ದಾಬಸ್‍ಪೇಟೆ: ದೇಶದ ಅಭಿವೃದ್ಧಿ ರಥಕ್ಕೆ ರಾಜಪಥ ನಿರ್ಮಿಸಿ, ಭವ್ಯ ಭಾರತದ ಬೆಳವಣಿಗೆಗೆ ಭರವಸೆಯ ಬೆಳಕಾಗಿ ನಿಂತವರು ಅಟಲ್‍ ಜೀ, ದೇಶ ಕಂಡ ಪ್ರಧಾನಿಗಳ ಪಟ್ಟಿಯಲ್ಲಿ ಅಟಲ್‍ಜೀ ಅವರಿಗೆ ವಿಶೇಷ ಸ್ಥಾನಮಾನವಿದೆ, ತಮ್ಮ ದೃಢ ನಿರ್ಧಾರಗಳಿಂದ ಇಡೀ ವಿಶ್ವವನ್ನೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಧೀಮಂತ ನಾಯಕ, ಜನಮನಗೆದ್ದ ‘ಅಜಾತಶತ್ರು’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು

ದಾಬಸ್‍ಪೇಟೆ: ದೇಶದ ಅಭಿವೃದ್ಧಿ ರಥಕ್ಕೆ ರಾಜಪಥ ನಿರ್ಮಿಸಿ, ಭವ್ಯ ಭಾರತದ ಬೆಳವಣಿಗೆಗೆ ಭರವಸೆಯ ಬೆಳಕಾಗಿ ನಿಂತವರು ಅಟಲ್‍ ಜೀ, ದೇಶ ಕಂಡ ಪ್ರಧಾನಿಗಳ ಪಟ್ಟಿಯಲ್ಲಿ ಅಟಲ್‍ಜೀ ಅವರಿಗೆ ವಿಶೇಷ ಸ್ಥಾನಮಾನವಿದೆ, ತಮ್ಮ ದೃಢ ನಿರ್ಧಾರಗಳಿಂದ ಇಡೀ ವಿಶ್ವವನ್ನೇ ಭಾರತದತ್ತ ನಿಬ್ಬೆರಗಾಗಿ ನೋಡುವಂತೆ ಮಾಡಿದ ಧೀಮಂತ ನಾಯಕ, ಜನಮನಗೆದ್ದ ‘ಅಜಾತಶತ್ರು’ ಎಂದು ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.ಸೋಂಪುರ ಹೋಬಳಿ ನರಸೀಪುರ ಗ್ರಾಪಂ ವ್ಯಾಪ್ತಿಯ ಬಿಜೆಪಿ ಕಾರ್ಯಕರ್ತ ಗ.ನಾಗರಾಜು ಮತ್ತು ಬೈರಣ್ಣ ನಿವಾಸಕ್ಕೆ ಭೇಟಿ ನೀಡಿದ್ದ ವೇಳೆ ದಿ. ಮಾಜಿ ಪ್ರಧಾನಿ ವಾಜಪೇಯಿ 101ನೇ ವರ್ಷದ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು.

ರೈಲ್ವೆ ನಿಲುಗಡೆಗೆ ಮನವಿ:

ಬಿಜೆಪಿ ರೈತ ಮೋರ್ಚಾ ಬೆಂ.ಗ್ರಾ ಜಿಲ್ಲಾಧ್ಯಕ್ಷ ಕೆ.ಪಿ.ಭೃಂಗೇಶ್, ಸೋಲೂರು ಹೋಬಳಿಯ ರೈಲ್ವೆ ನಿಲ್ದಾಣದ ಅಭಿವೃದ್ಧಿ, ಬೆಂಗಳೂರು-ಹಾಸನ ರೈಲು ನಿಲುಗಡೆ, ನಿಲ್ದಾಣಕ್ಕೆ ತೆರಳುವ ರಸ್ತೆ ಅಭಿವೃದ್ಧಿ, ಹೈಮಾಸ್ಟ್ ದೀಪದ ಅಳವಡಿಕೆಗೆ ಕೇಂದ್ರ ಸಚಿವರಿಗೆ ಮನವಿ ಪತ್ರ ಸಲ್ಲಿಸಿದರು.

ಬಿಜೆಪಿ ನಿಕಟ ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗ.ನಾಗರಾಜು, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಹುಚ್ಚಪ್ಪ, ನಿಕಟ ಪೂರ್ವ ಜಿಲ್ಲಾ ವಕ್ತಾರ ಗುಬ್ಬಣ್ಣಸ್ವಾಮಿ, ತಾಪಂ ಮಾಜಿ ಸದಸ್ಯ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸತೀಶ್, ಮುಖಂಡರಾದ ವಿಶ್ವನಾಥ್ ಬಾಬು, ನಂದೀಶ್, ಮಾಕೇನಹಳ್ಳಿ ಪ್ರಕಾಶ್, ಮಾರಗೊಂಡನಹಳ್ಳಿ ರಮೇಶ್, ಭೀಮರಾಜು, ಸೋಲೂರು ಹೋಬಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಎಂ ಮಂಜುನಾಥ್‌ ಹಾಗೂ ಬಿಜೆಪಿ ಕಾರ್ಯಕರ್ತರಿದ್ದರು.

ಪೋಟೋ 6 : ನರಸೀಪುರ ಗ್ರಾ.ಪಂ.ವ್ಯಾಪ್ತಿಯ ಮುಖಂಡ ಗ.ನಾಗರಾಜು ನಿವಾಸಕ್ಕೆ ಭೇಟಿ ನೀಡಿದ ಕೇಂದ್ರ ಸಚಿವ ವಿ.ಸೋಮಣ್ಣ ಹಾಗೂ ಹಲವಾರು ಮುಖಂಡರಿದ್ದರು.