ವಂದೇ ಮಾತರಂ ಕೇವಲ ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ರಣಮಂತ್ರವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಜೆನ್ ಜಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಕಲಬುರಗಿವಂದೇ ಮಾತರಂ ಕೇವಲ ಗೀತೆಯಲ್ಲ, ಅದು ಭಾರತದ ಸ್ವಾತಂತ್ರ್ಯ ಹೋರಾಟದ ರಣಮಂತ್ರವಾಗಿದೆ ಎಂದು ಚಕ್ರವರ್ತಿ ಸೂಲಿಬೆಲೆ ಹೇಳಿದರು. ನಗರದ ಕೋಟೆಯ ಮುಂಭಾಗದಲ್ಲಿ ಹಿಂದೂ ಮಹಾಗಣಪತಿ ಸಮಿತಿಯಿಂದ ಆಯೋಜಿಸಿದ್ದ ಜೆನ್ ಜಿ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಅವರು, ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ವಂದೇ ಮಾತರಂ ಘೋಷಣೆ ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿತ್ತು. ಭಾರತ ಮಾತೆಗೆ ವಂದನೆ ಸಲ್ಲಿಸುವ ಭಾವನೆ ಈ ಗೀತೆಯಲ್ಲಿದ್ದು, ರಾಷ್ಟ್ರದ ಏಕತೆ ಮತ್ತು ದೇಶಭಕ್ತಿಯ ಸಂಕೇತವಾಗಿದೆ. ವಂದೇ ಮಾತರಂಗೆ ಹೆಚ್ಚಿನ ಗೌರವ ದೊರೆಯಬೇಕು ಎಂದು ಅಭಿಪ್ರಾಯಪಟ್ಟರು.ಮಿಷನರಿಗಳ ಚಟುವಟಿಕೆಗಳ ಕುರಿತು ಮಾತನಾಡಿದ ಅವರು, ವಿದೇಶಿ ಅನುದಾನದ ಬಳಕೆ ನಿಯಂತ್ರಿಸಲು ಎಫ್‌ಸಿಆರ್‌ಎ ಕಾಯ್ದೆ ತರಲಾಗಿದೆ. ವಿದೇಶಿ ಹಣದ ಬಳಕೆಯ ಮೇಲೆ ಕೇಂದ್ರ ಸರ್ಕಾರ ನಿಗಾ ಇಡುವ ವ್ಯವಸ್ಥೆ ರೂಪಿಸಲಾಗಿದೆ. ನೀಟ್ ಪರೀಕ್ಷೆ ಅಕ್ರಮ ಖಂಡನೀಯ, ಅದರ ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸುವ ಪ್ರಯತ್ನಗಳಾಗಿವೆ ಎಂದು ಆರೋಪಿಸಿದರು.ಕಮ್ಯೂನಿಸ್ಟರು ಉತ್ತರ ಭಾರತ ಮತ್ತು ದಕ್ಷಿಣ ಭಾರತದ ನಡುವೆ ದ್ವೇಷದ ವಾತಾವರಣ ನಿರ್ಮಿಸಲು ಯತ್ನಿಸುತ್ತಾರೆ. ಸಮಾಜದಲ್ಲಿ ವಿಭಜನೆ ಸೃಷ್ಟಿಸುವ ಕೆಲಸ ಮಾಡುತ್ತಾರೆ. ಈ ಮೂರು ಶಕ್ತಿಗಳು ಹಿಂದೂ ಸಮಾಜವನ್ನು ಒಡೆಯಲು ಹೊರಟಿದ್ದು, ಅವುಗಳಿಗೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದರು.

ನವ ಭಾರತದ ನಿರ್ಮಾಣ ಶುರುವಾಗಿದೆ: ಗಣೇಶೋತ್ಸವದ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ನಿರ್ಬಂಧಗಳು ಮತ್ತು ಎಚ್ಚರಿಕೆಗಳು ನೀಡಿದ ಪರಿಣಾಮ ಹಿಂದೂ ಸಮಾಜ ಮತ್ತಷ್ಟು ಸಂಘಟಿತವಾಗಿದೆ. ಟಿ. ನರಸೀಪುರ, ಹೂವಿನಹಡಗಲಿ ಮತ್ತು ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಗಣೇಶ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತವಾದರೂ, ಬಳಿಕ ಅದೇ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ಹಿಂದೂ ಸಮಾಜ ಜಾತಿ ಆಧಾರಿತವಾಗಿ ವಿಭಜನೆಯಾಗುತ್ತಿರುವುದು ದುರ್ಬಲತೆಯಾಗಿದೆ. ಆದರೆ, ಗಣೇಶೋತ್ಸವವು ಎಲ್ಲರನ್ನು ಒಗ್ಗೂಡಿಸುವ ಪ್ರಕ್ರಿಯೆಯಾಗಿ ದೇಶದಾದ್ಯಂತ ಬೆಳೆದಿದೆ ಎಂದು ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯಪಟ್ಟರು.ಸಮಿತಿಯ ಅಧ್ಯಕ್ಷ ಶ್ರೀಮಂತ ರಾಜು ನವಲದಿ, ಮಾಜಿ ಸಂಸದ ಡಾ.ಉಮೇಶ್ ಜಾಧವ್, ಬಿಜೆಪಿ ನಗರಾಧ್ಯಕ್ಷ ಚಂದು ಪಾಟೀಲ್, ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಅರುಣಕುಮಾರ ಪಾಟೀಲ್ ಕೊಡಲಹಂಗರಗಾ, ಜಯಶ್ರೀ ಮತ್ತಿಮಡು, ಸಂಜೀವ್ ಗುಪ್ತಾ, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಯುವ ಮುಖಂಡ ಶಿವಕಾಂತ ಮಹಾಜನ್, ಪ್ರಶಾಂತ ಗುಡ್ಡಾ, ಅಶ್ವಿನ್ ಕುಮಾರ್, ಶಿವರಾಜ ಸಂಗೋಳಗಿ, ಸುಮಂಗಲಾ ಚಕ್ರವರ್ತಿ, ಶ್ರೀಶೈಲ ಮೂಲಗೆ, ಶಶಿಕಲಾ ಟೆಂಗಳಿ ಉಪಸ್ಥಿತರಿದ್ದರು.