ಸಾರಾಂಶ
ಚಿತ್ರದುರ್ಗದ ಎಸ್‌ಜೆಎಂ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಿದ್ದ ವಾಲ್ಮೀಕಿಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಸಾಮಾನ್ಯನಿಂದ ಹಿಡಿದು ಅಸಮಾನ್ಯ ವ್ಯಕ್ತಿಯಾಗುವ ದಾರಿಯ ಏಳು ಬೀಳುಗಳು, ನಂತರ ಸಿಗುವ ಆತ್ಯಂತಿಕ ಅನುಭವದ ಸಾರದ ಮೊತ್ತವೇ ಮಹರ್ಷಿ ವಾಲ್ಮೀಕಿಗಳು ಎಂದು ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಪಾಲಿಟೆಕ್ನಿಕ್‌ನ ಉಪನ್ಯಾಸಕ ಗಂಗಾಧರ್ ಅಭಿಪ್ರಾಯಪಟ್ಟರು.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮಂಗಳವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಭಾವ ಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಮಾತನಾಡಿದ ಅವರು ವಾಲ್ಮೀಕ ಅವರ ರಾಮಾ್ಣಯದಲ್ಲಿನ ಅಂಶಗಳು ಬದುಕಿಗೆ ದಾರಿದೀಪವಾಗಿವೆ ಎಂದರು.
ಗ್ರಂಥಪಾಲಕ ವೀರಯ್ಯ ಮಾತನಾಡಿ ಯಾವುದೇ ಒಬ್ಬ ಪುಣ್ಯ ಪುರುಷರ ಜೀವನ ಮೌಲ್ಯಗಳು ಒಂದು ಜಾತಿಗೆ ಸೀಮಿತವಲ್ಲ. ಅವು ಎಲ್ಲ ಕಾಲಕ್ಕೂ ಮತ್ತೆ ಸರ್ವಜನಾಂಗಕ್ಕೂ ಅನುಸರಿಸಲು ಯೋಗ್ಯವಾಗಿವೆ. ಹಾಗೆಯೇ ವಾಲ್ಮೀಕಿಯಯವರು ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ನಂತರ ಸಮಾಜ ಸುಧಾರಣೆಯ ಮಾರ್ಗದ ಮಹಾಕಾವ್ಯ ಬರದರೆಂದು ಹೇಳಿದರು. ಕಾಲೇಜಿನ ಅಧೀಕ್ಷಕಕ ಸಿ.ಎನ್ ಮೋಹನ್ ಮಾತನಾಡಿ ಪ್ರಪಂಚದ ಎಲ್ಲ ದಾರ್ಶನಿಕರು ತಮ್ಮ ಬದುಕಿನಲ್ಲಿ ಕಷ್ಟದ ಹಾದಿಯನ್ನ ಕ್ರಮಿಸಿಯೇ ಸಮಾಜ ಸುಧಾರಣೆಯತ್ತ ಸಾಗಿದ್ದಾರೆ. ಮಹರ್ಷಿಗಳೂ ಸಹ ತಮ್ಮ ಜೀವನದಲ್ಲಿ ನೋವು ಸಂಕಷ್ಟ ಎದುರಿಸಿ ಕಡೆಯಲ್ಲಿ ಎಚ್ಚೆತ್ತುಕೊಂಡು ಉತ್ತಮ ಮಾರ್ಗ ಕಂಡುಕೊಂಡು ಸಮಾಜಕ್ಕೆ ಸತ್ಪಥ ತೋರಿಸಿದ್ದಾರೆ ಎಂದರು.ಕಚೇರಿ ಸಿಬ್ಬಂದಿ ರುದ್ರಮೂರ್ತಿ ಎಂ.ಜೆ ಮಾತನಾಡಿ, ತಮ್ಮ ತ್ಯಾಗ ಬಲಿದಾನದಿಂದ ಈ ನಾಡಿಗೆ ಅಮೂಲ್ಯ ಕೊಡುಗೆಗಳನ್ನು ನೀಡಿದಂತಹ ಮಹಾಮಹಿಮರ ಜೀವನದಲ್ಲಿಯೂ ತಪ್ಪುಗಳು ಆಗಿವೆ. ಅವುಗಳು ಮತ್ತೆ ಪುನರಾವರ್ತನೆ ಆಗದಂತೆ ನೋಡಿಕೊಂಡು ಜೀವನದಲ್ಲಿ ಜಾಗೃತಿಯಿಂದ ಮುನ್ನಡೆದು ಈ ಸಮಾಜಕ್ಕೆ ಕೊಡುಗೆಯನ್ನು ನೀಡಿದ್ದಾರೆ. ಅಂತಹವರ ಜಯಂತಿ ಸ್ಮರಣೆ ಕೇವಲ ಔಪಚಾರಿಕವಾಗಿರಬಾರದೆಂದರು. ಕಾಲೇಜಿನ ಬೋಧಕ ಕೆ.ಸುರೇಶ್ ,ಕಚೇರಿ ಸಿಬ್ಬಂದಿ ಲಿಂಗರಾಜು ಇದ್ದರು.