ಸಾರಾಂಶ
- ಡಿಸಿ ಕಚೇರಿಯಲ್ಲಿ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಂಗಾಧರ ಸ್ವಾಮಿ- - - ಕನ್ನಡಪ್ರಭ ವಾರ್ತೆ ದಾವಣಗೆರೆ 12ನೇ ಶತಮಾನದಲ್ಲಿ ಶರಣರು ರಚಿಸಿದ ವಚನ ಸಾಹಿತ್ಯಗಳೇ ಇಂದಿನ ನಮ್ಮ ಸಂವಿಧಾನದ ಮೂಲ ಆಶಯಗಳಾಗಿವೆ. ಕಾನೂನಿನ ಮೂಲವು ವಚನ ಸಾಹಿತ್ಯ. ಅಲ್ಲದೇ, ಅಂದಿನ ಅನುಭವ ಮಂಟಪದಂತೆ ಇಂದಿನ ಸಂಸತ್ತು ಕೂಡ ರಚಿತವಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ ವಚನ ರಕ್ಷಕ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿ ಅಂದಿನ ಕೆಲವರು ಸಾಹಿತ್ಯಗಳನ್ನು ಧ್ವಂಸ ಮಾಡಲು ಯತ್ನಿಸಿದರು. ಆಗ ಖಡ್ಗಗಳನ್ನು ಹಿಡಿದು ಧೈರ್ಯವಾಗಿ ಮೆಟ್ಟಿ ನಿಂತು ಸಮಗ್ರ ವಚನ ಸಾಹಿತ್ಯ ರಕ್ಷಿಸಿದ ಮಹಾನ್ ಧೀಮಂತ ನಾಯಕ ಮಡಿವಾಳ ಮಾಚಿದೇವ ಎಂದು ಹೇಳಿದರು.ಅಂದು ಮಾಚಿದೇವ ಅವರು ಇಲ್ಲದೇ ಹೋಗಿದ್ದರೆ ಇಂದು ನಮಗೆ ಯಾವುದೇ ವಚನ ಸಾಹಿತಿಗಳು ಸಿಗುತ್ತಿರಲಿಲ್ಲ. ಸಮಾಜಗಳು ತಮ್ಮ ಮಕ್ಕಳಿಗೆ ಉತ್ತಮ ದ ವಿದ್ಯಾಭ್ಯಾಸ ನೀಡುವ ಮೂಲಕ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು. ಉನ್ನತ ಹುದ್ದೆಗಳನ್ನು ಅಲಂಖರಿಸುವಂತೆ ಸೂಕ್ತ ಪ್ರೇರೇಪಣೆ ನೀಡಬೇಕು. ಮಕ್ಕಳನ್ನು ಕೇವಲ ವಿದ್ಯಾವಂತರನ್ನಾಗಿ ಮಾಡದೇ, ಅವರಿಗೆ ಸಮಾಜದ ಒಳಿತು ಕೆಡುಕುಗಳನ್ನು ತಿಳಿಸಬೇಕು. ಆ ಮೂಲಕ ಅವರನ್ನು ಧೈರ್ಯವಂತರನ್ನಾಗಿ ಮಾಡಬೇಕು. ಸಮಾಜದ ಪಿಡುಗುಗಳ ವಿರುದ್ಧ ಹೋರಾಡುವಂತೆ ತಿಳಿ ಹೇಳಬೇಕು ಎಂದರು.
ಮಡಿವಾಳ ಸಮುದಾಯದ ಜಿಲ್ಲಾ ಕಾರ್ಯಾಧ್ಯಕ್ಷ ಅವರಗೆರೆ ಎಚ್.ಜಿ.ಉಮೇಶ್ ಮಾತನಾಡಿ, ಶೋಷಣೆಗೆ ಒಳಗಾಗಿರುವ ಮಡಿವಾಳ ಸಮಾಜವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ನಮಗೆ ರಾಜಕೀಯ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಆದ್ಯತೆ ನೀಡಬೇಕೆಂದು ಮನವಿ ಮಾಡಿದರು.ಮೇಯರ್ ಕೆ.ಚಮನ್ ಸಾಬ್ ಮಾತನಾಡಿ, 12ನೇ ಶತಮಾನದಲ್ಲಿ ಇದ್ದಂತಹ ಮನಸ್ಮೃತಿ ವಾದವನ್ನು ಹತ್ತಿಕ್ಕುವ ಮೂಲಕ ಅದರ ವಿರುದ್ಧ ಹೋರಾಟ ನಡೆಸಿ ದುಷ್ಟರ ನಾಶಕ್ಕೆ ಕಾರಣವಾಗಿ ವಚನ ರಕ್ಷ ವಚನ ಸಾಹಿತ್ಯ ರಕ್ಷಿಸಿದ ಧೀಮಂತ ನಾಯಕ ಮಡಿವಾಳ ಮಾಚಿದೇವ ಎಂದರು.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾತನಾಡಿ, ಮಡಿವಾಳ ಸಮಾಜ ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣ ಅವರಿಗೆ ಶೈಕ್ಷಣಿಕ ಪ್ರಗತಿ ಇಲ್ಲದಿರುವುದು. ಶಿಕ್ಷಣ ದೊರೆತರೆ ಆರ್ಥಿಕತೆ, ರಾಜಕೀಯ ಪ್ರಾಧಾನ್ಯತೆ ಸಿಗುತ್ತದೆ ಎಂದು ಹೇಳಿದರು.ಸಮಾಜದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ, ಪಾಲಿಕೆ ಸದಸ್ಯ ಗಡಿಗುಡಾಳು ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ಪತ್ರಕರ್ತ ಎಂ.ವೈ.ಸತೀಶ್, ಅರ್.ಎನ್. ಧನಂಜಯ, ಸುರೇಶ್ ಕೋಗುಂಡೆ, ಅಂಜಿನಪ್ಪ ಪೂಜಾರ, ಓಂಕಾರಪ್ಪ, ಡೈಮಂಡ್ ಮಂಜುನಾಥ, ಪಿ.ಮಂಜುನಾಥ, ದುಗ್ಗಪ್ಪ ಗುಡ್ಡಪ್ಪ, ಚಿಕ್ಕಣ್ಣ, ರುದ್ರೇಶ್, ಭಾತಿಶಂಕರ್, ಕಿಶೋರ್ ಕುಮಾರ್, ವಿಜಯ್ ಕುಮಾರ್, ಎಂ.ವೈ.ರಮೇಶ್, ಸಂತೋಷ ಮತ್ತಿತರರು ಇದ್ದರು.
- - -ಕೋಟ್ ತುಳಿತಕ್ಕೆ ಒಳಗಾದ ಮಡಿವಾಳರು ಎಲ್ಲ ಸಮುದಾಯಗಳ ಕೊಳಕನ್ನು ತೊಳೆಯುವ ಮೂಲಕ ಇಡೀ ಸಮಾಜವನ್ನೇ ಶುಭ್ರವನ್ನಾಗಿ ಮಾಡುವ ಕಾಯಕ ಹೊಂದಿದ್ದಾರೆ. ಇಂತಹ ಕಾಯಕದಿಂದಲೇ ನಾವು ನೀವೆಲ್ಲರೂ ಇಂದು ಸಮಾಜದಲ್ಲಿ ತಲೆಯೆತ್ತಿ ನಡೆಯುತ್ತಿದ್ದೇವೆ. ನಮ್ಮಗಳ ಇಂತಹ ವ್ಯಕ್ತಿತ್ವಕ್ಕೆ ಮಡಿವಾಳ ಸಮಾಜವೇ ಕಾರಣ
- ಕೆ.ಎಸ್.ಬಸವಂತಪ್ಪ, ಶಾಸಕ, ಮಾಯಕೊಂಡ ಕ್ಷೇತ್ರ- - - -1ಕೆಡಿವಿಜಿ33.ಜೆಪಿಜಿ: ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಮಡಿವಾಳ ಮಾಚಿದೇವ ಜಯಂತಿ ಆಚರಿಸಲಾಯಿತು.