ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಇದೇ ಮೊದಲ ಬಾರಿಗೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜ.19ರಂದು ಹಮ್ಮಿಕೊಂಡಿರುವ ಒಂದು ದಿನದ ಕಲಬುರಗಿ ಜಿಲ್ಲಾ ಪ್ರಥಮ ವಚನ ಸಾಹಿತ್ಯ ಸಮ್ಮೇಳನವನ್ನು ಅನುಭವ ಮಂಟಪದ ರೀತಿಯಲ್ಲಿ ಅರ್ಥಪೂರ್ಣವಾಗಿ ನಡೆಸಲು ಈಗಾಗಲೇ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸಮ್ಮೇಳನಾಧ್ಯಕ್ಷರಾಗಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ನಿರ್ದೇಶಕಿ, ಹಿರಿಯ ಸಾಹಿತಿ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಸುರೇಶ ಆರ್. ಸಜ್ಜನ್ ತಿಳಿಸಿದ್ದಾರೆ.ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಮಾಹಿತಿ ನೀಡಿ, ಅಂದು ಬೆಳಗ್ಗೆ 9.30ಕ್ಕೆ ಮಿನಿವಿಧಾನ ಸೌಧದಿಂದ ಕನ್ನಡ ಭವನದವರೆಗೆ ಜರುಗುವ ವಚನ ಸಾಹಿತ್ಯದೊಂದಿಗೆ ಸಾಂಸ್ಕೃತಿಕ ಮೆರವಣಿಗೆಗೆ ಮಾಜಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಚಾಲನೆ ನೀಡಲಿದ್ದು, ತಹಸೀಲ್ದಾರ್ ನಾಗಮ್ಮ ಕಟ್ಟಿಮನಿ, ಕಲ್ಯಾಣಕುಮಾರ ಶೀಲವಂತ, ಮಲ್ಲಿನಾಥ ಪಾಟೀಲ ಕಾಳಗಿ, ಗೌಡೇಶ ಬಿರಾದಾರ, ವಿದ್ಯಾಸಾಗರ ದೇಶಮುಖ, ಮಲ್ಲಿನಾಥ ದೇಶಮುಖ ಸೇರಿ ಕಸಾಪ ತಾಲೂಕು ಅಧ್ಯಕ್ಷರುಗಳು ಉಪಸ್ಥಿತರಿರುವರು.
ವೇದಿಕೆ ಸಮಾರಂಭ: ಶತಾಯುಷಿ ಲಿಂ.ಭೋಗಲಿಂಗಪ್ಪ ಶಾಬಾದಿ ಪಟಪಳ್ಳಿ ವೇದಿಕೆಯಡಿಯಲ್ಲಿನ ಸಮಾರಂಭವನ್ನು ಮಾಜಿ ಸಿಎಂ ಜಗದೀಶ ಶೆಟ್ಟರ್ ಉದ್ಘಾಟಿಸಲಿದ್ದು, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಮನ್ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್. ಅಪ್ಪಾ ಅವರು ಸಾನ್ನಿಧ್ಯ ವಹಿಸಲಿದ್ದಾರೆ. ವೈದ್ಯ ಸೇವಕ ಡಾ. ಎಸ್.ಬಿ. ಕಾಮರೆಡ್ಡಿ, ನಗರ ಪೊಲೀಸ್ ಕಮಿಷನರ್ ಚೇತನ್ ಆರ್., ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಜಂಟಿ ನಿರ್ದೇಶಕಿ ಬಸವರಾಜ ಹೂಗಾರ, ಧಾರವಾಡ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಉಪಸ್ಥಿತರಿರುವರು.ಜಗವೇ ಕೂಡಲ ಸಂಗಮವಾಗಿಸುವ ಪರಿ ಗೋಷ್ಠಿ: ಮ.12.30ಕ್ಕೆ ಜಗವೇ ಕೂಡಲಸಂಗಮವಾಗಿಸುವ ಪರಿ ಶೀರ್ಷಿಕೆಯ ಮೊದಲನೇ ಗೋಷ್ಠಿಯಲ್ಲಿ ವಚನ ಸಾಹಿತ್ಯ ಮತ್ತು ಜಾತಿ ವಿನಾಶ ಕುರಿತು ಅಮೃತರಾವ ಪಾಟೀಲ ಗುಡ್ಡೇವಾಡಿ, ಸೌಹಾರ್ದ ಸಾರಿದ ಶರಣ ಸಂಸ್ಕಂತಿ ಕುರಿತು ಡಾ. ಶಿವರಂಜನ್ ಸತ್ಯಂಪೇಟೆ ಮಾತನಾಡಲಿದ್ದಾರೆ. ಡಾ.ಶಿವಶರಣಪ್ಪ ಮೋತಕಪಳ್ಳಿ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ಡಿ.ಎನ್. ಪಾಟೀಲ. ಶರಣಗೌಡ ಪಾಟೀಲ, ಮಲ್ಲಣ್ಣ ನಾಗರಾಳ, ಶಾಮರಾವ ಸೂರನ್, ಅನುಪಮಾ ಸುಲೇಕರ್ ಉಪಸ್ಥಿತರಿರುವರು.
ಎನಗೊಲಿದ ವಚನ ಗೋಷ್ಠಿ: ಮಧ್ಯಾಹ್ನ 2.05ಕ್ಕೆ ಎನಗೊಲಿದ ವಚನ ಎನ್ನುವ ಗೋಷ್ಠಿ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ವಹಿಸಲಿದ್ದು, ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ ದಿಕ್ಸೂಚಿ ನುಡಿಗಳನ್ನಾಡಲಿದ್ದಾರೆ. ಕಲ್ಯಾಣಪ್ಪ ಪಾಟೀಲ ಮಳಖೇಡ, ಈರಯ್ಯಾ ಹಿರೇಮಠ, ದಯಾನಂದ ಪಾಟೀಲ ಉಪಸ್ಥಿತರಿರುವರು. ಆಧುನಿಕ ವಚನಕಾರರಾದ ಶೋಭಾದೇವಿ ಚೆಕ್ಕಿ, ಶಕುಂತಲಾ ಪಾಟೀಲ ಜಾವಳಿ, ಧರ್ಮಣ್ಣಾ ಹೆಚ್ ಧನ್ನಿ, ಡಾ. ಕೆ ಗಿರಿಮಲ್ಲ, ಸಂಗಮನಾಥ ರೇವತಗಾಂವ, ಡಾ. ರಾಜಶೇಖರ ಮಾಂಗ್, ಡಾ. ಚಿದಾನಂದ ಚಿಕ್ಕ ಮಠ, ಡಾ. ಪರ್ವಿನ್ ಸುಲ್ತಾನಾ, ಸಿದ್ಧರಾಮ ಯಳವಂತಗಿ, ಶಿಲ್ಪಾ ಜೋಶಿ, ಪಂಚಾಕ್ಷರಿ ಪೂಜಾರಿ ದಂಡಗುಂಡ, ಸದಾನಂದ ಪಾಟೀಲ ಜೇವರ್ಗಿ, ಗಿರಿಮಲ್ಲಪ್ಪ ವಳಸಂಗ ಅವರು ತಮ್ಮ ಸ್ವ ರಚಿತ ವಚನವೊಂದನ್ನು ವಾಚಿಸಲಿದ್ದಾರೆ.ಸಾಂಸ್ಕೃತಿಕ ಸಂವಾದ: ಮಧ್ಯಾಹ್ನ 3.30ಕ್ಕೆ ನಡೆಯುವ ತಲ್ಲಣದ ಬದುಕಿಗೆ ವಚನ ಪರಿಹಾರ ಕುರಿತು ಸಮ್ಮೇಳನಾಧ್ಯಕ್ಷರೊಂದಿಗೆ ಸಾಂಸ್ಕಂತಿಕ ಸಂವಾದ ನಡೆಯಲಿದ್ದು, ಹಿರಿಯ ಸಾಹಿತಿ ಎಚ್.ಬಿ.ತೀರ್ಥೆ, ಬಸವರಾಜ ಧೂಳಾಗುಂಡಿ, ಜಯಶ್ರೀ ಚಟ್ನಳ್ಳಿ, ಡಾ. ಶಿವಪುತ್ರ ಮಾವಿನ್, ಪದ್ಮಾವತಿ ಎನ್ ಮಾಲಿಪಾಟೀಲ, ಡಾ. ಗೀತಾ ಎಸ್ ಪಾಟೀಲ ಭಾಗವಹಿಸಲಿದ್ದಾರೆ.
ಸಮಾರೋಪ-ಸತ್ಕಾರ ಸಂಭ್ರಮ: ಇಳಿಹೊತ್ತು 4.05ಕ್ಕೆ ನಡೆಯುವ ಸಮಾರಂಭದಲ್ಲಿ ಶಹಾಪೂರಿನ ಶರಣ ಸಾಹಿತಿ ಶಿವಣ್ಣ ಇಜೇರಿ ಸಮಾರೋಪ ನುಡಿಗಳನ್ನಾಡಲಿದ್ದಾರೆ. ಡಾ. ಮಲ್ಲಿಕಾರ್ಜುನ ವಡ್ಡನಕೇರಿ, ದತ್ತಪ್ಪ ಸಾಗನೂರ, ಸುರೇಶ ಬಡಿಗೇರ, ಪ್ರಭುಲಿಂಗ ಮಹಾಗಾಂವಕರ್, ಶಿವಕುಮಾರ ಬಿದರಿ ಉಪಸ್ಥಿತರಿರುವರು. ವಿವಿಧ ಕ್ಷೇತ್ರದ ಪ್ರಮುಖರ ಸತ್ಕಾರ, ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ವಚನಾಧರಿತ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.