ಕನ್ನಡ ಭಾಷೆ ಹಾಗೂ ವಚನ ಸಾಹಿತ್ಯದಲ್ಲಿರುವ ಅಪಾರ ಜ್ಞಾನ ಸಂಪತ್ತನ್ನು ಬಳಸಿಕೊಂಡು ಸುಭದ್ರವಾಗಿ ದೇಶ ಕಟ್ಟಲು ಸಾಧ್ಯವಿದೆ ಎಂದು ಇಂಜಿನಿಯರ್ ಹಾವಶೆಟ್ಟಿ ಪಾಟೀಲ ನುಡಿದರು.
ಬೀದರ್: ಕನ್ನಡ ಭಾಷೆ ಹಾಗೂ ವಚನ ಸಾಹಿತ್ಯದಲ್ಲಿರುವ ಅಪಾರ ಜ್ಞಾನ ಸಂಪತ್ತನ್ನು ಬಳಸಿಕೊಂಡು ಸುಭದ್ರವಾಗಿ ದೇಶ ಕಟ್ಟಲು ಸಾಧ್ಯವಿದೆ ಎಂದು ಇಂಜಿನಿಯರ್ ಹಾವಶೆಟ್ಟಿ ಪಾಟೀಲ ನುಡಿದರು.ವಚನಾಮೃತ ಕನ್ನಡ ಸಂಘದಿಂದ ಇತ್ತಿಚೆಗೆ ಆಯೋಜಿಸಲಾದ ನಿಜ ಶರಣ ಅಂಬಿಗರ ಚೌಡಯ್ಯ ಹಾಗೂ ವಚನ ಪಿತಾಮಹ ಫ.ಗು.ಹಳಕಟ್ಟಿಯವರ ಕುರಿತಾದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.ಅಂಬಿರ ಚೌಡಯ್ಯನವರ ಕುರಿತು ಮಾತನಾಡಿದ ಬಸವರಾಜ ಮೂಲಗೆ ಅವರು ಅಂಬಿಗರ ಚೌಡಯ್ಯನವರು ಡಾಂಭಿಕ ಭಕ್ತರನ್ನು, ಜಾತಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿ ಮಹತ್ವದ 270 ವಚನಗಳನ್ನು ರಚಿಸಿದ್ದಾರೆ ಎಂದು ನುಡಿದರು.ಮನುಷ್ಯ ಯಾವತ್ತು ಆಂತರಿಕ ಶುದ್ಧಿಗೆ ಮಹತ್ವ ಕೊಡಬೇಕೇ ಹೊರತು ದೈಹಿಕ ಸೌಂದರ್ಯಕ್ಕಲ್ಲ ಎಂದು ಅಂಬಿಗರ ಚೌಡಯ್ಯನವರ ವಿಚಾರವಾಗಿತ್ತು ಎಂದು ಮೂಲಗೆ ಹೇಳಿದರು.ವಚನ ಪಿತಾಮಹ ಫ.ಗು. ಹಳಕಟ್ಟಿ ಅವರ ಬಗ್ಗೆ ಶೈಲಜಾ ಹುಡಗೆ ಉಪನ್ಯಾಸ ನೀಡಿ, ಹಳಕಟ್ಟಿಯವರು ಆಶ್ರಯ ನೀಡಿದ ಸ್ವಂತ ಮನೆಯನ್ನು ಮಾರಿ ಮುದ್ರಣಾಲಯ ಸ್ಥಾಪಿಸಿ, ವಚನಗಳ ಮುದ್ರಣ ಮಾಡಿ ಲೋಕಾರ್ಪಣೆಗೊಳಿಸಿದರು. ಹರಿಹರನ 42 ರಗಳೆಗಳನ್ನು ಮೊದಲು ಪ್ರಕಟಿಸಿದವರು ಹಳಕಟ್ಟಿಯವರು ಎಂದು ಹೇಳಿದರು.ವೀರಕುಮಾರ ಮಜಗೆ ವಚನಾಮೃತ ಕನ್ನಡ ಸಂಘದ ಬೆಳವಣಿಗೆಗೆ ಪೂರ್ಣಪ್ರಮಾಣದಲ್ಲಿ ಸಹಕಾರ ನೀಡುತ್ತೇನೆ ಎಂದು ಹೇಳಿದರು. ಸಂಗಮೇಶ ನಾಶಿಗಾರ, ಶಾಂತಕುಮಾರ ಶೆಟಕಾರ ಮತನಾಡಿದರು. ಪ್ರೊ: ಸಿದ್ರಾಮಪ್ಪಾ ಮಾಸಿಮಾಡೆ ಅಧ್ಯಕ್ಷತೆ ವಹಿಸಿದರು. ರೇಣುಕಾ ಎನ್.ಬಿ.,ಬಸವರಾಜ ಮಳ್ಳಿ, ರೇಣುಕಾ ಮಳ್ಳಿ, ಪ್ರೊ. ಬಸವರಾಜ ಎಸ್.ಬಿರಾದಾರ, ಅಂಬಿಕಾ ಬಿರಾದಾರ, ಆಶಾ ಕೋಟೆ ಇದ್ದರು.