ವಚನ ಸಾಹಿತ್ಯ, ಶರಣ ಸಂಸ್ಕೃತಿ ಜೀವನಕ್ಕೆ ಅಗತ್ಯ

| Published : Jul 01 2024, 01:46 AM IST

ವಚನ ಸಾಹಿತ್ಯ, ಶರಣ ಸಂಸ್ಕೃತಿ ಜೀವನಕ್ಕೆ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಜನರಿಗೆ ಸಾಹಿತ್ಯ ತಲುಪಿಸುವ ಕಾರ್ಯ ಮಾಡುತ್ತಿದೆ ಕಸಾಪ: ಸುಭಾಷ ಛಾಯಾಗೋಳ

ಕನ್ನಡಪ್ರಭ ವಾರ್ತೆ ವಿಜಯಪುರ

ವಚನ ಸಾಹಿತ್ಯ ಹಾಗೂ ಶರಣ ಸಂಸ್ಕೃತಿ ಇಂದಿನ ಜೀವನಕ್ಕೆ ತೀರಾ ಅಗತ್ಯವಾಗಿದೆ ಎಂದು ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸುಭಾಷ ಛಾಯಾಗೋಳ ಹೇಳಿದರು.

ನಗರದ ಜಿಲ್ಲಾ ಕಸಾಪ ಸಭಾಂಗಣದಲ್ಲಿ ಜಿಲ್ಲಾ, ತಾಲೂಕು, ನಗರ ಘಟಕ ಕಸಾಪದಿಂದ ನಡೆದ ದತ್ತಿನಿಧಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಯಾಂತ್ರಿಕ ಯುಗದಲ್ಲಿಯೂ ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸುವ ಕೆಲಸ ಕಸಾಪ ಮಾಡುತ್ತಿದೆ. ಗಡಿನಾಡಲ್ಲಿ ಕನ್ನಡ ಸಾಹಿತ್ಯವನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯ ಗಡಿನಾಡ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ. ಕನ್ನಡ ಪರ ಕೆಲಸ ಮಾಡಿದ ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಬೆಳವಣಿಗೆಗೆ ಕಾರಣವಾಗಿದೆ ಎಂದರು.

ವಿಶ್ರಾಂತ ಪ್ರಾಚಾರ್ಯ ಪ್ರೊ.ದೊಡ್ಡಣ್ಣ ಭಜಂತ್ರಿ ಮಾತನಾಡಿ, ವಚನಗಳಿಗೆ ಮನ ಪರಿವತ೯ನೆ ಮಾಡುವ ಶಕ್ತಿಯಿದೆ. ಕಾಯಕ ಮತ್ತು ದಾಸೋಹ ವಚನ ಸಾಹಿತ್ಯದ ಶ್ರೇಷ್ಠ ಸಿದ್ಧಾಂತಗಳು ಎಂದರು.

ಶರಣ ಚಿಂತಕ ಎಂ.ಬಿ ಕಟ್ಟಿಮನಿ ಮಾತನಾಡಿ, ವಚನ ಸಾಹಿತ್ಯ ಅಮೂಲ್ಯವಾದುದು.ಸಾಮಾನ್ಯ ವ್ಯಕ್ತಿಗಳು ಕೂಡ ಸಾಹಿತ್ಯ ರಚಿಸುವಂತೆ ಪ್ರೇರಣೆ ನೀಡಿದ್ದು ವಚನ ಸಾಹಿತ್ಯ ಎಂದರು.

ಸಾಹಿತಿ ಕವಿತಾ ಕಲ್ಯಾಣಪ್ಪಗೋಳ ಮಾತನಾಡಿ, ನಡೆ-ನುಡಿ ಒಂದಾಗಿ ಬದುಕಿದವರು ಶರಣರು. ಜನಸಾಮಾನ್ಯರ ನೋವನ್ನು ಅರಿತು, ಜಾತಿ ಮತ್ತು ವೃತ್ತಿ ತಾರತಮ್ಯ ಇಲ್ಲದೇ ನರನನ್ನು ಹರನನ್ನಾಗಿ ಮಾಡಿದವರು ಶರಣರು ಎಂದು ಶ್ಲಾಘಿಸಿದರು. ಹಿರಿಯ ನ್ಯಾಯವಾದಿ ಉಸ್ಮಾನಬಾದಶಾಹ ಆಲಗೋರ, ಮಹಮ್ಮದ ಸರ್ದಾರ್ ಅಲಿಖಾನ್, ವಿಶ್ರಾಂತ ಶಿಕ್ಷಕ ಅಮೋಘಸಿದ್ಧ ಪೂಜಾರ, ಶರಣ ಚಿಂತಕಿ ಭಾಗಿರಥಿ ಶಿಂಧೆ ಮಾತನಾಡಿದರು.ಈ ವೇಳೆ ಜಿಲ್ಲಾ ದತ್ತಿ ಸಂಚಾಲಕ ರಾಜಸಾಬ್ ಶಿವನಗುತ್ತಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಶಾಂತಾ ವಿಭೂತಿ, ಮಹಮ್ಮದ ಗೌಸ್ ಹವಾಲ್ದಾರ, ಡಾ.ಆನಂದ ಕುಲಕರ್ಣಿ, ಅನ್ನಪೂರ್ಣ ಬೆಳ್ಳೆನವರ, ಶೋಭಾ ಬಡಿಗೇರ, ವಿ.ಎಂ.ಬಗಾಯತ, ಬಿ.ಎಂ.ಅಜೂರ, ಸಿದ್ದು ಸಾವಳಸಂಗ, ಭಾರತಿ ಸಾವಳಸಂಗ, ಅಭಿಷೇಕ್ ಚಕ್ರವರ್ತಿ, ಶಿಲ್ಪಾ ಮಾಯಾಚಾರಿ, ಲತಾ ಗುಂಡಿ, ಗಂಗಮ್ಮ ರೆಡ್ಡಿ, ಜಂಗಮಶೆಟ್ಟಿ ಕೆ.ಎಸ್ ಹನುಮಾಣಿ, ಜಿ.ಎಸ್ ಬಳ್ಳೂರ್, ಎಸ್.ವಿ.ನಾಡಗೌಡ, ಯುವರಾಜ್ ಚೊಳಕೆ, ವಿಜಯಲಕ್ಷ್ಮಿ ಎಚ್, ಆರ್.ಎಂ ದೊಡ್ಡಮನಿ, ಲಕ್ಷ್ಮಿ ಕಾತ್ರಾಳ, ಬಸವರಾಜ ಕಂಕನವಾಡಿ, ಪ್ರದೀಪ್ ನಾಯ್ಕೋಡಿ, ಅರ್ಜುನ ಶಿರೂರ್, ಶಿಲ್ಪಾ ಮಾಯಾಚಾರಿ, ಪ್ರವೀಣ್ ಬಡಿಗೇರ, ಮಹಾದೇವಿ ತೆಲಗಿ, ಪರಸು ಚಲವಾದಿ, ಆಲಿಸಾಬ ಖಡಕೆ, ಕಮಲಾ ಮುರಾಳ, ಚೈತನ್ಯ ಮುದ್ದೇಬಿಹಾಳ ಮುಂತಾದವರು ಇದ್ದರು.