ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಟಿ. ನರಸೀಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ 6.15 ಕೋಟಿ ರು. ಗಳ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಸಂಸದ ಸುನಿಲ್ ಬೋಸ್ ಭೂಮಿ ಪೂಜೆ ನೆರವೇರಿಸಿದರು.ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ನೀಡಿದ ಭರವಸೆಯಂತೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗುತ್ತಿದೆ. ಇಂದು 15 ಹಳ್ಳಿಗಳಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ಮಾಡಲಾಗುತ್ತಿದೆ. ಎಸ್.ಸಿಪಿ ಅನುದಾನದಲ್ಲಿ 3.50 ಕೋಟಿ ಹಾಗೂ ಸಾಮಾನ್ಯ ವರ್ಗದ ಕಾಲೋನಿಗಳ ಅಭಿವೃದ್ಧಿಗೆ 3.10 ಕೋಟಿ, ಒಟ್ಟು 6.15 ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.
ಆನೆ ದಾಳಿ, ಮೃತನ ಕುಟುಂಬಕ್ಕೆ ಉದ್ಯೋಗ - ತಾಲೂಕಿನ ಪರಿಣಾಮಿಪುರ ಗ್ರಾಮದಲ್ಲಿ ಆನೆ ತುಳಿತದಿಂದ ರೈತನೋರ್ವ ಮೃತಪಟ್ಟಿರುವ ಘಟನೆ ನಿಜಕ್ಕೂ ದುರಂತ, ಈ ಘಟನೆ ಸಂಭವಿಸಬಾರದಿತ್ತು. ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ, ಮೃತ ವ್ಯಕ್ತಿಯ ಕುಟುಂಬಕ್ಕೆ ಈಗಾಗಲೇ 5 ಲಕ್ಷ ರು. ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮತ್ತೆ 15 ಲಕ್ಷ ರು. ಗಳ ಪರಿಹಾರ ನೀಡಲಾಗುತ್ತದೆ. ಅವಕಾಶವಿದ್ದಲ್ಲಿ ಮೃತನಕುಟುಂಬಕ್ಕೆ ಉದ್ಯೋಗ ದೊರಕಿಸಿಕೊಡಲಾಗುತ್ತದೆ ಎಂದು ಅವರು ತಿಳಿಸಿದರು.ಸಹಕಾರ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್, ಬನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚನ್ನಕೇಶವ, ಜಿಪಂ ಮಾಜಿ ಸದಸ್ಯ ಹೊನ್ನನಾಯಕ, ಡೇರಿ ಅಧ್ಯಕ್ಷ ರಂಗಸ್ವಾಮಿ, ಎಪಿಎಂಸಿ ಮಾಜಿ ನಿರ್ದೇಶಕ ಬಸವಣ್ಣ, ತಾಪಂ ಮಾಜಿ ಅಧ್ಯಕ್ಷ ಶಿವಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ, ಗ್ರಾಪಂ ಮಾಜಿ ಸದಸ್ಯ ಸೋಮಣ್ಣ, ನಟರಾಜು, ಮಲ್ಲೇಶ್, ನಾರಾಯಣ, ಸುರೇಶ, ಸಿದ್ದರಾಜು,
ತಹಸೀಲ್ದಾರ್ ಟಿ.ಎಸ್. ಸುರೇಶಾಚಾರ್, ಪ್ರಭಾರ ಇಒ ರಂಗಸ್ವಾಮಿ, ಎಇಇ ಪಿ.ಎನ್. ಚರಿತಾ, ಎಇಇ ಸತೀಶ್ ಚಂದ್ರ, ಶಿವರಾಜು, ಸಹಾಯಕ ಸೆಸ್ಕ್ ಎಇಇ ವೀರೇಶ್, ನಿರ್ದೇಶಕರಾದ ಶಾಂತ, ಶ್ವೇತಾ, ರೂಪ, ಬಿಸಿಎಂ ಇಲಾಖೆ ರಾಜಣ್ಣ, ಸಿಡಿಪಿಒ ಗೋವಿಂದರಾಜು, ಲಕ್ಷ್ಮೀಶ್, ಆಹಾರ ಇಲಾಖೆ ಸದಾನಂದ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.