ಅಹಂಕಾರ ಅಳಿದು ಸಕಲ ಜೀವಿಗಳ ಬಗ್ಗೆ ಪ್ರೀತಿ ಸಹನೆ ಮತ್ತು ಅಂತ:ಕರಣ ಭಾವ ಹೊಂದಿದ ವ್ಯಕ್ತಿಗಳು ಮಾತ್ರ ಶರಣರೆಂದು ಕರೆಸಿಕೊಳ್ಳುವ ಅರ್ಹತೆ ಪಡೆಯುತ್ತಾರೆ ಎಂದು ಇಳಕಲ್ಲಿನ ಗುರು ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಸಿಂಧನೂರು
ಅಹಂಕಾರ ಅಳಿದು ಸಕಲ ಜೀವಿಗಳ ಬಗ್ಗೆ ಪ್ರೀತಿ ಸಹನೆ ಮತ್ತು ಅಂತ:ಕರಣ ಭಾವ ಹೊಂದಿದ ವ್ಯಕ್ತಿಗಳು ಮಾತ್ರ ಶರಣರೆಂದು ಕರೆಸಿಕೊಳ್ಳುವ ಅರ್ಹತೆ ಪಡೆಯುತ್ತಾರೆ ಎಂದು ಇಳಕಲ್ಲಿನ ಗುರು ಮಹಾಂತ ಸ್ವಾಮೀಜಿ ಅಭಿಪ್ರಾಯಪಟ್ಟರು.ಬಸವ ಪ್ರಸಾದ ನಿಲಯದಲ್ಲಿ ಬಸವ ಕೇಂದ್ರ ಹಾಗೂ ಇತರ ಬಸವ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ವ್ಯಸನ ಮುಕ್ತ ಸಮಾಜಕ್ಕಾಗಿ ವಚನ ಶ್ರವಣ ಹಾಗೂ ಶರಣ ಪಿ.ವೀರಭದ್ರಪ್ಪನವರ ವರ್ಷದ ನೆನಪು ಕಾರ್ಯಕ್ರಮದಲ್ಲಿ ಮಾತನಾಡಿದರು. ಶರಣರು ಯಾವತ್ತು ಗಾಳಿ ಮಾತುಗಳಿಗೆ ಕಿವಿ ಕೊಡುವುದಿಲ್ಲ. ಹೊಗಳಿಕೆ ತೆಗಳಿಕೆಗಳನ್ನು ಸಮಾನವಾಗಿ ಸ್ವೀಕರಿಸುತ್ತಾರೆ. ಪಿ. ವೀರಭದ್ರಪ್ಪನವರು ಎಲ್ಲ ಗುಣಗಳನ್ನು ಜೀವನದಲ್ಲಿ ಆಚರಣೆಗೆ ತಂದಿದ್ದಾರೆ ಎಂದರು.
ಮೈಸೂರಿನ ಲಿಂಗರಾಜಪ್ಪ ಚೌಹಳ್ಳಿ ಶರಣರು ಮಾತನಾಡಿ, ವೀರಭದ್ರಪ್ಪನವರು ನಾಡಿನಾದ್ಯಂತ ಸಂಚರಿಸಿ ಬಸವ ತತ್ವದ ಬೀಜಗಳನ್ನು ಬಿತ್ತಿದ್ದಾರೆ. ನಾಡಿನ ಮೂಲೆ ಮೂಲೆಯಲ್ಲಿ ನೂರಾರು ಶರಣರನ್ನು ಸೃಷ್ಟಿಸಿದ್ದಾರೆ. ಮೈಸೂರಿನ ಭಾಗದಲ್ಲಿ ಲಿಂಗಾಯತ ನೈಜ ಮೌಲ್ಯಗಳನ್ನು ಜನಮಾನಸಕ್ಕೆ ತಲುಪಲು ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.ಕುಷ್ಟಗಿ ಮಾಜಿ ಶಾಸಕ ಕೆ.ಶರಣಪ್ಪ, ತಿಮ್ಮನಗೌಡ ಚಿಲ್ಕರಾಗಿ, ಅಮರೇಶಪ್ಪ ಮಾರ್ಕಟ್, ಸೋಮನಗೌಡ ಬಾದರ್ಲಿ, ಶಿವಕುಮಾರ ಬಳಿಗಾರ, ಶಿವರಾಜ ಪಾಟೀಲ್ ವಕೀಲ, ಅಮರೇಶಪ್ಪ ಗಡಹಳ್ಳಿ, ರುದ್ರಪ್ಪ ಸೂಳಿಬಾವಿ, ರಂಗಪ್ಪ ಮೇದಾರ, ಪಂಪಯ್ಯಸ್ವಾಮಿ ಸಾಲಿಮಠ, ಅಭಿಷೇಕ ನಾಡಗೌಡ ಮಾತನಾಡಿದರು. ಕೂಳಿಹಾಳದ ಬಸವರಾಜಪ್ಪ ಶರಣರು ಅಧ್ಯಕ್ಷತೆ ವಹಿಸಿದ್ದರು. ಈರಮ್ಮ ಅವ್ವ, ನಾಗಭೂಷಣ ನವಲಿ, ಕರೇಗೌಡ ಕುರುಕುಂದಿ, ಕೆ.ಶರಣಪ್ಪ ಟೆಂಗಿನಕಾಯಿ, ಬಸಲಿಂಗಪ್ಪ ಬಾದರ್ಲಿ, ಚಂದ್ರೇಗೌಡ ಹರೇಟನೂರ ಉಪಸ್ಥಿತರಿದ್ದರು. ನಾರಾಯಣಪ್ಪ ಮಾಡಸಿರವಾರ, ಬಸವರಾಜಪ್ಪ ವರದಾಪುರ ವಚನ ಪ್ರಾರ್ಥನೆ ಮಾಡಿದರು. ಶರಣಪ್ಪ ಸಾಹುಕಾರ ತುರ್ವಿಹಾಳ ನಿರೂಪಿಸಿದರು.
----ಫೋಟೋ-----19ಕೆಪಿಎಸ್ಎನ್ಡಿ3:
ಸಿಂಧನೂರಿನ ಬಸವ ಕೇಂದ್ರದಲ್ಲಿ ಇಳಕಲ್ಲಿನ ಗುರು ಮಹಾಂತ ಸ್ವಾಮೀಜಿ ಮಾತನಾಡಿದರು---