ತರ ಕರ್ನಾಟಕ ಸಾಧನಾ ಭೂಮಿಯಾಗಿತ್ತು. ಸತ್ಯಶೋಧನೆಗೆ ಒತ್ತುಕೊಟ್ಟು ಅವರು ಸಾಹಿತ್ಯ ರಚಿಸಿದರು. ಶರಣಧರ್ಮದ ಸಾರವನ್ನು ಪ್ರತಿಯೊಬ್ಬರೂ ಅರ್ಥೈಸಿಕೊಂಡು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಹೈಕೋರ್ಟಿನ ವಿಶ್ರಾಂತ ನ್ಯಾಯಮೂರ್ತಿ ಅರಳಿ ನಾಗರಾಜ ಮಾತನಾಡಿ, ಪ್ರತಿಯೊಬ್ಬರಿಗೂ ಸಂಸ್ಕಾರ ಮುಖ್ಯ. ಬಸವಣ್ಣ ಅವರನ್ನು ಯಾರಿಗೂ ಹೊಲಿಕೆ ಮಾಡಲಾಗದು. ಇನ್ನೊಬ್ಬ ಬಸವಣ್ಣ ಮತ್ತೆ ಸಿಗಲಾರರು ಎಂದರು.
ಬಸವಣ್ಣ, ಚನ್ನಬಸವಣ್ಣ, ಅಕ್ಕಮಹಾದೇವಿ ಜೊತೆಗೆ ಇತ್ತೀಚಿನ ಸಾಧಕರನ್ನು ಗುರುತಿಸಿ, ಪುಸ್ತಕ ಪ್ರಕಟಿಸುವ ಮೂಲಕ ಜನಜಾಗೃತಿ ಮೂಡಿಸಬೇಕು. ಮಹಾತ್ಮಗಾಂಧಿ, ಸರ್ ಎಂ. ವಿಶ್ವೇಶ್ವರಯ್ಯ, ಅಣ್ಣಾ ಹಜಾರೆ ಮೊದಲಾದವರ ಬಗ್ಗೆಯೂ ತಿಳಿಸಿಕೊಡಬೇಕು. ಇಲ್ಲದಿದ್ದಲ್ಲಿ ಯುವಪೀಳಿಗೆಗೆ ಇವರ ಬಗ್ಗ ಅರಿವಿರುವುದಿಲ್ಲ ಎಂದರು.ಪ್ರಾಮಾಣಿಕ ರಾಜಕಾರಣಿಗಳನ್ನು ಗುರುತಿಸಿ, ಗೌರವಿಸುವ ಕೆಲಸ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಶ್ರೀ ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ದಿನಚರಿ, ಶರಣ ಸೌರಭ ಕೃತಿ ಬಿಡುಗಡೆ ಮಾಡಿದರು. ಪ್ರಶಸ್ತಿ ಪುರಸ್ಕೃತರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.ಫೌಂಡೇಷನ್ ಅಧ್ಯಕ್ಷ ವಚನ ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ರೂಪಾ ಕುಮಾರಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡಿದರು. ಜಿಲ್ಲಾಧ್ಯಕ್ಷ ಅನಿಲ್ಕುಮಾರ್ ವಾಜಂತ್ರಿ ಕಾರ್ಯಕ್ರಮ ನಿರೂಪಿಸಿದರು. ವಚನ ಚೂಡಾಮಣಿ ಪ್ರಾರ್ಥಿಸಿದರು. ಅನಿತಾ ನಾಗರಾಜ್ ವಂದಿಸಿದರು.
ಸಮಾರೋಪ ಸಮಾರಂಭದಲ್ಲಿ ಶ್ರೀ ಇಮ್ಮಡಿ ಗುರುಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಡಿಡಿಪಿಐ ಸ್ವಾಮಿ, ಪಿ. ನಿಂಗಪ್ಪ ಮೊದಲಾದವರು ಭಾಗವಹಿಸಿದ್ದರು.----------
ಬಾಕ್ಸ್....--
ವಿವಿಧ ಪ್ರಶಸ್ತಿಗಳ ಪ್ರದಾನ25 ಎಂವೈಎಸ್ 8
ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಹಿರಿಯ ಪಕ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ವಚನ ಭಂಡಾರಿ ಶರಣ ಶಾಂತರಸ ಪ್ರಶಸ್ತಿ ಪ್ರದಾನ ಮಾಡಲಾಯಿತು.------
ಈ ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರಿಗೆ ಶರಣ ಶಾಂತರಸ, ಡಾ.ಸಿ.ಜಿ. ಉಷಾದೇವಿ ಅವರಿಗೆ ಕಾಯಕರತ್ನ, ಅಪರ್ಣ ಶಿವಕುಮಾರ್ ಮತ್ತು ಎಂ. ಶಿವಕುಮಾರ್ ಅವರಿಗೆ ಕಾಯಕಯೋಗಿ, ಹೈದರಾಬಾದಿನ ಟಿ.ಎಸ್. ಬಸವಕೇಂದ್ರದ ಅಧ್ಯಕ್ಷ ಜಗದೇವಿ ಮಶಸ್ತೆ ಮತ್ತು ಡಾ. ನಾಗನಾಥ್ ಮಶತ್ತೆ, ಮೈಸೂರಿನ ಯು.ಎಂ. ಉಮಾ ಮಹದೇವಸ್ವಾಮಿ ಮತ್ತು ಕೆ.ಜಿ. ಮಹದೇವಸ್ವಾಮಿ, ನಿವೃತ್ತ ಶಿಕ್ಷಕ ನಾಗಮ್ಮ ಮತ್ತು ಎಂ. ಜಡೆ ಮಾದಪ್ಪ ಅವರಿಗೆ ಆದರ್ಶ ಶರಣ ದಂಪತಿ, ಯು.ಎಂ. ಉಮಾ ಮಹದೇವಸ್ವಾಮಿ ಅವರಿಗೆ ವಚನ ಕೋಗಿಲೆ, ನೀಲಾಂಬಿಕೆ ಅವರಿಗೆ ವಚನ ಸೇವಾರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಬೆಂಗಳೂರಿನ ಪ್ರೊ.ಕೆ.ಎಂ. ಮಹದೇವಪ್ಪ, ಜಮಖಂಡಿಯ ಡಾ.ಲಿಂಗಾನಂದ ಕೊಟ್ರಯ್ಯ ಗವಿಮಠ, ಸಿಂಗಟಗೆರೆಯ ಡಾ.ಬಿ.ವಿ. ಮಂಜುನಾಥ, ಮಂಗಳೂರಿನ ಬಿ.ಪಿ. ಗಿರೀಶ್ ಬಾಬು, ಚಿಕ್ಕಬಳ್ಳಾಪುರದ ಎನ್. ಲಕ್ಷ್ಮೀದೇವಿ, ಹುಲ್ಲೇಗೌಡನ ಹಳ್ಳಿಯ ಜಿ.ಎಸ್. ಸಂಪತ್ಕುಮಾರ್, ಅರೇಹಳ್ಳಿಯ ಎಂ. ಗೀತಾ, ಕುಂಬಾರಕೊಪ್ಪಲಿನ ಲೋಹಿತೇಶ್, ಭಾರತೀಪುರದ ಎಂ.ಸಿ. ಲೋಕೇಶ್, ಅರೆಬೈಲ್ನ ಶಿವಲೀಲಾ ಹುಣಸಗಿ, ಹುತ್ತೂರಿನ ಕೆ.ವಿ. ವಿಜಯ, ರುದ್ರಪಟ್ಟಣದ ಹೊ.ರಾ. ಪರಮೇಶ್, ಜಮನಾಳ ತೋಟದ ಕಾಳಪ್ಪ ಈಶ್ವರಪ್ಪ ಬಡಿಗೇರ ಅವರಿಗೆ ಚಿನ್ಮಯಜ್ಞಾನಿ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಂತರ್ಜಾಲ ವಚನ ಗಾಯನ ಸ್ಪರ್ಧೆ ವಿಜೇತರಾದ ದಾವಣಗೆರೆಯ ಸುಶೀಲಾ ಗುರುಬಸವರಾಜ್, ಬೆಂಗಳೂರಿನ ಎನ್. ಖುಷಿಕ್, ಮೈಸೂರಿನ ಮೀನಾ ನಿರಂಜನ್ ಅವರಿಗೆ ಬಹುಮಾನ ವಿತರಿಸಲಾಯಿತು. ದತ್ತಿ ದಾಸೋಹಿಗಳು, ಆಜೀವ ಸದಸ್ಯರು, ಪ್ರೋತ್ಸಾಹದಾಯಕರನ್ನು ಗೌರವಿಸಲಾಯಿತು.