ಸಾರಾಂಶ
ಕಣಿವೆಯ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಭಕ್ತಿ ಸಂಭ್ರಮದಿಂದ ನಡೆಯಿತು. ದೇವಾಲಯದಲ್ಲಿ ಬೆಳಗ್ಗಿನಿಂದಲೇ ಪವಿತ್ರ ಗಂಗೋದಕದಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ, ನಂತರ ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ತಂದ ಗಂಗಾಜಲ ಅಭಿಷೇಕ ನಡೆಯಿತು.
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪದ ಕಣಿವೆಯ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವವು ಭಕ್ತಿ ಸಂಭ್ರಮದಿಂದ ನಡೆಯಿತು.ರಥೋತ್ಸವ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಪವಿತ್ರ ಗಂಗೋದಕದಿಂದ ರುದ್ರಾಭಿಷೇಕ, ಪಂಚಾಮೃತ ಅಭಿಷೇಕ, ಮಹಾಪೂಜೆ, ತೀರ್ಥ ಪ್ರಸಾದ ವಿನಿಯೋಗ, ನಂತರ ಹೆಬ್ಬಾಲೆ ಗ್ರಾಮಸ್ಥರು ಮೆರವಣಿಗೆಯ ಮೂಲಕ ತಂದ ಗಂಗಾಜಲ ಅಭಿಷೇಕ ನಡೆಯಿತು.
ನಂತರ ವಿವಿಧ ಹೋಮ ಹವನಗಳು ನಡೆದವು. ನಂತರ ಅಭಿಜಿನ್ ಮುಹೂರ್ತದಲ್ಲಿ ದೇವಾಲಯದ ಮುಂಭಾಗದಲ್ಲಿ ವಿವಿಧ ಹೂವಿನಿಂದ ಮತ್ತು ಕೇಸರಿ ಬಣ್ಣದ ತೋರಣಗಳಿಂದ ಅಲಂಕಾರಗೊಂಡಿದ ಬ್ರಹ್ಮ \ರಥದಲ್ಲಿ ಶ್ರೀ ಸ್ವಾಮಿ ವಿಗ್ರಹವನ್ನು ಕುಳ್ಳಿರಿಸಲಾಯಿತು. ಹಿರಿಯ ಅರ್ಚಕರಾದ ರಾಘವೇಂದ್ರ ಆಚಾರ್ ನೇತೃತ್ವದ ನೇತೃತ್ವದ ಅರ್ಚಕರ ತಂಡದಿಂದ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಹೆಬ್ಬಾಲೆಯಿಂದ ಮೆರವಣಿಗೆ ಮೂಲಕ ಗಂಗಾಜಲ ಆಗಮಿಸಿದ ನಂತರ ರಥಕ್ಕೆ ಚಾಲನೆ ನೀಡಲಾಯಿತು.ರಥೋತ್ಸವದಲ್ಲಿ ಅತ್ಯಾಕರ್ಷಕ ಚೆಂಡೆ ವಾದ್ಯ ಪ್ರದರ್ಶನ, ಮಂಗಳ ವಾದ್ಯ ಮೆರವಣಿಗೆ ಮೆರಗು ನೀಡಿತು.
ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್, ಕಾರ್ಯದರ್ಶಿ ಟಿ.ಎನ್. ಶೇಷಾಚಲ, ಸಹ ಕಾರ್ಯದರ್ಶಿ ಕೆ.ಎಲ್. ಮಹೇಶ್ ಕುಮಾರ್, ಕಾರ್ಯಾಧ್ಯಕ್ಷ ಕೆ.ಎಸ್. ಮಾಧವ, ಉಪಾಧ್ಯಕ್ಷ ಕೆ.ಕೆ. ಮಂಜುನಾಥ ಸ್ವಾಮಿ ಸೇರಿದಂತೆ ಸಮಿತಿ ಸದಸ್ಯರು, ಹೆಬ್ಬಾಲೆ ಗ್ರಾಮದ ವಿಶೇಷ ಆಹ್ವಾನಿತರು ಕಣಿವೆ ಸುತ್ತಮುತ್ತಲ ಗ್ರಾಮಗಳ ಭಕ್ತಾದಿಗಳು ಇದ್ದರು.