ಆದರ್ಶ ರಾಜಕಾರಣದ ಭಾರತ ರತ್ನ ಹಾಗೂ ದೇಶ ಅಭಿವೃದ್ಧಿಯ ರಥಕ್ಕೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಜೀ ಸಾಧನೆ ಅವಿಸ್ಮರಣೀಯ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

- ಎಂ.ಪಿ. ರೇಣುಕಾಚಾರ್ಯ ಅಭಿಮತ । ಹೊನ್ನಾಳಿ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಆದರ್ಶ ರಾಜಕಾರಣದ ಭಾರತ ರತ್ನ ಹಾಗೂ ದೇಶ ಅಭಿವೃದ್ಧಿಯ ರಥಕ್ಕೆ ರಾಜಮಾರ್ಗ ನಿರ್ಮಿಸಿದ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಜೀ ಸಾಧನೆ ಅವಿಸ್ಮರಣೀಯ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.

ಗುರುವಾರ ಎ.ಬಿ. ವಾಜಪೇಯಿ ಜನ್ಮ ಶತಮಾನೋತ್ಸವ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಿಸಿ ಹಾಗೂ ತಾಲೂಕಿನ ಅರಬಗಟ್ಟೆ ವಸತಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಟ್ಟು 101ನೇ ಜನ್ಮದಿನವನ್ನು ಬಿಜೆಪಿ ಮುಖಂಡರು, ಕಾರ್ಯಕರ್ತರೊಂದಿಗೆ ಆಚರಿಸಿ ಅವರು ಮಾತನಾಡಿದರು.

ವಾಜಪೇಯಿ ಅವರು ಅಧಿಕಾರದಲ್ಲಿ ಇದ್ದಾಗ ಪಿ.ಎಂ. ಗ್ರಾಮ ಸಡಕ್ ಯೋಜನೆ, ಸರ್ವಶಿಕ್ಷಾ ಅಭಿಯಾನ, ರೈತರ ಬೆಳೆ ವಿಮಾ ಯೋಜನೆ, ವಾಲ್ಮೀಕಿ ಆವಾಸ್ ಯೋಜನೆಯಡಿ ಮನೆಗಳ ಮಂಜೂರು ಯೋಜನೆ, ಚತುಷ್ಪಥ ರಸ್ತೆ ನಿರ್ಮಾಣ ಹೀಗೆ ಹತ್ತಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದರು. ಆ ಮೂಲಕ ರಾಜಕಾರಣದಲ್ಲಿ ಹೊಸ ಮನ್ವಂತರವನ್ನೇ ಸೃಷ್ಠಿಸಿದ್ದರು ಮಾಜಿ ಪ್ರಧಾನಿಯ ಗುಣಗಾನ ಮಾಡಿದರು.

ಪ್ರತಿಭಾವಂತ ವ್ಯಕ್ತಿ, ಶ್ರೇಷ್ಠ ಸಾಹಿತಿ, ಪತ್ರಕರ್ತ, ಅತ್ಯುತ್ತಮ ವಾಗ್ಮಿ, ಉತ್ತಮ ಸಂಸದೀಯ ಪಟು ಎನಿಸಿದ್ದ ಅವರು ರಾಜಕಾರಣದಲ್ಲಿ ಮುತ್ಸದ್ದಿ ಆಗಿದ್ದರು. ನಿಷ್ಠಾವಂತ ಕಾರ್ಯಕರ್ತನಾಗಿ ಜನಮನ ಗೆದ್ದ ನಾಯಕ, ಉತ್ತಮ ಸ್ನೇಹಿತ. ಯಾರ ಬಗ್ಗೆಯೂ ದ್ವೇಷವಿರದ ಅಜಾತಶತ್ರು ಎನಿಸಿದ್ದರು ಎಂದರು.

ಎ.ಬಿ.ವಾಜಪೇಯಿ 7 ಬಾರಿ ಸಂಸದ, 2 ಬಾರಿ ರಾಜ್ಯಸಭಾ ಸದಸ್ಯ, ಹಲವು ಬಾರಿ ಪ್ರತಿಪಕ್ಷದ ನಾಯಕ, 3 ಬಾರಿ ಪ್ರಧಾನಿ, ಪದ್ಮವಿಭೂಷಣ, ಭಾರತರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದರು. ಭಾರತದ ಆಸ್ಮಿತೆಯ ಛಾಪು ಒತ್ತಿದ ವಿದೇಶಾಂಗ ಸಚಿವ. ಇಷ್ಟೆಲ್ಲಾ ಹುದ್ದೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಜನನಾಯಕ ಭಾರತದಲ್ಲಿ ಮತ್ತೊಬ್ಬರು ಇರಲಿಕ್ಕಿಲ್ಲ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭ ಮಂಡಲ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಕೆ.ಪಿ. ಕುಬೇರಪ್ಪ, ಶಿವಾನಂದ ಸಿ.ಆರ್., ಮಂಜುನಾಥ್ ನೆಲಹೊನ್ನೆ, ಮಾರುತಿ ನಾಯ್ಕ, ಕೆ.ಪಿ. ಶ್ರೀಧರ, ಬಾಬೂ ಹೋಬಳದಾರ್, ಮಂಜು ಇಂಚರ, ಬಡಾವಣೆ ರಂಗಪ್ಪ, ಬೀರಪ್ಪ, ರಘು, ಜುಂಜಾ ನಾಯ್ಕ, ಪೇಟೆ ಪ್ರಶಾಂತ, ಕುಮಾರ ಸ್ವಾಮಿ, ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.

- - -

(ಕೋಟ್‌) ಭಾರತ ಕಂಡ ಅಪ್ರತಿಮ ರಾಜಕೀಯ ಮುತ್ಸದ್ದಿ, ಅಜಾತಶತ್ರು ರಾಜಕಾರಣಿ ಎ.ಬಿ. ವಾಜಪೇಯಿ ಅವರ 101ನೇ ಜಯಂತ್ಯುತ್ಸವವನ್ನು ಹೊನ್ನಾಳಿ ಪಟ್ಟಣದ ಗುರು ಭವನದಲ್ಲಿ ಡಿ.27ರಂದು ಬೆಳಗ್ಗೆ 10 ಗಂಟೆಗೆ ಆಚರಿಸಲಾಗುವುದು.

- ಎಂ.ಪಿ. ರೇಣುಕಾಚಾರ್ಯ, ಬಿಜೆಪಿ ಮುಖಂಡ.

- - -

-25ಎಚ್.ಎಲ್.ಐ1:

ಎ.ಬಿ. ವಾಜಪೇಯಿ ಜನ್ಮ ಶತಮಾನೋತ್ಸವ ಅಂಗವಾಗಿ ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಹೊನ್ನಾಳೀ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು , ಬ್ರೆಡ್ ವಿತರಿಸಲಾಯಿತು.