ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಹೊಸಪೇಟೆ

ಈ ಹಿಂದೆ ರಾಜ್ಯ ಸರ್ಕಾರ ರಾಜ್ಯದ ಎಸ್.ಟಿ ಸಮುದಾಯಕ್ಕೆ ನೀಡಿದ್ದ ಶೇ.7 ರಷ್ಟು ಮೀಸಲಾತಿಯನ್ನು ಯಥಾವತ್ತಾಗಿ ಜಾರಿ ಮಾಡುವಂತೆ ಒತ್ತಾಯಿಸಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.ನಗರದ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ ವಾಲ್ಮೀಕಿ ನಾಯಕ ಸಮಾಜದ ಬಂಧುಗಳು, ಎಸ್. ಟಿ ಸಮುದಾಯಕ್ಕೆ ಶೇ.7 ರಷ್ಟು ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಿದರು.ಪ್ರತಿಭಟನೆಯನ್ನುದ್ದೇಶಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಗುಂಡಿ ರಾಘವೇಂದ್ರ, ಧರ್ಮದರ್ಶಿ ಬಿ.ಎಸ್.ಜಂಬಯ್ಯ ನಾಯಕ, ಮುಖಂಡರಾದ ಗೋಸಲ ಭರಮಪ್ಪ, ಡಾ.ಕೆ.ಪನ್ನಂಗಧರ್, ಕಟಿಗಿ ಜಂಬಯ್ಯ ನಾಯಕ, ಕಿಚಿಡಿ ವಸಂತ, ಎಂ.ಜಂಬಯ್ಯ ನಾಯಕ ಮಾತನಾಡಿದರು.ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳಾದ ಜಗದ್ಗುರು ಡಾ.ಪ್ರಸನ್ನಾನಂದ ಮಹಾಸ್ವಾಮಿಗಳ ಆದೇಶದ ಮೇರೆಗೆ ಸೋಮವಾರ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿಪತ್ರ ಸಲ್ಲಿಸಲಾಗಿದೆ.

ಮೀಸಲಾತಿ ರದ್ದು ಗೊಳಿಸಿರುವ ರಾಜ್ಯ ಉಚ್ಛ ನ್ಯಾಯಾಲಯದ ಅದೇಶದ ವಿರುದ್ದ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಹಾಗೂ ಅನುಭವಿ ಹಿರಿಯ ವಕೀಲರನ್ನು ನೇಮಿಸಲು ರಾಜ್ಯ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಮನವಿಪತ್ರ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಗಳಕಛೇರಿಗೆ ರವಾನಿಸಿ, ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ವಾಲ್ಮೀಕಿ ಸಮಾಜದ ಪ್ರಧಾನ ಕಾರ್ಯದರ್ಶಿ ದೇವರಮನಿ ಶ್ರೀನಿವಾಸ, ಉಪಾಧ್ಯಕ್ಷ ಕಿನ್ನಾಳ ಹನುಮಂತ, ಸಹ ಕಾರ್ಯದರ್ಶಿ ಸಿಂದಿಗೇರಿ ದೇವೇಂದ್ರಪ್ಪ, ಖಜಾಂಚಿ ತಳವಾರ ದುಶ್ಯಂತ ಕುಮಾರ್, ನಿರ್ದೇಶಕರಾದ ಎಸ್.ಎಸ್.ಚಂದ್ರಶೇಖರ್, ಗುಡುಗುಂಟಿ ಮಲ್ಲಿಕಾರ್ಜುನ, ತಾರಿಹಳ್ಳಿ ವೆಂಕಟೇಶ್, ಜಂಬಾನಳ್ಳಿ ವಸಂತ, ನಾಣಿಕೇರಿ ಯಂಕಪ್ಪ, ಸಣ್ಣಕ್ಕಿ ಹುಲುಗಪ್ಪ, ಹೊಸಕೇರಿ ಸಣ್ಣ ವೆಂಕಟೇಶ, ಮಾಳಗಿ ವಸಂತ, ದಂಗಡಿ ನಾಗರಾಜ, ಬಿ.ವೀರಭದ್ರ, ಜಾಗೃತ ನಾಯಕ ಬಳಗದ ಅಧ್ಯಕ್ಷ ಬ್ಯಾಲಾಳ್ ಜನಾರ್ದನ, ಪ್ರಧಾನ ಕಾರ್ಯದರ್ಶಿ ತಳವಾರ ಪಕ್ಕೀರಪ್ಪ, ಗೌರವಾಧ್ಯಕ್ಷ ದುರುಗಪ್ಪ ಪೂಜಾರಿ, ನಗರಸಭೆ ಸದಸ್ಯ ಕಾಮಟಗಿ, ಸಮುದಾಯದ ಮುಖಂಡರಾದ ಕಿಚಿಡಿ ಶ್ರೀನಿವಾಸ, ಕಿಶೋರ್ ಕುಮಾರ್, ಗುಜ್ಜಲ ಗಣೇಶ್, ಗುಂಡಿ ಪ್ರಶಾಂತ, ಬ್ಯಾಂಕ್ ಚಂದ್ರಪ್ಪ, ತಾರಿಹಳ್ಳಿ ಆನಂದ ಕಣ್ಣಿ ಶ್ರೀಕಂಠ, ಪಿ.ವಿ.ವೆಂಕಟೇಶ, ಪಿ.ವೆಂಕೋಬ ನಾಯಕ, ತಾರಿಹಳ್ಳಿ ಶ್ರೀನಿವಾಸ, ಗುಜ್ಜಲ ನಾಗರಾಜ, ತಾರಿಹಳ್ಳಿ ಹನುಮಂತಪ್ಪ, ಜಂಬಾನಳ್ಳಿ ಸಂದೀಪ, ಗುಜ್ಜಲ ನಿಂಗಪ್ಪ, ಕಿಚಿಡಿ ಸುನೀಲ್ ಕುಮಾರ್, ಮರಡಿ ಗಂಗಪ್ಪ, ಮರಡಿ ರಾಮಣ್ಣ, ಬಿ.ಟಿ.ಮಂಜುನಾಥ, ಕೆ.ರಾಮಪ್ಪ, ಕಟಿಗಿ ವಿಜಯ್ ಕುಮಾರ್, ಕಟಿಗಿ ಜಂಬಯ್ಯ, ಕಟಿಗಿ ರಾಮಕೃಷ್ಣ, ಸೊಸೈಟಿ ರಾಮಣ್ಣ, ಡಿ.ವಿರೂಪಾಕ್ಷ, ನೀರಲಿಗಿ ಹುಲುಗಪ್ಪ ಸೇರಿದಂತೆ ಸಮಾಜದ ಬಂಧುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.