‘ವಂದೇ ಮಾತರಂ ರಾಷ್ಟ್ರೀಯ ಏಕತೆಗೆ ಪೂರಕವೇ?’ ಎನ್ನುವ ವಿಚಾರದ ಕುರಿತಾದ ಮಂಥನ ಕಾರ್ಯಕ್ರಮ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಕೇಶವ ನಿಲಯದಲ್ಲಿ ನೆರವೇರಿತು.
ಉಡುಪಿ: ಚಿಂತನ ಚಾವಡಿ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಉಡುಪಿ ಘಟಕಗಳ ಜಂಟಿ ಆಶ್ರಯದಲ್ಲಿ ‘ವಂದೇ ಮಾತರಂ ರಾಷ್ಟ್ರೀಯ ಏಕತೆಗೆ ಪೂರಕವೇ?’ ಎನ್ನುವ ವಿಚಾರದ ಕುರಿತಾದ ಮಂಥನ ಕಾರ್ಯಕ್ರಮ ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಾಲಯ ಕೇಶವ ನಿಲಯದಲ್ಲಿ ನೆರವೇರಿತು.ನಟೇಶ್ ಅವರು ಕಾರ್ಯಕ್ರಮದ ಸ್ವರೂಪವನ್ನ ವಿವರಿಸಿದ ಬಳಿಕ ಜಗದೀಶ್ ಪೈ ಅವರು ವಂದೇ ಮಾತರಂ ಹಾಡುವ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಡಾ. ಶಿವಾನಂದ ನಾಯಕ್ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪ್ರಕಾಶ್ ಮಲ್ಪೆ ಅವರು ವಂದೇ ಮಾತರಂ ಹಾಡು ಹುಟ್ಟಿದ ಬಗೆ, ಅದು ಬೆಳೆದು ಬಂದ ರೀತಿ ಮತ್ತು ಅದಕ್ಕೆ ಕತ್ತರಿ ಹಾಕಿದ ಬಗ್ಗೆ ಸಮಗ್ರ ಚಿತ್ರಣವನ್ನು ಸಭೆಯ ಮುಂದಿಟ್ಟರು. ಡಾ. ನಂದನ್ ಪ್ರಭು ಅವರು ವಂದೇ ಮಾತರಂನಲ್ಲಿ ಬರುವ ದುರ್ಗೆಯ ಬಗೆಗಿನ ವರ್ಣನೆ, ಅದು ಭಾರತ ಮಾತೆಯ ತುಲನೆಯೇ ಹೊರತು ಅದು ಪೂಜಾ ವಿಧಾನವಲ್ಲ. ಹಾಗಾಗಿ ಅದು ರಾಷ್ಟ್ರೀಯ ಏಕತೆಗೆ ಪೂರಕವಾಗಿದೆ ಎಂದರು.ಬಳಿಕ ಸಂವಾದ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಸಮಾಜದ ಗಣ್ಯರು, ಚಿಂತಕರು, ವೈದ್ಯರು , ಉದ್ಯಮಿಗಳು, ಉಪನ್ಯಾಸಕರು, ಸಂಘದ ಹಿರಿಯರು ಹೀಗೆ ಎಲ್ಲ ವಿಭಾಗದ ಜನರು ಉಪಸ್ಥಿತರಿದ್ದರು.