ಗ್ರಾಪಂನಿಂದ ₹2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ

| Published : Jun 15 2024, 01:07 AM IST

ಗ್ರಾಪಂನಿಂದ ₹2 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು ₹2 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ₹1.50 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಷ್ಟ್ರೀಯ ಲಾಂಛನದ ರಾಷ್ಟ್ರಧ್ವಜ ಸ್ತಂಭ ಸಹ ನಿರ್ಮಿಸಲಾಗಿದ್ದು, ಗ್ರಾಪಂ ಅಧ್ಯಕ್ಷ ಟಿ.ಜಿ. ರಮೇಶ್ ಗೌಡ ಲೋಕಾರ್ಪಣೆಗೊಳಿಸಿದ್ದಾರೆ.

- ತಿಮ್ಲಾಪುರದಲ್ಲಿ ರಾಷ್ಟ್ರಧ್ವಜ ಸ್ತಂಭ ಉದ್ಘಾಟಿಸಿ ಅಧ್ಯಕ್ಷ ರಮೇಶ ಗೌಡ ಹೇಳಿಕೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ಸುಮಾರು ₹2 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲಾಗಿದೆ. 15ನೇ ಹಣಕಾಸು ಯೋಜನೆಯಡಿ ₹1.50 ಲಕ್ಷ ವೆಚ್ಚದಲ್ಲಿ ಗ್ರಾಮ ಪಂಚಾಯಿತಿ ಆವರಣದಲ್ಲಿ ರಾಷ್ಟ್ರೀಯ ಲಾಂಛನದ ರಾಷ್ಟ್ರಧ್ವಜ ಸ್ತಂಭ ಸಹ ನಿರ್ಮಿಸಲಾಗಿದ್ದು, ಗ್ರಾಪಂ ಅಧ್ಯಕ್ಷ ಟಿ.ಜಿ. ರಮೇಶ್ ಗೌಡ ಲೋಕಾರ್ಪಣೆಗೊಳಿಸಿದರು.

ಬಳಿಕ ಮಾತನಾಡಿದ ಅವರು, 7 ಗ್ರಾಮಗಳ ವ್ಯಾಪ್ತಿ ಹೊಂದಿರುವ ತಿಮ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷನಾದ ನಂತರ ₹2 ಕೋಟಿ ಅನುದಾನಲ್ಲಿ ಗ್ರಾಪಂ ವತಿಯಿಂದ ಜಿಲ್ಲಾ ಪಂಚಾಯಿತಿ ಯೋಜನೆ ಅಮೃತ ಸರೋವರ ಯೋಜನೆಯಡಿ ಬೂದಗಟ್ಟೆ ಕೆರೆ ನೀರು ಇಂಗಿಸುವ ಕಾಮಗಾರಿ ಉತ್ತಮವಾಗಿ ಜಾರಿಗೊಳಿಸಲಾಗಿದೆ. ಈ ಸಾಧನೆ ಪರಿಗಣಿಸಿ ಸರ್ಕಾರ ತಿಮ್ಮಾಪುರ ಗ್ರಾ.ಪಂ.ಗೆ 2ನೇ ಬಹುಮಾನ ನೀಡಿ ಪುರಸ್ಕರಿಸಿದೆ, ಪ್ರಮಾಣ ಪತ್ರ ಹಾಗೂ ಮಹಾತ್ಮ ಗಾಂಧೀಜಿ ಭಾವಚಿತ್ರವಿರುವ ಪಾರಿತೋಷಕ ಬಹುಮಾನವಾಗಿ ನೀಡಿದೆ ಎಂದರು.

ಪ್ರಸ್ತುತ ಹೊನ್ನಾಳಿ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷನಾಗಿಯೂ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಅಲ್ಲಿಯೂ ಸುಂದರವಾದ ರಾಷ್ಟ್ರೀಯ ಲಾಂಛನದೊಂದಿಗೆ ರಾಷ್ಟ್ರಧ್ವಜ ಕಟ್ಟೆ ನಿರ್ಮಿಸಲಾಗಿದೆ. ತಿಮ್ಲಾಪುರ ಗ್ರಾಪಂ ವ್ಯಾಪ್ತಿಯಲ್ಲಿ ₹5 ಲಕ್ಷ ಅನುದಾನದಲ್ಲಿ ಶಾಲಾ ಕೊಠಡಿಗಳ ನಿರ್ಮಾಣ, ಹಳ್ಳ ಮತ್ತು ಕೆರೆಗಳ ಹೊಳೆತ್ತುವುದು, ಬಾಕ್ಸ್‌ ಚರಂಡಿಗಳು, ₹5 ಲಕ್ಷ ವೆಚ್ಚದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ತಲಾ ₹5 ಲಕ್ಷದಂತೆ ಒಟ್ಟು ₹10 ಲಕ್ಷ ಅನುದಾನದಲ್ಲಿ 2 ಶೌಚಾಲಯಗಳನ್ನು ನಿರ್ಮಿಸಲಾಗಿದೆ ಎಂದರು.

ಅಲ್ಲದೇ, ₹15 ಲಕ್ಷ ವೆಚ್ಚದಲ್ಲಿ ಶಾಲಾ ಕಾಂಪೌಂಡ್‌, ನಮ್ಮ ಹೊಲ ನಮ್ಮ ರಸ್ತೆ ಯೋಜನೆಯಡಿ ರಸ್ತೆಗಳ ನಿರ್ಮಾಣ ಹೀಗೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ. ರಸ್ತೆಗಳ ಪಕ್ಕದಲ್ಲಿ ಹಾಗೂ ಶಾಲಾ ಆವರಣಗಲ್ಲಿ ಪರಿಸರ ಸಂಕ್ಷಣೆಗಾಗಿ ಗಿಡಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದಂಥ ಕಾರ್ಯಕ್ರಮಗಳನ್ನು ಕೂಡ ಗ್ರಾಮ ಪಂಚಾಯಿತಿಯಿಂದ ನಡೆಸಲಾಗಿದೆ ಎಂದು ವಿವರಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ಆರ್.ಶಾಂತಮ್ಮ, ಸದಸ್ಯರಾದ ಮಂಜು ಜಿ. ಅಶ್ವಿನಿ, ಎಸ್.ಲಲಿತಾ ಬಾಯಿ, ಕಿರಣ ಪಿ., ಚಂದ್ರಮ್ಮ, ಟಿ.ಶೇಖರಪ್ಪ, ಗೌರಮ್ಮ ಮಂಜಪ್ಪ, ಅನುಪಮ, ಬಿ.ಎಚ್. ಜಯಪ್ಪ, ಮೂಸಿನಾ ಬೀ, ಮೊಹಮ್ಮದ್ ಆಲಿ, ಹನುಮಂತಪ್ಪ, ಪ್ರೇಮಾ, ಎನ್.ಜಿ. ಮಹೇಶ್, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

- - - -14ಎಚ್.ಎಲ್.ಐ1:

ಹೊನ್ನಾಳಿ ತಾಲೂಕಿನ ತಿಮ್ಲಾಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ನಿರ್ಮಿಸಿದ ರಾಷ್ಟ್ರೀಯ ಲಾಂಛನದ ರಾಷ್ಟ್ರಧ್ವಜ ಕಟ್ಟೆಯನ್ನು ಗ್ರಾಪಂ ಅಧ್ಯಕ್ಷ ಟಿ.ಜಿ ರಮೇಶ್ ಗೌಡ ಉದ್ಘಾಟಿಸಿದರು.