ಸಾರಾಂಶ
ಬಸವೇಶ್ವರ ದೇವಾಲಯದಲ್ಲಿ ವಚನ ಗಾಯನ ಕಾರ್ಯಕ್ರಮ ನಡೆಯಿತು. ಕದಳಿ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಉಷಾರಾಣಿ ಮಾತನಾಡಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ನ ಕದಳಿ ವೇದಿಕೆ ವತಿಯಿಂದ ಬಸವೇಶ್ವರ ದೇವಾಲಯದಲ್ಲಿ ವಚನ ಗಾಯನ ಕಾರ್ಯಕ್ರಮ ಈಚೆಗೆ ನಡೆಯಿತು.ಕದಳಿ ವೇದಿಕೆ ತಾಲೂಕು ಘಟಕದ ಅಧ್ಯಕ್ಷೆ ಉಷಾರಾಣಿ ಮಾತನಾಡಿ, ವಚನಗಾಯನದಿಂದಾಗಿ ಮನತೃಪ್ತಿ ಹಾಗೂ ಆತ್ಮ ತೃಪ್ತಿ ಸಿಗುತ್ತದೆ. ಪ್ರತಿಯೊಬ್ಬರು ಪ್ರತಿದಿನವೂ ತಪ್ಪದೇ ದಿನಕ್ಕೊಂದು ವಚನ ಗಳನ್ನು ಹೇಳುವ ಮೂಲಕ, ಜನರಲ್ಲಿ ವಚನ ಜಾಗೃತಿ ಮೂಡಿಸಬೇಕೆಂದು ಮನವಿ ಮಾಡಿದರು.
ತಾಲೂಕು ಕದಳಿ ವೇದಿಕೆ ಪ್ರಮುಖರಾದ ಗೀತಾರಾಜು, ಜಲಜಾ ವಿಜಯಕುಮಾರ್, ನಾಗಮಣಿ ಯುವರಾಜ್, ಕವಿತಾ ಸಂಜಯ್, ಸರಿತಾ ಮಲ್ಲಿಕಾರ್ಜುನ್, ದಿವ್ಯ ದಿವಾಕರ್, ಜಗದಾಂಬ ಗುರುಪ್ರಸಾದ್, ಯಶೋಧ ನಾಗೇಶ್ ಇದ್ದರು.ಈ ಸಂದರ್ಭ ವಿವಿಧ ಮಹಿಳಾ ತಂಡಗಳಿಂದ ವಚನ ಗಾಯನ ಹಾಗೂ ಶಿವಸ್ತೋತ್ರಗಳು ನೆರವೇರಿದವು.