ಸಾರಾಂಶ
ಸಂಸ್ಕೃತ ಭಾಷೆಯನ್ನು ಬಿಟ್ಟು ಜನರಾಡುವ ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ ವಿಶ್ವದರ್ಜೆಯ ಸಾಹಿತ್ಯವನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ಸಂಸ್ಕೃತ ಭಾಷೆಯನ್ನು ಬಿಟ್ಟು ಜನರಾಡುವ ಕನ್ನಡ ಭಾಷೆಯಲ್ಲಿಯೇ ವಚನಗಳನ್ನು ರಚಿಸಿ ವಿಶ್ವದರ್ಜೆಯ ಸಾಹಿತ್ಯವನ್ನಾಗಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲಬೇಕು ಎಂದು ಎಸ್.ವಿ.ಪಿ. ಕಾಲೇಜಿನ ಪ್ರಾಂಶುಪಾಲ ಕೆ.ಎನ್. ರೇಣುಕಯ್ಯ ಹೇಳಿದರು.ನಗರದ ಎಸ್.ವಿ.ಪಿ. ಸಂಯುಕ್ತ ಪದವಿಪೂರ್ವ ಕಾಲೇಜು, ಎನ್.ಎಸ್.ಎಂ.ಬಾಲಿಕಾ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಸಹಯೋಗದಲ್ಲಿ ಏರ್ಪಡಿಸಿದ್ದ ವಿಶ್ವ ಗುರು ಬಸವಣ್ಣನವರ ಜಯಂತಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕಳಬೇಡ, ಕೊಲಬೇಡ ಎಂಬ ವಚನದ ಮೂಲಕ ಸಪ್ತಶೀಲ ತತ್ವಗಳನ್ನು ಸಾರಿಸಾರಿ ಹೇಳುತ್ತಾ ಮಾನವ ಜನಾಂಗಕ್ಕೆ ಮಾದರಿಯಾಗಿದ್ದಾರೆ. ತ್ರಿಲಿಂಗ ಮತ್ತು ತ್ರಿಕರಣ ಪೂರ್ವಕವಾಗಿ ಕಾಯಕವನ್ನು ಮಾಡುತ್ತಾ ಹೋದಂತೆ ಅಹಂಕಾರಭಾವವು ನಾಶವಾಗುತ್ತದೆ ಎಂಬುದನ್ನು ಮನದಟ್ಟು ಮಾಡಿಕೊಟ್ಟರು. ಇಂತಹ ಮಹಾನ್ ಪರಿಕಲ್ಪನೆಗಳನ್ನು ರಾಜ್ಯ ಸರ್ಕಾರ ಗುರುತಿಸಿ ಪ್ರಸ್ತುತ ಹಾಗೂ ಮುಂದಿನ ಸಮಾಜಕ್ಕೆ ಚಿಂತನೆಗಳು ಆದರ್ಶಪ್ರಾಯವಾಗಲೆಂದು ಸಾಂಸ್ಕತಿಕ ನಾಯಕನೆಂದು ಘೋಷಿಸಿ ಗೌರವ ಸಮರ್ಪಿಸಿರುವುದು ನಾಡಿನ ಹಿರಿಮೆಗೆ ಕಿರೀಟವಿಟ್ಟಂತೆಯೆಂದು ಬಣ್ಣಿಸಿದರು.ಶ್ರೀ ವಿದ್ಯಾಪೀಠ ಹಾಗೂ ಸುಮತಿ ಶಿಕ್ಷಣಸಂಸ್ಥೆಗಳ ಅಧ್ಯಕ್ಷರಾದ ಎಸ್.ಕೆ. ರಾಜಶೇಖರ್ ಮಾತನಾಡಿ ಬಸವಣ್ಣನವರು ಮಹಾನ್ ಮಾನವತವಾದಿ. ಅಹಿಂಸೆ ಮತ್ತು ಅಸ್ಪೃಶ್ಯತೆ ನಿವಾರಣೆಗಾಗಿ ಹಗಲಿರುಳು ಹೋರಾಡಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದರು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಹ ಕಾರ್ಯದರ್ಶಿ ಎಸ್.ಬಿ. ಜಗದೀಶ್, ಹಿರಿಯ ಸಹ ಶಿಕ್ಷಕ ವಿಜಯ್‌ಕುಮಾರ್ ಎಂ. ಅರ್ಕಚಾರಿ, ಮುಖ್ಯ ಶಿಕ್ಷಕಿ ಎಂ.ವಿಜಯಕುಮಾರಿ, ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಬಿಂದು ಎನ್. ಎಸ್.ವಿ.ಪಿ. ಮೊಂಟೆಸ್ಸೋರಿ ಮುಖ್ಯಶಿಕ್ಷಕಿ ಹೇಮಲತಾ ಕೆ.ಪಿ,. ಉಪನ್ಯಾಸಕ ಸಿ.ಬಿ.ನಾಗರಾಜ, ಶಿಕ್ಷಕಿ ಪಿ.ಪದ್ಮ. ಸಿ.ಎನ್.ಸಿದ್ದೇಶ್, ಸಿ.ಓ.ಸಂತೋಷ್, ಪಿ.ವೀರೇಶ್. ಎಂ.ಎಸ್.ದೇವರಾಜ್, ಜೆ. ಜುಂಜಪ್ಪ, ಬಿ.ಆರ್. ಉದಯ್‌ಶಂಕರ್, ಪ್ರದೀಪ್, ಬಿ.ಆರ್.ಲೋಹಿತ ಮತ್ತಿತರರು ಉಪಸ್ಥಿತರಿದ್ದರು.