ಹೊಸಕೋಟೆ: ಮಹರ್ಷಿ ವಾಲ್ಮೀಕಿ ಜ್ಞಾನ, ಸತ್ಯ ಮತ್ತು ಧರ್ಮದ ಮಹತ್ವ ಸಾರಿದ ಮಹಾ ಋಷಿ, ಅವರ ಆದರ್ಶಗಳು ಸಮಾಜಕ್ಕೆ ದಾರಿದೀಪ ಎಂದು ತಾವರೆಕೆರೆ ಗ್ರಾಪಂ ಪಿಡಿಒ ಮುನಿಗಂಗಯ್ಯ ತಿಳಿಸಿದರು
ಹೊಸಕೋಟೆ: ಮಹರ್ಷಿ ವಾಲ್ಮೀಕಿ ಜ್ಞಾನ, ಸತ್ಯ ಮತ್ತು ಧರ್ಮದ ಮಹತ್ವ ಸಾರಿದ ಮಹಾ ಋಷಿ, ಅವರ ಆದರ್ಶಗಳು ಸಮಾಜಕ್ಕೆ ದಾರಿದೀಪ ಎಂದು ತಾವರೆಕೆರೆ ಗ್ರಾಪಂ ಪಿಡಿಒ ಮುನಿಗಂಗಯ್ಯ ತಿಳಿಸಿದರು.
ತಾಲೂಕಿನ ತಾವರೆಕೆರೆ ಗ್ರಾಪಂ ಆವರಣದಲ್ಲಿ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ವಾಲ್ಮೀಕಿ ರಚಿಸಿದ ರಾಮಾಯಣ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯ ಅಮೂಲ್ಯ ಕೃತಿ. ರಾಮಾಯಣದಲ್ಲಿ ಮಾನವೀಯ ಮೌಲ್ಯಗಳು, ಕರ್ತವ್ಯನಿಷ್ಠೆ, ತ್ಯಾಗ, ಸಹನೆ, ಸತ್ಯನಿಷ್ಠೆ ಹಾಗೂ ಉತ್ತಮ ನಡವಳಿಕೆ ಜಗತ್ತಿಗೆ ಸಾರಿದ್ದಾರೆ. ಅವರ ಜೀವನ ಮತ್ತು ಚಿಂತನೆಗಳು ಪ್ರತಿಯೊಬ್ಬರಿಗೂ ಸ್ಫೂರ್ತಿ. ಇಂದಿನ ಯುವಜನತೆ ಮಹನೀಯರ ಆದರ್ಶಗಳನ್ನು ಅರ್ಥೈಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ಅವರು ಸಾರಿದ ಮೌಲ್ಯಗಳನ್ನುದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.ಗ್ರಾಪಂ ಮಾಜಿ ಅಧ್ಯಕ್ಷ ಯಳಚಹಳ್ಳಿ ರವಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಕೊಡುಗೆಗಳನ್ನು ಸ್ಮರಿಸುವ ಇಂತಹ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ನನಾಡಿನ ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯ ಮಹತ್ವವನ್ನು ಪರಿಚಯಿಸಲು ಸಹಕಾರಿ. ಮಹನೀಯರ ಜೀವನಚರಿತ್ರೆ ಹಾಗೂ ಅವರ ಸಂದೇಶಗಳನ್ನು ಯುವಜನರಿಗೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಕಾರ್ಯಕ್ರಮದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷರಾದ ರವಿಕುಮಾರ್, ಮಂಜುನಾಥ್, ದೇವತಾ ನಾಗರಾಜ್, ಬಸವ ಪ್ರಕಾಶ್, ಮಾಜಿ ಸದಸ್ಯ ಮಂಚಪ್ಪನಹಳ್ಳಿ ಸುಧಾಕರ್, ಕರವಸೂಲಿಗಾರ ರಾಜಣ್ಣ ಇತರರಿದ್ದರು.ಫೋಟೋ: 26 ಹೆಚ್ಎಸ್ಕೆ 1
ಹೊಸಕೋಟೆ ತಾಲೂಕಿನ ತಾವರೆಕೆರೆ ಗ್ರಾಪಂ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪಿಡಿಒ ಮುನಿಗಂಗಯ್ಯ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.