ಸಾರಾಂಶ
ಮುಂಡರಗಿ: ವಾಲ್ಮೀಕಿಯವರ ಮೌಲ್ಯ ಹಾಗೂ ಅವರ ಆದರ್ಶ ಗುಣಗಳ ಬಗ್ಗೆ, ಅವರ ತತ್ವಾದರ್ಶಗಳ ಬಗ್ಗೆ ಯುವಪೀಳಿಗೆಗೆ ತಿಳಿಸಿಕೊಡುವುದು ಅವಶ್ಯವಾಗಿದೆ ಎಂದು ತಹಸೀಲ್ದಾರ್ ಎರ್ರಿಸ್ವಾಮಿ ಪಿ.ಎಸ್. ತಿಳಿಸಿದರು.
ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ಹಾಗೂ ವಾಲ್ಮೀಕಿ ಸಮಾಜದ ಆಶ್ರಯದಲ್ಲಿ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಪಪಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ವಾಲ್ಮೀಕಿಯವರು ಮಾನವೀಯ ಮೌಲ್ಯಗಳನ್ನು ಆಧರಿಸಿ ತಪಸ್ಸಿನ ಮೂಲಕ ಜ್ಞಾನಾರ್ಜನೆ ಕಂಡುಕೊಂಡು 24 ಸಾವಿರ ಶ್ಲೋಕಗಳನ್ನು ಹಾಗೂ ರಾಮಾಯಣ ಎಂಬ ಮಹಾಕಾವ್ಯ ರಚಿಸಿ ಜಗತ್ತಿನಾದ್ಯಂತ ಹೆಸರುವಾಸಿಯಾದರು ಎಂದರು.ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ ಮಾತನಾಡಿ, ದೇಶವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ರಾಮಾಯಣ ಎಂಬ ಮಹಾನ್ ಕಾವ್ಯವನ್ನು ರಚಿಸುವ ಮೂಲಕ ಭಾರತೀಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವಲ್ಲಿ ಅವರ ತ್ಯಾಗಮಯಿ ಜೀವನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅದರಂತೆ ಸಮಾಜದವರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದರು.
ವಿಶ್ರಾಂತ ಪ್ರಾಚಾರ್ಯ ಶಂಬುಲಿಂಗ ಚಿಗರಿ ಮಾತನಾಡಿ, ಮಹರ್ಷಿ ವಾಲ್ಮೀಕಿಯವರು ಭಾರತ ಕಂಡ ಮಹಾನ್ ಕವಿ. ನಾಗರಿಕರ ಸಹಕಾರತ್ವದ ಗುಣವನ್ನು ಹಾಗೂ ರಾಮರಾಜ್ಯದ ಪರಿಕಲ್ಪನೆ ಅಳವಡಿಸಿದ ರಾಮಾಯಣವನ್ನು ರಚಿಸಿ ಈ ದೇಶದ ಪ್ರತಿಯೊಬ್ಬರ ಏಳ್ಗೆಗಾಗಿ ಶ್ರಮಿಸಿದರು ಎಂದರು.ಪುರಸಭೆ ಸದಸ್ಯ ನಾಗರಾಜ ಹೊಂಬಳಗಟ್ಟಿ, ಸೋಮಣ್ಣ ಹೈತಾಪೂರ, ಚಂದ್ರು ಪೂಜಾರ, ಬಸವರಾಜ ನವಲಗುಂದ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಮುತ್ತು ಹಾಳಕೇರಿ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ರಾಜಾಭಕ್ಷಿ ಬೆಟಗೇರಿ, ಜ್ಯೋತಿ ಹಾನಗಲ್, ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಮಣ್ಣ ಕೋಳಿ, ಜಿಲ್ಲಾ ಉಪಾಧ್ಯಕ್ಷ ಮೈಲಾರಪ್ಪ ಕಲಕೇರಿ, ಬಿ.ಎಫ್. ಈಟಿ, ಡಾ. ಲಕ್ಷ್ಮಣ್ಣ ಪೂಜಾರ, ಗರುಡಪ್ಪ ಜಂತ್ಲಿ, ಕನಕಪ್ಪ ಕಾತರಕಿ, ದ್ಯಾಮಣ್ಣ ವಾಲಿಕಾರ, ಗಂಗಾಧರ ಅಣ್ಣಿಗೇರಿ, ಪ್ರಭಾವತಿ ಬೆಳವಣಕಿಮಠ, ಈರಣ್ಣ ಗಟ್ಟಿ, ಧ್ರುವಕುಮಾರ ಹೂಗಾರ, ಲಕ್ಷ್ಮಣ್ಣ ತಗಡಿಮನಿ, ಶ್ರೀನಿವಾಸ ಕೊರ್ಲಗಟ್ಟಿ, ವೆಂಕಟೇಶ ಬಂಡೆಣ್ಣವರ, ಮಾರುತಿ ನಾಗರಹಳ್ಳಿ, ಗಣೇಶ ಭರಮಕ್ಕನವರ, ಶೇಖಪ್ಪ ಪೂಜಾರ, ಬಸವರಾಜ ದೇಸಾಯಿ, ದೇವಪ್ಪ ಇಟಗಿ, ಮಂಜುನಾಥ ಮುಧೋಳ ಇತರರು ಇದ್ದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಉದಯಕುಮಾರ ಯಲಿವಾಳ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯಲ್ಲಪ್ಪ ನಾಗಮ್ಮವರ ನಿರೂಪಿಸಿ, ವಂದಿಸಿದರು.