ವಾಲ್ಮೀಕಿ ರಾಮಾಯಣ ಪವಿತ್ರ ಕಾವ್ಯ: ಡಾ.ಕೆ.ಜಿ.ಕಾಂತರಾಜ್

| Published : Oct 18 2024, 12:06 AM IST

ಸಾರಾಂಶ

ತರೀಕೆರೆ, ಶ್ರೀ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಸಾರ್ವಕಾಲಕ್ಕೂ ಪ್ರಸ್ತುತವಾದ ಮತ್ತು ಪವಿತ್ರವಾದ ಮಹಾಕಾವ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಹೇಳಿದರು.

ತರೀಕೆರೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ತರೀಕೆರೆ

ಶ್ರೀ ಮಹರ್ಷಿ ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಸಾರ್ವಕಾಲಕ್ಕೂ ಪ್ರಸ್ತುತವಾದ ಮತ್ತು ಪವಿತ್ರವಾದ ಮಹಾಕಾವ್ಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಹೇಳಿದರು.

ಗುರುವಾರ ತಾಲೂಕು ಅಡಳಿತದಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಮಹರ್ಷಿ ವಾಲ್ಮೀಕಿ ಅವರು ವಿದ್ವತ್ತಿನಿಂದ ಸಂಸ್ಕೃತ ಭಾಷೆಯಲ್ಲಿ ರಾಮಾಯಣ ಮಹಾ ಕಾವ್ಯ ರಚಿಸಿ ಆದಿಕವಿ ಎಂದು ಹೆಸರುವಾಸಿ ಪಡೆದು ಪ್ರತಿಷ್ಠಿತ ಮಹರ್ಷಿಗಳ ಸಾಲಿನಲ್ಲಿ ನಿಲ್ಲುತ್ತಾರೆ. ರಾಮಾಯಣ ಮಹಾಕಾವ್ಯದ ಪ್ರತಿಯೊಂದು ಪಾತ್ರ ಗಳೂ ಮನುಷ್ಯನ ಜೀವನದ ಅನೇಕ ಹಂತಗಳಲ್ಲಿ ಜವಾಬ್ಹಾರಿಯುತವಾಗಿ ತನ್ನ ಕರ್ತವ್ಯ ನಿರ್ವಹಿಸಲು ಮಾರ್ಗದರ್ಶಕವಾಗಿದೆ ಎಂದು ಹೇಳಿದರು.

ರಾಮಾಯಣ ಮಹಾಕಾವ್ಯದ ಒಟ್ಟಾರೆ ಸಾರಾಂಶದಲ್ಲಿ ರಾಮರಾಜ್ಯದ ಪರಿಕಲ್ಪನೆಯನ್ನು ಇಂದಿನ ಸರ್ಕಾರಗಳು ಅಳವಡಿಸಿಕೊಂಡಲ್ಲಿ ರಾಜ್ಯ ಹಾಗೂ ದೇಶವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ನೆರವಾಗುತ್ತದೆ ಎಂದರು.

ಕೆಡಿಪಿ ಸದಸ್ಯ ಎಚ್.ಎನ್. ಮಂಜುನಾಥ್ ಲಾಡ್ ಮಾತನಾಡಿ ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ಇಂದಿಗೂ ಪ್ರಸ್ತುತ ಎಂದರು. ವಾಲ್ಮೀಕಿ ನಾಯಕ ಸಂಘ ಅಧ್ಯಕ್ಷ ಗೋವಿಂದಪ್ಪ, ತಹಸೀಲ್ದಾರ್ ವಿಶ್ವಜಿತ್ ಮೆಹತಾ, ಎಸ್.ಸಿ.ಸೆಲ್ ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಎಲ್.ಎ. ಪರಮೇಶ್, ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ಲಿಂಗರಾಜ್, ಉಪ ತಹಸೀಲ್ದಾರ್ ನಟರಾಜ್, ಕಚೇರಿ ಸಿಬ್ಬಂದಿ ಭಾಗವಹಿಸಿದ್ದರು.17ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ತಾಲೂಕು ಆಡಳಿತದಿಂದ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಉಪ ವಿಭಾಗಾಧಿಕಾರಿ ಡಾ.ಕೆ.ಜಿ. ಕಾಂತರಾಜ್, ವಾಲ್ಮೀಕಿ ನಾಯಕ ಸಂಘ ಅಧ್ಯಕ್ಷ ಗೋವಿಂದಪ್ಪ, ಕೆಡಿಪಿ ಸದಸ್ಯ ಎಚ್.ಎನ್. ಮಂಜುನಾಥ್ ಲಾಡ್, ತಹಸೀಲ್ದಾರ್ ವಿಶ್ವಜಿತ್ ಮೆಹತಾ ಮತ್ತಿತರರು ಇದ್ದರು.