ವಚನಗಳು ಮನುಷ್ಯನ ಬಾಳಿಗೆ ಬೆಳಕು: ವೆಂಕಟೇಶ

| Published : Apr 08 2024, 01:03 AM IST

ವಚನಗಳು ಮನುಷ್ಯನ ಬಾಳಿಗೆ ಬೆಳಕು: ವೆಂಕಟೇಶ
Share this Article
  • FB
  • TW
  • Linkdin
  • Email

ಸಾರಾಂಶ

ಸಿಂಧನೂರಿನ ಡಾ.ಕೆ.ಆನಂದ ಹೆಗ್ಡೆ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಸಿಂಧನೂರು: ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನಗಳು ಪ್ರತಿಯೊಬ್ಬ ಮನುಷ್ಯನ ಬದುಕಿಗೆ ಬೆಳಕಾಗಿವೆ ಎಂದು ಡಾ.ಕೆ.ಆನಂದ ಹೆಗ್ಡೆ ಶಾಲೆಯ ಆಡಳಿತಾಧಿಕಾರಿ ವೆಂಕಟೇಶ ಉದ್ಬಾಳ ಹೇಳಿದರು.

ನಗರದ ಡಾ.ಕೆ.ಆನಂದ ಹೆಗ್ಡೆ ಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್‌ನಿಂದ ಇಂತಹ ವಿಶಿಷ್ಟ ರೀತಿಯಲ್ಲಿ ಕಾರ್ಯಕ್ರಮಗಳನ್ನು ಮಾಡಿ ಮಕ್ಕಳಿಗೆ ವಚನಗಳ ಕುರಿತು ಉಪನ್ಯಾಸ ಮೂಲಕ ತಿಳಿಸುವಂತದ್ದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಶರಣ ಸಾಹಿತ್ಯ ಹಾಗೂ ವಚನ ಶ್ರವಣದ ಕುರಿತು ಬಸವ ಕೇಂದ್ರದ ಅಧ್ಯಕ್ಷ ಕರೇಗೌಡ ಪೊಲೀಸ್ ಪಾಟೀಲ್ ಕುರುಕುಂದಿ ಉಪನ್ಯಾಸ ನೀಡಿದರು. ಶಿಕ್ಷಣ ಮತ್ತು ಮಹಿಳೆ ವಿಷಯದ ಕುರಿತು ಕವಿಯಿತ್ರಿ ಶಾರದಾ ವಟಗಲ್ಲ ಉಪನ್ಯಾಸ ನೀಡಿದರು. ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ ಅಂತರಗಂಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೃಷ್ಣ ಕುಲಕರ್ಣಿ, ಶರಭಯ್ಯಸ್ವಾಮಿ ಹಿರೇಮಠ, ಡಾ.ಶಂಭನಗೌಡ ನಿಡಿಗೋಳ, ಗುರಪ್ಪ ಗುತ್ತಿಗೆದಾರ, ಚಂದ್ರಶೇಖರ ಯರದಿಹಾಳ, ದೇವಿರಮ್ಮ ಇದ್ದರು.