ಸಾರಾಂಶ
ಇಬ್ಬರು ಹೊರಜಿಲ್ಲೆಯ ಯುವಕರು ಪ್ರವಾಸಕ್ಕೆಂದು ವರಂಗಕ್ಕೆ ಆಗಮಿಸಿದ್ದರು. ಈ ವೇಳೆ ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ ಈಜಿಕೊಂಡು ಸಾಗುವ ಹುಚ್ಚಾಟಕ್ಕೆ ಪ್ರಯತ್ನಿಸಿದ್ದಾರೆ. ಆದರೆ ನೀರಿನ ಮಧ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಪರದಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕಾರ್ಕಳ
ಈಜಲು ಹೋದ ಯುವಕರು ಮುಳುಗುವಾಗ ಪ್ರವಾಸಿಗರೇ ರಕ್ಷಿಸಿದ ಘಟನೆ ಹೆಬ್ರಿ ತಾಲೂಕಿನ ವರಂಗ ಜೈನ ಮಠದ ಕೆರೆಯಲ್ಲಿ ಶನಿವಾರ ನಡೆದಿದೆ. ಈ ಮೂಲಕ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.ಇಬ್ಬರು ಹೊರಜಿಲ್ಲೆಯ ಯುವಕರು ಪ್ರವಾಸಕ್ಕೆಂದು ವರಂಗಕ್ಕೆ ಆಗಮಿಸಿದ್ದರು. ಈ ವೇಳೆ ಕೆರೆಯಲ್ಲಿ ಒಂದು ದಡದಿಂದ ಕೆರೆ ಮಧ್ಯೆ ಇರುವ ಜೈನ ಮಠಕ್ಕೆ ಈಜಿಕೊಂಡು ಸಾಗುವ ಹುಚ್ಚಾಟಕ್ಕೆ ಪ್ರಯತ್ನಿಸಿದ್ದಾರೆ. ಆದರೆ ನೀರಿನ ಮಧ್ಯದಲ್ಲಿ ಯುವಕರು ಈಜಲು ಸಾಧ್ಯವಾಗದೇ ಪರದಾಡಿದ್ದಾರೆ. ಈ ಸಂದರ್ಭ ಇಲ್ಲಿಗೆ ಆಗಮಿಸಿದ್ದ ಪ್ರವಾಸಿಗರೇ ಲೈಫ್ ಜಾಕೆಟ್ ಬಿಸಾಡಿ ಯುವಕರನ್ನು ರಕ್ಷಿಸಿದ್ದಾರೆ.ಸ್ಥಳಕ್ಕೆ ಆಗಮಿಸಿದ ಬಸದಿಯ ಪುರೋಹಿತರು ಯುವಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಈ ಘಟನೆ ಬಗ್ಗೆ ಮಠದ ಆಡಳಿತ ಮಂಡಳಿಯನ್ನು ವಿಚಾರಿಸಿದಾಗ, ಘಟನೆಯು ದೋಣಿಯ ಅಂಬಿಗ ಹಾಗೂ ಜೈನಮಠದ ಪೂಜಾರಿ ಊಟಕ್ಕೆ ತೆರಳಿದ ವೇಳೆ ಈ ಯುವಕರು ನೀರಿಗಿಳಿದು ಹುಚ್ಚಾಟ ನಡೆಸಿದ್ದಾರೆ. ಈಗಾಗಲೇ ಮಠದ ಆವರಣ ಸೇರಿದಂತೆ ಎಲ್ಲ ಕಡೆಗಳಲ್ಲಿ ಸೂಚನಾ ಫಲಕ ಹಾಗೂ ಸಿಸಿಟಿವಿ ಹಾಕಲಾಗಿದೆ. ಮಠದ ಆಡಳಿತ ಮಂಡಳಿಯು ಮೂಲಸೌಕರ್ಯ ಸೇರಿದಂತೆ ಕೆರೆಬಸದಿಗೆ ಆಗಮಿಸುವ ಭಕ್ತರಿಗೆ ದೋಣಿಯಲ್ಲಿ ಸಾಗಲು ಲೈಫ್ ಜಾಕೆಟ್‌ಗಳನ್ನು ವಿತರಿಸಲಾಗಿದೆ ಎಂದು ವರಂಗ ಮಠದ ಮ್ಯಾನೇಜರ್ ಯುವರಾಜ್ ಆರಿಗ ತಿಳಿಸಿದ್ದಾರೆ.