ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ಘಟಕಕ್ಕೆ ವೈಷ್ಣವಿ ಎನ್.ರಾವ್ ಅಧ್ಯಕ್ಷೆ

| Published : May 04 2025, 01:31 AM IST

ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ಘಟಕಕ್ಕೆ ವೈಷ್ಣವಿ ಎನ್.ರಾವ್ ಅಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷೆಯಾಗಿ ನಗರದ ಕಲ್ಕಟ್ಟೆ ಪುಸ್ತಕದ ಮನೆಯ ಯುವ ಸಾಹಿತಿ, ಲೇಖಕಿ ವೈಷ್ಣವಿ ಎನ್.ರಾವ್‌ ಅವರನ್ನು ಜಿಲ್ಲಾಧ್ಯಕ್ಷೆ ಶೃತಿ ಅಜ್ಜಂಪುರ ನೇಮಕ ಮಾಡಿದ್ದಾರೆ.

ಜಿಲ್ಲಾಧ್ಯಕ್ಷೆ ಶೃತಿ ಅಜ್ಜಂಪುರರಿಂದ ನೇಮಕ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ನಾಟಕ ಲೇಖಕಿಯರ ಸಂಘದ ಚಿಕ್ಕಮಗಳೂರು ತಾಲೂಕು ಘಟಕದ ಅಧ್ಯಕ್ಷೆಯಾಗಿ ನಗರದ ಕಲ್ಕಟ್ಟೆ ಪುಸ್ತಕದ ಮನೆಯ ಯುವ ಸಾಹಿತಿ, ಲೇಖಕಿ ವೈಷ್ಣವಿ ಎನ್.ರಾವ್‌ ಅವರನ್ನು ಜಿಲ್ಲಾಧ್ಯಕ್ಷೆ ಶೃತಿ ಅಜ್ಜಂಪುರ ನೇಮಕ ಮಾಡಿದ್ದಾರೆ.ಬಾಲ್ಯದಿಂದಲೇ ಬರವಣಿಗೆಯಲ್ಲಿ ತೊಡಗಿರುವ ವೈಷ್ಣವಿಯವರು ಈವರೆಗೆ ನಾಯಕಪುರ, ಅನನ್ಯ ಭಾರತ, ಊರಿನ ಮಕ್ಕಳು ನಾಟಕಗಳಲ್ಲದೇ ಸುಮಾರು ಐನೂರಕ್ಕೂ ಹೆಚ್ಚು ಲೇಖನಗಳನ್ನು ವಿವಿಧ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಲೇಖಕಿ, ನಿರೂಪಕಿ, ಗಾಯಕಿ, ನೃತ್ಯಗಾತಿಯೂ ಆಗಿರುವ ಇವರು ವೈಶಂಪಾಯನ ಚಲನಚಿತ್ರವಲ್ಲದೇ ಲವ್ ವಾಕ್, ಚೀಸ್‌ಕೇಕ್, ಬ್ರೇಕಪ್ ಕಿರುಚಿತ್ರಗಳಲ್ಲೂ ಅಭಿನಯಿಸಿ ಜನಮನಗೆದ್ದಿದ್ದಾರೆ.

ರಾಜ್ಯ ಕಸಾಪ ಕೊಡುವ ಸಿಸು ಸಂಗಮೇಶ ದತ್ತಿ ಪ್ರಶಸ್ತಿ ಪಡೆದ ರಾಜ್ಯದ ಅತಿ ಕಿರಿಯ ನಾಟಕಕಾರ್ತಿಯಾಗಿರುವ ಇವರು ರಬ್ಡಿ ನಾಟಕದ ಸಾವಂತ್ರಿ ಪಾತ್ರಕ್ಕಾಗಿ ರಾಜ್ಯಮಟ್ಟದ ಉತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ಯಯಾತಿ ನಾಟಕವನ್ನು ನಿರ್ದೇಶಿಸಿ ದ್ದಾರೆ. ಯಕ್ಷಗಾನ ಕಲಾವಿದೆಯೂ ಆಗಿರುವ ವೈಷ್ಣವಿಯವರಿಗೆ ಆಳ್ವಾಸ್ ವಿದ್ಯಾರ್ಥಿ ಸಿರಿ, ಅರಳು ಮಲ್ಲಿಗೆ, ಚಿಣ್ಣರ ಚಿಣ್ಣ ಪ್ರಶಸ್ತಿ ಗಳು ಲಭಿಸಿವೆ. ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಸಾಹಿತ್ಯ ಪರಿಷತ್ ನಡೆಸುವ ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ರಾಜ್ಯ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ ಹಿರಿಮೆ ಇವರದು.ವೈಷ್ಣವಿ ಎನ್.ರಾವ್ ಭಾನುವಾರ ನಗರದ ಕನ್ನಡ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪದಗ್ರಹಣ ಮಾಡಲಿದ್ದಾರೆ.ಪೋಟೋ ಫೈಲ್‌ ನೇಮ್‌ 3 ಕೆಸಿಕೆಎಂ 4

ವೈಷ್ಣವಿ ಎನ್‌. ರಾವ್