ದೊಡ್ಡಬಳ್ಳಾಪುರ: ಭಾರತೀಯ ಕೃಷಿ ಸಂಶೋಧನಾ ಪರಿಷತ್ತು, ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೃಷಿ ವಿಜ್ಞಾನ ಸಂಸ್ಥೆಯ ಸಹಯೋಗದಲ್ಲಿ ನರಗನಹಳ್ಳಿ ಗ್ರಾಮದ ಲಕ್ಷ್ಮಮ್ಮ ಅವರ ತಾಕಿನಲ್ಲಿ ಮೌಲ್ಯವರ್ಧನೆಗಾಗಿ ಬಿಳಿರಾಗಿ ತಳಿ ಕೆ.ಎಂ.ಆರ್-340 ಪ್ರಾತ್ಯಕ್ಷಿಕೆಯ ಕುರಿತು ಕ್ಷೇತ್ರೋತ್ಸವ ಹಮ್ಮಿಕೊಳ್ಳಲಾಗಿತ್ತು.

ಕೃಷಿ ವಿಜ್ಞಾನ ಕೇಂದ್ರದ ಗೃಹ ವಿಜ್ಞಾನಿ ಡಾ. ಗೋಪಿಕಾ ಸಿ.ಮುತ್ತಗಿ ಮಾತನಾಡಿ, ರಾಗಿಯು ಪೋಷಕಾಂಶಗಳ ಆಗರವಾಗಿದ್ದು, ಇತ್ತೀಚಿನ ದಿನಗಳಲ್ಲಿ ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ತಳಿಯನ್ನು 2016 ರಲ್ಲಿ ಮಂಡ್ಯದ ವಲಯ ಕೃಷಿ ಸಂಶೋಧನಾ ಕೇಂದ್ರದದಿಂದ ಬಿಡುಗಡೆ ಮಾಡಲಾಗಿದೆ. ಕಾಂಡ ಕೊರಕದ ಬಾಧೆಗೆ ನಿರೋಧಕ ತಳಿಯಾಗಿದೆ ಇದಾಗಿದೆ ಎಂದರು.ಕೆ.ಎಂ.ಆರ್-340 ಬಿಳಿ ರಾಗಿ ತಳಿಯು ಮೌಲ್ಯವರ್ಧನೆಗೆ ಸೂಕ್ತವಾಗಿದ್ದು ಐದು ರೈತರ ತಾಕಿನಲ್ಲಿ ಈ ಪ್ರಾತ್ಯಕ್ಷಿಕೆಯನ್ನು ಕೈಗೊಳ್ಳಲಾಗಿತ್ತು. ಈ ತಳಿಯು ಪೋಷಕಾಂಶಗಳ ಆಗರವಾಗಿದ್ದು, ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳು ಹೇರಳವಾಗಿವೆ. ಈ ತಳಿಯು 95-100 ದಿನಗಳಲ್ಲಿ ಕಟಾವಿಗೆ ಬರುವುದರಿಂದ ಇದನ್ನು ತಡವಾದ ಮುಂಗಾರಿನಲ್ಲಿ ಬೆಳೆಯ ಬಹುದು, ಪ್ರತಿ ಹೆಕ್ಟೇರಿಗೆ 30-35 ಕ್ವಿಂಟಾಲ್ ಕಾಳಿನ ಇಳುವರಿ ಹಾಗೂ 4-5 ಟನ್ ಹುಲ್ಲಿನ ಇಳುವರಿಯನ್ನು ಪಡೆಯಬಹುದೆಂದು ತಿಳಿಸಿದರು. ಪ್ರಾಧ್ಯಾಪಕ ಡಾ. ಜಿ. ಈಶ್ವರಪ್ಪ, ಕೃಷಿಕರು ಪಾಲ್ಗೊಂಡಿದ್ದರು.6ಕೆಡಿಬಿಪಿ1-
ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿಯಲ್ಲಿರುವ ಬೆಂ.ಗ್ರಾ ಜಿಲ್ಲಾ ಕೃಷಿ ವಿಜ್ಞಾನ ಕೇಂದ್ರದಿಂದ ಬಿಳಿ ರಾಗಿ ಪ್ರಾತ್ಯಕ್ಷಿಕೆ-ಕ್ಷೇತ್ರೋತ್ಸವ ನಡೆಯಿತು.