ಸಾರಾಂಶ
ಕನ್ನಡಪ್ರಭ ವಾರ್ತೆ ಗೋಕಾಕ
ಕಬ್ಬಿಗೆ ನ್ಯಾಯುತ ಬೆಲೆ ನಿಗದಿಪಡಿಸುವಂತೆ ಆಗ್ರಹಿಸಿ ನಡೆಸುತ್ತಿರುವ ಧರಣಿ ನಾಲ್ಕನೇ ದಿನವು ಮುಂದುವರೆದಿದ್ದು, ರೈತರ ಚಳುವಳಿಗೆ ವಿವಿಧ ಸಂಘ ಸಂಸ್ಥೆಗಳು, ಕಲಾವಿದರು ಬುಧವಾರ ಬೆಂಬಲ ವ್ಯಕ್ತಪಡಿಸಿದರು.ಕಳೆದ 4 ದಿನಗಳಿಂದ ನಗರದ ನಾಕಾ ನಂ-1ರ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿಯಲ್ಲಿ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದು ಸ್ಥಳದಲ್ಲೆ ಊಟ, ಉಪಹಾರ ನೀಡಿ ರೈತರಿಗೆ ಸಾರ್ವಜನಿಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾ ನಿರತ ಕಬ್ಬು ಬೆಳೆಗಾರರು ಸುಡು ಸುಡು ಬಿಸಿಲಿನ ನಡುವೆಯು ರಸ್ತೆಯ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ.ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನಿಗದಿಪಡಿಸುವವರೆಗೆ ಹೋರಾಟ ಕೈಬಿಡುವುದಿಲ್ಲ ಎಂದು ಆಗ್ರಹಿಸುತ್ತಿರುವ ರೈತರ ಹೋರಾಟದಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಗೋಕಾಕ ಮಾರ್ಗವಾಗಿ ಸಂಕೇಶ್ವರ ತೆರಳುವ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ರಾಜ್ಯ ಸಂಚಾಲಯ ಗಣಪತಿ ಈಳಿಗೇರ, ಪದಾಧಿಕಾರಿಗಳಾದ ಮಹಾದೇವ ಗೂಡೇರ, ಸುರೇಶ ಪರಗನ್ನವರ, ರಾಘವೇಂದ್ರ ನಾಯಿಕ, ಮಹಾದೇವ ಗೂಡೇರ, ಮಾಯಪ್ಪ ಲೋಕೂರೆ, ಮುತ್ತೇಪ್ಪ ಬಾಗನ್ನವರ, ದುಂಡಪ್ಪ ನಂದಗಾಂವಿ, ಮಂಜುಳಾ ಪೂಜೇರ, ಲಕ್ಷ್ಮಣ ಗಡಾದ ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದಾರೆ.
;Resize=(128,128))
;Resize=(128,128))