ಮಂಗಳೂರು: ಹೊರವಲಯದ ಗುರುಪುರ ಬಂಡಸಾಲೆಯಲ್ಲಿ ವಿ2 ಗಾಯ್ಸ್ ಸಂಘಟನೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಬಸ್‌ನ್ನೇ ಹೋಲುವ ಅಪರೂಪದ ವಿನ್ಯಾಸದ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಮಂಗಳೂರು: ಹೊರವಲಯದ ಗುರುಪುರ ಬಂಡಸಾಲೆಯಲ್ಲಿ ವಿ2 ಗಾಯ್ಸ್ ಸಂಘಟನೆ ವತಿಯಿಂದ ನೂತನವಾಗಿ ನಿರ್ಮಿಸಲಾದ ಬಸ್‌ನ್ನೇ ಹೋಲುವ ಅಪರೂಪದ ವಿನ್ಯಾಸದ ಪ್ರಯಾಣಿಕರ ತಂಗುದಾಣವನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. ಉದ್ಘಾಟನೆ ಸಂದರ್ಭ ಮಂಗಳೂರು ಉತ್ತರ ಶಾಸಕ ಡಾ.ಭರತ್‌ ಶೆಟ್ಟಿ, ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರಾನಂದ ಸ್ವಾಮೀಜಿ ಮತ್ತಿತರರು ಇದ್ದರು. ಮಿನಿ ಬಸ್ಸನ್ನೇ ಮರು ವಿನ್ಯಾಸಗೊಳಿಸಿ ಈ ತಂಗುದಾಣ ನಿರ್ಮಿಸಿರುವುದು ವಿಶೇಷ. ಬಂಡಸಾಲೆ ಹೆಸರಿನ ಈ ನಿಲ್ದಾಣದಲ್ಲಿ ಕೆನರಾ ಬ್ಯಾಂಕ್‌ ಕೊಡುಗೆಯ ಕುಡಿಯುವ ನೀರು, ಗ್ರಂಥಾಲಯ ಮತ್ತಿತರ ವ್ಯವಸ್ಥೆ ಇದೆ.