ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿ ಪೂರ್ವಕವಾಗಿ ಮುಕ್ತಾಯಗೊಳಿಸಲಾಯಿತು.
ಕನ್ನಡಪ್ರಭ ವಾರ್ತೆ ಬ್ರಹ್ಮಾವರ
ಇಲ್ಲಿನ ಜಾನುವಾರುಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿವಿಧ ಬಗೆಯ ಹಣ್ಣಿನ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಕುಡುಬಿ ಸೇವಾ ಸಂಘ ಬಿಲ್ಲಾಡಿ ವತಿಯಿಂದ ನಡೆಸಲಾಯಿತು.ಈ ಕಾರ್ಯಕ್ರಮದಲ್ಲಿ ಸೇವಾ ಸಂಘದ ಅಧ್ಯಕ್ಷರಾದ ನಾರಾಯಣ ನಾಯ್ಕ ಜಡ್ಡಿನ ಮನೆ, ಉಪಾಧ್ಯಕ್ಷರಾದ ರಾಮ ನಾಯ್ಕ ಕುಪ್ಪನ ಹಕ್ಲು, ಕಾರ್ಯದರ್ಶಿ ಜಯಪ್ರಕಾಶ್ ನಾಯ್ಕ ಕುಪ್ಪನ ಹಕ್ಲು, ಜೊತೆ ಕಾರ್ಯದರ್ಶಿ ಸತೀಶ್ ನಾಯ್ಕ ಅಂಗಡಿ ಮಕ್ಕಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾದ ಶಂಕರ್ ನಾಯ್ಕ ರೌಳು ಮನೆ, ಸಂದೀಪ್ ನಾಯ್ಕ ರೌಳು ಮನೆ, ಕೃಷ್ಣ ನಾಯ್ಕ ಬೆಣಗಲ್ ಆಣೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಂಕರ್ ನಾಯ್ಕ ರೌಳುಮನೆ ಸಸಿಗಳನ್ನು ನೀಡಿದ್ದರು.
ಈ ಶಾಲೆ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಅಣ್ಣಪ್ಪ ನಾಯ್ಕ ಜಾನುವಾರುಕಟ್ಟೆ, ಸಂಘದ ಅಧ್ಯಕ್ಷರು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರ ಸಮ್ಮುಖದಲ್ಲಿ ಸಸಿಗಳನ್ನು ನೆಡುವುದರ ಮೂಲಕ ಕಾರ್ಯಕ್ರಮ ಯಶಸ್ವಿ ಪೂರ್ವಕವಾಗಿ ಮುಕ್ತಾಯಗೊಳಿಸಲಾಯಿತು.