ಪೇಪರ್‌ ಗೋದಾಮಿನಲ್ಲಿದ್ದ ಉಡ ಸಂರಕ್ಷಣೆ

| Published : May 29 2024, 12:46 AM IST

ಸಾರಾಂಶ

ಪೇಪರ್‌ ಗೋದಾಮಿನಲ್ಲಿದ್ದ ಉಡ ಪ್ರಾಣಿಯನ್ನು ಸಂರಕ್ಷಣೆ ಮಾಡಿರುವುದು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದ ಐಟಿಸಿ ಟಿನ್‌ ಫ್ಯಾಕ್ಟರಿಯ ಮೆಟ್ರೋ ನಿಲ್ದಾಣ ಸಮೀಪದ ಖಾಸಗಿ ಪೇಪರ್‌ ಗೋದಾಮಿನೊಳಗೆ ನುಗ್ಗಿದ್ದ ಬೃಹತ್‌ ಗಾತ್ರದ ಉಡವನ್ನು (ಮಾನಿಟರ್‌ ಲಿಝರ್ಡ್‌) ಸಂರಕ್ಷಿಸುವಲ್ಲಿ ವನ್ಯಜೀವಿ ಸಂರಕ್ಷಕರು ಯಶಸ್ವಿಯಾಗಿದ್ದಾರೆ.

ಪೇಪರ್‌ ಗೋದಾಮಿನೊಳಗೆ ನುಸುಳಿದ್ದ ‘ಉಡ’ದ ಬಾಲವನ್ನು ಕಂಡಿದ್ದ ಕೆಲವರು ಹಾವು ಎಂದು ಭಾವಿಸಿ, ಬಿಬಿಎಂಪಿ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್‌ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೇ ಕಾರ್ಯೋನ್ಮುಖರಾದ ಪ್ರಸನ್ನ ಅವರು, ಟಿನ್ ಫ್ಯಾಕ್ಟರಿ ಸಮೀಪವೇ ಇದ್ದ ವನ್ಯಜೀವಿ ಸಂರಕ್ಷಕ ಸೈಯದ್‌ ನಯಾಜ್‌ ಪಾಷಾ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಶೀಲಿಸಲಾಗಿ ಉಡ ಎಂಬುದು ಖಚಿತಗೊಂಡಿತ್ತು.

ಬೃಹತ್‌ ಗಾತ್ರದ ಉಡವನ್ನು ಸಂರಕ್ಷಿಸಿದ ಸೈಯದ್‌ ನಯಾಜ್‌ ಪಾಷಾ ಅವರು, ಪ್ರಸನ್ನ ಕುಮಾರ್‌ ಅವರೊಂದಿಗೆ ಸೇರಿ ಸೂಕ್ತ ಆವಾಸ ಸ್ಥಳದಲ್ಲಿ ಬಿಡುಗಡೆ ಮಾಡಿದರು.

ಹಾವು ಕಂಡರೆ ಸಂಪರ್ಕಿಸಿ

ನಗರದಲ್ಲಿ ಎಲ್ಲಿಯಾದರೂ ಹಾವುಗಳು ಮನೆ, ಗೋದಾಮು, ಉದ್ಯಾನವನ, ಕಾಂಪೌಂಡ್‌ ಸೇರಿದಂತೆ ಇತರೆಡೆಗಳಲ್ಲಿ ಪತ್ತೆಯಾದರೆ ಕೊಲ್ಲದೆ, ಕೂಡಲೇ ಮಾಹಿತಿ ನೀಡುವಂತೆ ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್‌ ಅವರು ಮನವಿ ಮಾಡಿದ್ದಾರೆ. ವನ್ಯಜೀವಿ ಸಂರಕ್ಷಣಾ ಸಹಾಯವಾಣಿ 99027 94711 ಕರೆ ಮಾಹಿತಿ ಮಾಹಿತಿ ನೀಡಬಹುದು.--

ಚಿತ್ರ: ಐಟಿಸಿ ಟಿನ್‌ ಫ್ಯಾಕ್ಟರಿ ಬಳಿಯ ಖಾಸಗಿ ಪೇಪರ್‌ ಗೋದಾಮಿಗೆ ನುಗ್ಗಿದ್ದ ಉಡವನ್ನು ಪ್ರಾಣಿ ಕಲ್ಯಾಣ ಪರಿಪಾಲಕ ಪ್ರಸನ್ನ ಕುಮಾರ್‌ ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಬಿಟ್ಟರು.