ಸಾರಾಂಶ
ಮನೆ ನಿರ್ಮಿಸಿದ ಮೇಲೆ ನಜೀರುದ್ದೀನ್ ಬಿಸರಳ್ಳಿ ವರಮಹಾಲಕ್ಷ್ಮೀ ಹಬ್ಬದ ದಿನದಂದೆ ಗೃಹಪ್ರವೇಶ ಮಾಡಿದ್ದರು. ಹಿಂದೂ ಸಂಪ್ರದಾಯದಂತೆಯೇ ಕೆಲವೊಂದು ಆಚರಣೆ ಮಾಡಿ ಲಕ್ಷ್ಮಿ ಪೂಜೆ ನೆರವೇರಿಸಿದ್ದರು. ಹೀಗಾಗಿ, ಅಲ್ಲಿಂದ ಮನೆಯಲ್ಲಿ ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಿದ್ದಾರೆ.
ಕೊಪ್ಪಳ:
ಸಾಮಾನ್ಯವಾಗಿ ಹಿಂದೂಗಳೇ ವರಮಹಾಲಕ್ಷ್ಮೀ ಪೂಜೆಯನ್ನು ಪ್ರಧಾನವಾಗಿ ಆಚರಿಸುವುದು ಸಂಪ್ರದಾಯ. ಆದರೆ, ಇಲ್ಲೊಂದು ಮುಸ್ಲಿಂ ಕುಟುಂಬ ವರಮಹಾಲಕ್ಷ್ಮೀ ಪೂಜೆ ನೆರವೇರಿಸುವ ಮೂಲಕ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದೆ.ತಾಲೂಕಿನ ಅಳವಂಡಿಯ ನಿವಾಸಿ ನಜೀರುದ್ದೀನ್ ಬಿಸರಳ್ಳಿ ನಿವಾಸದಲ್ಲಿ ಏಳೆಂಟು ವರ್ಷದಿಂದ ವರಮಹಾಲಕ್ಷ್ಮೀ ಪೂಜೆ ಮಾಡಿಕೊಂಡು ಬರಲಾಗುತ್ತಿದೆ.
ಶ್ರಾವಣ ಮಾಸದಲ್ಲಿ ಮನೆ ಸ್ವಚ್ಛಗೊಳಿಸಿ ಹಿಂದೂ ಸಂಪ್ರದಾಯದಂತೆ ತಳಿರು-ತೋರಣ ಕಟ್ಟಿ, ಶ್ರಾವಣ ಆಚರಿಸುತ್ತಾರೆ. ಶ್ರಾವಣ ಆಚರಣೆಯಲ್ಲಿಯೇ ಬರುವ ವರಮಹಾಲಕ್ಷ್ಮೀ ಪೂಜೆ ಮಾಡುತ್ತಾರೆ.ಏಕೆ ವರಮಹಾಲಕ್ಷ್ಮೀ ಪೂಜೆ:
ಮನೆ ನಿರ್ಮಿಸಿದ ಮೇಲೆ ನಜೀರುದ್ದೀನ್ ಬಿಸರಳ್ಳಿ ವರಮಹಾಲಕ್ಷ್ಮೀ ಹಬ್ಬದ ದಿನದಂದೆ ಗೃಹಪ್ರವೇಶ ಮಾಡಿದ್ದರು. ಹಿಂದೂ ಸಂಪ್ರದಾಯದಂತೆಯೇ ಕೆಲವೊಂದು ಆಚರಣೆ ಮಾಡಿ ಲಕ್ಷ್ಮಿ ಪೂಜೆ ನೆರವೇರಿಸಿದ್ದರು. ಹೀಗಾಗಿ, ಅಲ್ಲಿಂದ ಮನೆಯಲ್ಲಿ ಪ್ರತಿ ವರ್ಷ ವರಮಹಾಲಕ್ಷ್ಮೀ ಪೂಜೆ ಪ್ರಾರಂಭಿಸಿದ್ದಾರೆ. ಲಕ್ಷ್ಮೀ ಪೂಜೆಯಿಂದ ನಮಗೆ ಶುಭವೇ ಆಗಿದೆ ಎನ್ನುತ್ತಾರೆ ನಜೀರುದ್ದೀನ್ ಬಿಸರಳ್ಳಿ.