ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ

| Published : Jul 10 2024, 12:31 AM IST

ಸಾರಾಂಶ

ರಾಮನಾಥಪುರ ಶ್ರೀ ವಿದ್ಯಾನಿಕೇತನ ಶಾಲೆ ಸಭಾಂಗಣದಲ್ಲಿ ವಿದ್ಯಾರ್ಥಿಗಳಿಗೆ ವಚನ ಕಂಠಪಾಠ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 12ನೇ ಶತಮಾನದ ವಚನಕಾರರ ಸಾವಿರಾರು ವಚನಗಳು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಉಳಿದಿವೆ. ವಚನಗಳನ್ನು ಮುದ್ರಿಸುವುದಕ್ಕಾಗಿ ಅವುಗಳ ಪ್ರಚಾರಕ್ಕಾಗಿ ತಮ್ಮ ಮನೆಯನ್ನು ಕೂಡ ಮಾರಾಟ ಮಾಡಿ ಶರಣ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಸದಾಶಿವ ಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

12ನೇ ಶತಮಾನದ ಶಿವಶರಣರ ಧಾರ್ಮಿಕ ಚಿಂತನೆಗಳನ್ನು ಈ ನಾಡಿನ ಉದ್ದಗಲಕ್ಕೂ ತಲುಪಿಸುವ ಕಾರ್ಯವನ್ನು ಸುತ್ತೂರು ಮಠ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಬಸವಕಲ್ಯಾಣ ಶಿರದನಹಳ್ಳಿ ಬಸವಕಲ್ಯಾಣ ಮಠದ ಸದಾಶಿವ ಸ್ವಾಮೀಜಿ ತಿಳಿಸಿದರು.

ರಾಮನಾಥಪುರ ಶ್ರೀ ವಿದ್ಯಾನಿಕೇತನ ಶಾಲೆ ಸಭಾಂಗಣದಲ್ಲಿ ನಡೆದ ವಚನ ಕಂಠಪಾಠ ಸ್ಪರ್ಧೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ತಮಗಾಗಿ ಏನೊಂದನ್ನು ಬಯಸದೆ ಪರರ ಹಿತಕ್ಕಾಗಿ ದುಡಿಯುವುದೇ ನಿಸ್ವಾರ್ಥ ಸೇವೆ. ಅಂತಹ ನಿಸ್ವಾರ್ಥ ಸೇವಕರಾಗಿದ್ದ ವಚನ ಪಿತಾಮಹ ಫ.ಗು. ಹಳಕಟ್ಟಿಯವರು ವಚನ ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟಿರುವ ಕೊಡುಗೆ ಅಪಾರ ಕೊಡುಗೆ ಎಂದರು.

ರಾಜ್ಯ ಕದಳಿ ಮಹಿಳಾ ವೇದಿಕೆ ರಾಜ್ಯ ಸಂಚಾಲಕಿ ಸುಶೀಲ ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಫ.ಗು.ವ ಹಳ್ಳಿಕಟ್ಟಿ ಅವರು ವಚನ ಸಾಹಿತ್ಯದ ಮಹಾ ಸಂಶೋಧಕರಾಗಿದ್ದರು, ಪರಿಚಾರಕರಾಗಿದ್ದರು. ಇವರ ಈ ಸಂಶೋಧನಾ ಕ್ಷೇತ್ರದ ಮೂಲಕ 12ನೇ ಶತಮಾನದ ವಚನಕಾರರ ಸಾವಿರಾರು ವಚನಗಳು ಕನ್ನಡ ಸಾಹಿತ್ಯಕ್ಕೆ ಕೊಡುಗೆಯಾಗಿ ಉಳಿದಿವೆ. ವಚನಗಳನ್ನು ಮುದ್ರಿಸುವುದಕ್ಕಾಗಿ ಅವುಗಳ ಪ್ರಚಾರಕ್ಕಾಗಿ ತಮ್ಮ ಮನೆಯನ್ನು ಕೂಡ ಮಾರಾಟ ಮಾಡಿ ಶರಣ ಸಾಹಿತ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಇವರ ಶರಣ ಸಾಹಿತ್ಯ ಆಸಕ್ತಿಯು ಇಂದು ಮತ್ತು ಎಂದೆಂದಿಗೂ ವಚನ ಸಾಹಿತ್ಯಾಸಕ್ತರಿಗೆ ಮಹಾಪ್ರೇರಕರಾಗಿವೆ. ಅವರ ಆತ್ಮಬಲದಿಂದ ಮನೋಸ್ಥೈರ್ಯದಿಂದ ಬಡತನವನ್ನು ಲೆಕ್ಕಿಸದೆ ಸುಮಾರು 35 ವರ್ಷಗಳ ಕಾಲ ವಚನ ಸಾಹಿತ್ಯಕ್ಕೆ ತಮ್ಮ ಬದುಕನ್ನು ಮೀಸಲಿಟ್ಟು ಮನಮುಟ್ಟಿ ದುಡಿದ ಫ.ಗು.ಹಳಕಟ್ಟಿಯವರನ್ನು ವಚನ ಪಿತಾಮಹ ಎಂದು ಗುರುತಿಸಿರುವುದು ಒಂದು ಕಾಲದ ಮಹಾನ್ ವ್ಯಕ್ತಿಯ ಸಾಧನೆಯ ಸಂಕೇತವೇ ಆಗಿದೆ ಎಂದು ಸುಶೀಲಾ ಸೋಮಶೇಖರ್ ತಿಳಿಸಿದರು.

ಶರಣ ಸಾಹಿತ್ಯ ಪರಿಷತ್ತಿನ ಸಾಹಿತಿಗಳು ಸೀಬಹಳ್ಳಿ ಸೋಮಶೇಖರ್ ಮಾತನಾಡಿ, 12ನೇ ಶತಮಾನದ ಶಿವಶರಣರ ಆದರ್ಶ ತತ್ವ ಇವಳನ್ನು ಇಂದಿನ ಪೀಳಿಗೆ ಅಳವಡಿಸಿಕೊಂಡು ನಡೆಯುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಪ್ರಸ್ತಾವಕವಾಗಿ ಮಾತನಾಡಿದರು. ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ವಿರೂಪಾಕ್ಷ ಅಧ್ಯಕ್ಷತೆ ವಹಿಸಿದ್ದರು. ದತ್ತಿ ದಾನಿಗಳಾದ ಪಶುಪತಿ ಸೋಮಶೇಖರ್, ಶರಣ ಸಾಹಿತ್ಯ ಪರಿಷತು ಯುವ ಘಟಕದ ಅಧ್ಯಕ್ಷ ಬೇಲೂರು ಕುಮಾರ್, ಅರಕಲಗೂಡು ನೂತನ ಪರಿಷತ್ತಿನ ಅಧ್ಯಕ್ಷರಾದ ಅಮೃತೇಶ್ ಹೊಳೆನರಸೀಪುರ ತಾಲೂಕು ಪರಿಷತ್ತಿನ ಅಧ್ಯಕ್ಷ, ಎಚ್. ಎನ್. ಪ್ರಸಾದ್, ಕಾರ್ಯದರ್ಶಿ ಬಡಕ್ಯಾತನಹಳ್ಳಿ ಚಿದನಂದ್, ಘಟಕದ ಅಧ್ಯಕ್ಷ ವಿನಯ್ ಕಾರ್ಯದರ್ಶಿ ಶ್ರೀನಿವಾಸ್ ಮುಖ್ಯ ಶಿಕ್ಷಕರು ರಾಜಣ್ಣ , ಸದಸ್ಯರು ತೇಜೂರು ಪ್ರಶಾಂತ್, ಹಾನಗಲ್ ಚಂದ್ರಶೇಖರ್ ಮುಂತಾದವರಿದ್ದರು.