ಬಾಳೆಹೊನ್ನೂರು ಜೇಸಿಐಗೆ ವಿವಿಧ ಪ್ರಶಸ್ತಿ: ಇಬ್ರಾಹಿಂ ಶಾಫಿ

| Published : Jul 04 2025, 11:50 PM IST

ಬಾಳೆಹೊನ್ನೂರು ಜೇಸಿಐಗೆ ವಿವಿಧ ಪ್ರಶಸ್ತಿ: ಇಬ್ರಾಹಿಂ ಶಾಫಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾಳೆಹೊನ್ನೂರು, ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಗೆ ಈ ವರ್ಷದ ವಿವಿಧ ಉತ್ತಮ ಕಾರ್ಯಗಳಿಗಾಗಿ ಜೇಸಿ ವಲಯ 14 ರಿಂದ ವಿವಿಧ ಪ್ರಶಸ್ತಿ ದೊರೆತಿದೆ ಎಂದು ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದರು.

ಜೇಸಿಐ ಭಾರತ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಜೇಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆಗೆ ಈ ವರ್ಷದ ವಿವಿಧ ಉತ್ತಮ ಕಾರ್ಯಗಳಿಗಾಗಿ ಜೇಸಿ ವಲಯ 14 ರಿಂದ ವಿವಿಧ ಪ್ರಶಸ್ತಿ ದೊರೆತಿದೆ ಎಂದು ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ ತಿಳಿಸಿದರು.ಕೊಪ್ಪದ ಯಸ್ಕಾನ್ ಹಾಲ್‌ನಲ್ಲಿ ನಡೆದ ಜೇಸಿಐ ಭಾರತ ವಲಯ 14ರ ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೇಸಿ ವಲಯಾಧ್ಯಕ್ಷ ವಿಜಯಕುಮಾರ್ ಪ್ರಶಸ್ತಿಗಳನ್ನು ಘೋಷಣೆ ಮಾಡಿದ್ದು, ಜೇಸಿ ವಲಯದ ಘಟಕಗಳಲ್ಲಿ ಬಾಳೆಹೊನ್ನೂರು ಜೇಸಿ ಸಂಸ್ಥೆ ಈ ವರ್ಷ ನಡೆಸಿದ ಕಾರ್ಯಕ್ರಮಗಳಿಗಾಗಿ ವಲಯದ ಅತ್ಯುತ್ತಮ ಘಟಕ, ಸಂಸ್ಥೆ ಕಾರ್ಯದರ್ಶಿ ವಿ.ಅಶೋಕ್ ಅವರಿಗೆ ವಲಯದ ಉತ್ತಮ ಕಾರ್ಯದರ್ಶಿ ಪ್ರಶಸ್ತಿ ದೊರೆತಿದೆ.ಇನ್ನುಳಿದಂತೆ ಬಾಳೆಹೊನ್ನೂರು ಘಟಕವು ಈ ವರ್ಷ ನಡೆಸಿದ ವಿವಿಧ ಕಾರ್ಯಕ್ರಮಗಳಿಗೆ ಜೇಸಿ ವಲಯ ಉಪಾಧ್ಯಕ್ಷ, ಜೇಸಿ ವಲಯ ನಿರ್ದೇಶಕರಿಂದ ಒಟ್ಟು11 ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. 2025ನೇ ಸಾಲಿನ ಅರ್ಧ ವರ್ಷದಲ್ಲಿ ಸ್ಥಳೀಯ ಮಟ್ಟದಲ್ಲಿ ಸಂಸ್ಥೆ ನೀಡಿರುವ ವಿವಿಧ ಸಮಾಜಸೇವಾ ಚಟುವಟಿಕೆಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ ಎಂದರು.ಪ್ರಸಕ್ತ ಸಾಲಿನ ಇನ್ನುಳಿದ ಜೇಸಿ ಅರ್ಧ ವರ್ಷದಲ್ಲಿ ಸ್ಥಳೀಯ ಘಟಕ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆ ಯಲ್ಲಿದ್ದು, ಪ್ರಮುಖವಾಗಿ ಆರೋಗ್ಯ, ಕ್ರೀಡೆ, ಶಿಕ್ಷಣ ಕ್ಷೇತ್ರಗಳಲ್ಲಿ ವಿವಿಧ ಕಾರ್ಯಕ್ರಮ ನಡೆಸಲಾಗುವುದು ಎಂದು ಹೇಳಿದರು.ಮಧ್ಯವಾರ್ಷಿಕ ಸಮ್ಮೇಳನದಲ್ಲಿ ಜೇಸಿ ಕಾರ್ಯದರ್ಶಿ ವಿ.ಅಶೋಕ್, ಜೇಸಿಐ ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಡಾ.ನವೀನ್ ಲಾಯ್ಡ್ ಮಿಸ್ಕಿತ್, ಪೂರ್ವಾಧ್ಯಕ್ಷ ಎನ್.ಶಶಿಧರ್, ಎಸ್.ಎಲ್.ಚೇತನ್, ಸುಧಾಕರ್, ಚೈತನ್ಯ ವೆಂಕಿ, ಶಾಹಿದ್ ಮತ್ತಿತರರು ಭಾಗವಹಿಸಿದ್ದರು. ೩೦ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಜೇಸಿ ಸಂಸ್ಥೆಯು ಪ್ರಸಕ್ತ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳಿಗೆ ಜೇಸಿಐ ವಲಯದ ಮದ್ಯ ವಾರ್ಷಿಕ ಸಮ್ಮೇಳನದಲ್ಲಿ ವಿವಿಧ ಪ್ರಶಸ್ತಿ ಸ್ವೀಕರಿಸಿತು. ಇಬ್ರಾಹಿಂ ಶಾಫಿ, ಎನ್.ಶಶಿಧರ್, ಎಸ್.ಎಲ್.ಚೇತನ್, ವಿ.ಅಶೋಕ್, ಶಾಹಿದ್ ಇದ್ದರು.