ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಕೃತಿ ವಾಲ್ಮೀಕಿ ರಾಮಾಯಣ: ಎಂ.ರಾಮಪ್ರಸಾದ್

| Published : Oct 18 2024, 12:06 AM IST

ಜಗತ್ತಿನ ಸರ್ವಕಾಲಿಕ ಶ್ರೇಷ್ಠ ಕೃತಿ ವಾಲ್ಮೀಕಿ ರಾಮಾಯಣ: ಎಂ.ರಾಮಪ್ರಸಾದ್
Share this Article
  • FB
  • TW
  • Linkdin
  • Email

ಸಾರಾಂಶ

ಸಾವಿರಾರು ವರ್ಷಗಳ ಹಿಂದೆ ರಚಿಸಿದ ರಾಮಾಯಣವು ಇಂದು ಜಗತ್ತಿನಲ್ಲಿ ಸರ್ವಕಾಲಿಕ ಶ್ರೇಷ್ಠ ಕೃತಿ. ಕವಿ ಕುಲದ ಗುರುವಾದ ವಾಲ್ಮೀಕಿ ಅವರು ಸಾವಿರಾರು ಕವಿ ಮತ್ತು ಸಾಹಿತಿಗಳಿಗೆ ಸ್ಪೂರ್ತಿಯಾಗಿದ್ದಾರೆ, ಇದರ ಪ್ರತಿಫಲವೇ ಕುವೆಂಪುರವರ ಶ್ರೀರಾಮಾಯಣ ದರ್ಶನಂ.

ಕನ್ನಡಪ್ರಭ ವಾರ್ತೆ ನಂಜನಗೂಡು

ಸಾವಿರಾರು ವರ್ಷಗಳ ಹಿಂದೆ ರಚಿಸಿದ ರಾಮಾಯಣವು ಇಂದು ಜಗತ್ತಿನಲ್ಲಿ ಸರ್ವಕಾಲಿಕ ಶ್ರೇಷ್ಠ ಕೃತಿ. ಕವಿ ಕುಲದ ಗುರುವಾದ ವಾಲ್ಮೀಕಿ ಅವರು ಸಾವಿರಾರು ಕವಿ ಮತ್ತು ಸಾಹಿತಿಗಳಿಗೆ ಸ್ಪೂರ್ತಿಯಾಗಿದ್ದಾರೆ, ಇದರ ಪ್ರತಿಫಲವೇ ಕುವೆಂಪುರವರ ಶ್ರೀರಾಮಾಯಣ ದರ್ಶನಂ ಎಂದು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿಯ ಸಮಿತಿ ಉಪಾಧ್ಯಕ್ಷ ಎಂ.ರಾಮಪ್ರಸಾದ್ ಹೇಳಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಾತನಾಡಿದರು.

ಮುಖ್ಯಭಾಷಣಕಾರರಾಗಿ ಮಾತನಾಡಿದ ಕಾಲೇಜಿನ ಕನ್ನಡ ಕನ್ನಡ ಉಪನ್ಯಾಸಕ ಎನ್. ನಾಗರಾಜು ಅವರು ವಾಲ್ಮೀಕಿ ಅವರು ಯಾವ ರೀತಿಯಲ್ಲಿ ತಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಂಡು ಮಹಾನ್ ಗ್ರಂಥವನ್ನು ರಚಿಸಿದ ಸಂಪೂರ್ಣ ಮಾಹಿತಿ ನೀಡಿದರು. ಇಂದು ವಿದ್ಯಾರ್ಥಿಗಳು ರಾಮಯಣ ಓದುವ ಮೂಲಕ ತಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿ ದಾರಿಗೆ ಬರಲು ರಾಮಯಣವು ಸಹಕಾರಿಯಾಗಿದೆ.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಸಿ.ಆರ್.ದಿನೇಶ್ ಮಾತನಾಡಿ, ಇಂದು ರಾಮಾಯಣದ ಆಧಾರದ ಮೇಲೆ ವಿವಿಧ ಭಾಷೆಗಳಲ್ಲಿ ಕಾವ್ಯ, ನಾಟಕ ,ಕಾದಂಬರಿ ಕಥೆಗಳು ರಚನೆಯಾಗಿವೆ. ಜಗತ್ತಿನಲ್ಲಿ ಸತ್ವಯುತವಾದ, ಮೌಲ್ಯಯುತವಾದ ಸಾಹಿತ್ಯ ಸೃಷ್ಟಿಗೆ ರಾಮಾಯಣವು ಪ್ರೇರಣೆಯಾಗಿದೆ .ರಾಮಾಯಣದಲ್ಲಿ ಬರುವ ಪಾತ್ರಗಳು ಭರತ ಖಂಡದ ಅರಣ್ಯಗಳು ಪರ್ವತಗಳು ನದಿಗಳು ಸರೋವರಗಳ ಪ್ರತಿಬಿಂಬಿತವಾಗಿವೆ ಎಂದರು.

ಉಪನ್ಯಾಸಕ ಅಶ್ವತ್ ನಾರಾಯಣ ಗೌಡ, ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಸ್ವಾಮಿಗೌಡ, ಸುಮಾ, ಸುಮಿತ್ರ, ವಸಂತಕುಮಾರಿ, ಪದ್ಮ, ಟಿ.ಕೆ. ರವಿ, ವತ್ಸಲ, ಮೀನಾ, ಹರೀಶ್, ಸುಲಕ್ಷಣ, ಮೋಹನ್, ಮಹದೇವಸ್ವಾಮಿ, ನಿಂಗಯ್ಯ ಇದ್ದರು.