ಸಾರಾಂಶ
ವಚನ ಚಳವಳಿಯ ಜ್ಞಾನ ಕಾಯಕದಿಂದ ಬಂದಿದೆ. ಅದು ಪಾಂಡಿತ್ಯದಿಂದ ಬಂದಿಲ್ಲ. ಕಾಯಕದ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಬಸವಣ್ಣ ಪ್ರೇರಣೆ
ಕನ್ನಡಪ್ರಭ ವಾರ್ತೆ ಮೈಸೂರು
12ನೇ ಶತಮಾನದಲ್ಲಿ ಶುರುವಾದ ಬಸವ ಕ್ರಾಂತಿ ಇಂದಿಗೂ ಮುಂದುವರಿದಿದೆ. ಯಾವುದೇ ಕ್ರಾಂತಿಗೂ ಕೊನೆ ಇರಲ್ಲ. ಹಾಗೆಯೆ, ಬಸವ ಕ್ರಾಂತಿ ಸಹ ಸ್ತಬ್ಧವಾಗಿಲ್ಲ. ಅದು ನಿರಂತರವಾಗಿ ಸಾಗಿ ಚರಣಶೀಲಗೊಂಡಿದೆ. ಇನ್ನಷ್ಟು ಕ್ರಿಯಾಶೀಲವಾಗಿದೆ ಎಂದು ಆಧ್ಯಾತ್ಮಿಕ ಚಿಂತಕ ಶಂಕರ ದೇವನೂರು ತಿಳಿಸಿದರು.ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನ ವಿಸ್ತರಣ ಕೇಂದ್ರದಲ್ಲಿ ಗುರುವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು `ವಚನ ಜಿಜ್ಞಾಸೆ'''''''' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಚನ ಚಳವಳಿಯ ಜ್ಞಾನ ಕಾಯಕದಿಂದ ಬಂದಿದೆ. ಅದು ಪಾಂಡಿತ್ಯದಿಂದ ಬಂದಿಲ್ಲ. ಕಾಯಕದ ಮೂಲಕ ಸ್ವಾಭಿಮಾನ ಬದುಕು ಕಟ್ಟಿಕೊಳ್ಳಲು ಬಸವಣ್ಣ ಪ್ರೇರಣೆಯಾದರು. ಧ್ವನಿವಿಲ್ಲದವರಿಗೂ ಧ್ವನಿಯನ್ನು ಕಲ್ಪಿಸಿಕೊಟ್ಟರು. ಸಮಸಮಾಜ ಕಲ್ಪನೆ ಕೊಟ್ಟವರು. ಅವರು ತಮ್ಮ ಹುಟ್ಟಿನ ಧರ್ಮವನ್ನು ಪ್ರಶ್ನಿಸಿದರು, ತಿರಸ್ಕರಿಸಿದರು, ಅದಕ್ಕೆ ಪರ್ಯಾಯ ಸೂಚಿಸಿದರು. ಇದೀಗ ಯಾವುದಕ್ಕೂ ಪರ್ಯಾಯ ಇಲ್ಲ. ಅದಕ್ಕೆ ಸೋಲಾಗುತ್ತಿದೆ ಎಂದರು.ಬಸವಣ್ಣ ಅವರು ದಲಿತರ, ತಳ ಸಮುದಾಯದವರನ್ನು ಅಪ್ಪಿಕೊಂಡರು. ಈ ಸಮುದಾಯದವರು ಆತ್ಮಗೌರವದೊಂದಿಗೆ ಬದುಕು ಕಟ್ಟಿಕೊಳ್ಳಲು ಕಾರಣರಾದರು. ಆದಗೀರ ದಲಿತರನ್ನು ದೂರ ಇಟ್ಟು ಬದುಕಲಾಗುತ್ತಿದೆ. ಜಾತಿ, ಧರ್ಮ, ಕುಲಕ್ಕಾಗಿ ಬದುಕಲಾಗುತ್ತಿದೆ. ಸೇವೆ ಮತ್ತು ಬೇರೆಯವರಿಗೆ ಬದುಕುವುದಲ್ಲೇ ಸಾರ್ಥಕತೆ ಇದೆ ಎಂಬುದು ಮರೆಯಾಗಿದೆ. ಬದುಕು ಪ್ರದರ್ಶನವಾಗುತ್ತಿದೆಯೇ ಹೊರತು, ನಿದರ್ಶನವಾಗುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದರು.ವಚನಗಳು ನಿರಂತರವಾಗಿ ಬದಲಾವಣೆ ಕಂಡಿವೆ. ಕಾಲ, ವರ್ತನಮಾನದೊಂದಿಗೆ ಮಿಳಿತಗೊಂಡಿದೆ. ಬುದ್ಧ, ಬಸವಣ್ಣ ಕಾಲದ ಜ್ಞಾನ, ತಿಳವಳಿಕೆಗೆ ತಾತ್ವಿಕ ನೆಲೆಗಟ್ಟಿದೆ. ಹೀಗಾಗಿ, ವಿಜ್ಞಾನಿಗಳು ಇದನ್ನು ಪುರಸ್ಕರಿಸಿದ್ದಾರೆಯೇ ಹೊರತು, ತಿರಸ್ಕರಿಸಿಲ್ಲ. ಬಸವ ತತ್ವವನ್ನು ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಅಧ್ಯಯನ ಮಾಡಲಾಗುತ್ತದೆ. ಇದು ಸಾಧ್ಯವಾಗಿದ್ದು ಅದರಲ್ಲಿರುವ ವೈಜ್ಞಾನಿಕ ಚಿಂತನೆ ಎಂದು ಅವರು ಹೇಳಿದರು. ಬಸವ ಚಿಂತನೆ ನಿತ್ಯಹರಿದ್ವರ್ಣಸಾಹಿತಿ ಪ್ರೊ. ಅರವಿಂದ ಮಾಲಗತ್ತಿ ಮಾತನಾಡಿ, ಬಸವ ಚಿಂತನೆ, ಚಳವಳಿ ನಿತ್ಯಹರಿದ್ವರ್ಣ. ಅದು ಎಂದೂ ಮರೆಯಲಾಗದ ಆಲೋಚನೆ ಕ್ರಮ. 21ನೇ ಶತಮಾನದಲ್ಲಿ ಚಿಂತನೆಯನ್ನು 12ನೇ ಶತಮಾನದಲ್ಲೇ ಬಿತ್ತನೆ ಮಾಡಲಾಗಿದ್ದು, ಅದು ಸಂವಿಧಾನ ಎಂಬ ಭೋದಿವೃಕ್ಷದಡಿ ನಾವುಗಳು ಬದುಕು ಕಟ್ಟಿಕೊಳ್ಳಲು ಕಾರಣವಾಗಿದೆ ಎಂದರು.ಸದಾ ಕಾಲಕ್ಕೂ ಪ್ರಸ್ತುತವಾಗಿರುವ ಬಸವ ಚಿಂತನೆಯನ್ನು ಈಗಿನ ಸಮಾಜದಲ್ಲಿ ಪಾಲನೆಯಾಗುತ್ತಿದೆಯೇ? ಏನು ಸಾಧನೆ ಮಾಡಬೇಕಿತ್ತು ಅದು ಮಾಡಲೂ ಈಗಲೂ ಸಾಧ್ಯವಾಗಿಲ್ಲ. ಈ ವಿಷಯದಲ್ಲಿ ಸಮಾಜವೇ ಅಪ್ರಸ್ತುತವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ, ಡಾ.ಎಸ್.ಡಿ. ಶಶಿಕಲಾ, ಎಸ್. ದಿವ್ಯಶ್ರೀ, ಎಚ್.ಬಿ. ಅನಿತಾ ಮೊದಲಾದವರು ಇದ್ದರು.----ಬಾಕ್ಸ್...ಬಹುಮಾನ ವಿತರಣೆರಾಜ್ಯ ಮಟ್ಟದ ವಚನ ವಿಮರ್ಶೆ ಸ್ಪರ್ಧೆಯಲ್ಲಿ 33 ಅಭ್ಯರ್ಥಿಗಳು ಭಾಗಿಯಾಗಿದ್ದರು. ಸಿನಿಮಾ ನಿರ್ದೇಶಕ ಅಪೂರ್ವ ಡಿ ಸಿಲ್ವಾ (ಪ್ರಥಮ), ಸಹಾಯಕ ಪ್ರಾಧ್ಯಾಪಕಿ ಎಂ.ಎಸ್. ಸಂಧ್ಯಾರಾಣಿ (ದ್ವಿತೀಯ), ಹಾಸನದ ಶಿಕ್ಷಕಿ ಸಿ.ಎಚ್. ಮಂಜುಳಾ ಮತ್ತು ವಿದ್ಯಾರ್ಥಿ ತೇಜಸ್ (ತೃತೀಯ), ಹಂಪಿಯ ಪ್ರವೀಣ ನಿಂಗಪ್ಪ ಕಿತ್ತೂರು, ಯುವರಾಜ ಕಾಲೇಜಿನ ಎಂ. ಚೈತ್ರಾ, ಬೆಂಗಳೂರಿನ ಗೃಹಣಿ ಬಿಂದು ರಾಜ (ಸಮಾಧನಕರ) ಅವರಿಗೆ ನಗದು ಬಹುಮಾನ ನೀಡಲಾಯಿತು.