ಗೋಹತ್ಯೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತ ಅನೇಕ ಕಡೆ ಜಾನುವಾರು ಹತ್ಯೆ ನಡೆಯುವ ಅನುಮಾನ ಇದ್ದು, ತಾಲೂಕು ಆಡಳಿತ ಗೋಹತ್ಯೆ ತಡೆಯಲು ಸನ್ನದ್ಧರಾಗಬೇಕೆಂದು ಆಗ್ರಹಿಸಲಾಯಿತು.
ನರಗುಂದ: ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಅನುಷ್ಠಾನಕ್ಕೆ ಬರುತ್ತಿಲ್ಲ. ಅಧಿಕಾರಿಗಳು ಕಟ್ಟುನಿಟ್ಟಾಗಿ ಕಾಯ್ದೆ ಜಾರಿಗೆ ಮುಂದಾಗಬೇಕೆಂದು ನ್ಯಾಯವಾದಿ ಆರ್.ಸಿ.ಪಾಟೀಲ ಆಗ್ರಹಿಸಿದರು.
ಮಂಗಳವಾರ ಮಿನಿ ವಿಧಾನಸೌಧದಲ್ಲಿ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ತಹಸೀಲ್ದಾರರಿಗೆ ಮನವಿ ಅರ್ಪಿಸಿ ಮಾತನಾಡಿ, ಬಕ್ರೀದ್ ಹಬ್ಬದ ಮೊದಲು ಸಿಆರ್‌ಪಿಸಿ ಸೆಕ್ಷನ್ 144 ಅಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಅಕ್ರಮವಾಗಿ ನಡೆಯುವ ಗೋಹತ್ಯೆಯನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಪಟ್ಟಣ ಸೇರಿದಂತೆ ತಾಲೂಕಿನ ಸುತ್ತಮುತ್ತ ಅನೇಕ ಕಡೆ ಜಾನುವಾರು ಹತ್ಯೆ ನಡೆಯುವ ಅನುಮಾನ ಇದ್ದು, ತಾಲೂಕು ಆಡಳಿತ ಗೋಹತ್ಯೆ ತಡೆಯಲು ಸನ್ನದ್ಧರಾಗಿರಬೇಕೆಂಬ ಆಗ್ರಹಿಸಿದರು. ಭಾರತೀಯ ಕಿಸಾನ ಸಂಘದ ತಾಲೂಕು ಅಧ್ಯಕ್ಷ ನಾಗೇಶ ಅಪ್ಪೋಜಿ ಮಾತನಾಡಿ, ಭಾರತ ಗೋ ಆಧರಿತ ಕೃಷಿಯ ನಾಡು. ಜಗತ್ತಿನಲ್ಲಿ ಗೋವು ಪೂಜಿಸುವ ದೇಶ ಅಂದರೆ ಅದು ಭಾರತ. ಇಂತಹ ದೇಶದಲ್ಲಿ ಗೋಹತ್ಯೆ ನಡೆಯುವುದು ಅಕ್ಷಮ್ಯ ಅಪರಾಧವಾಗಿದೆ. ಗೋಹತ್ಯೆ ಕಂಡುಬಂದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಸರ್ಕಾರ ಎಚ್ಚರಿಕೆಯಿಂದ ಆಡಳಿತ ನಡೆಸಬೇಕೆಂದು ಹೇಳಿದರು.ಮನವಿ ಸ್ವೀಕರಿಸಿ ಮಾತನಾಡಿದ ತಹಸೀಲ್ದಾರ್ ಶ್ರೀಶೈಲ ತಳವಾರ ಅವರು ಗೋ ಸಂರಕ್ಷಣೆ ನೆಪದಲ್ಲಿ ಯಾರೂ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಇಂತಹ ವಿಷಯದಲ್ಲಿ ಯುವಕರು ಸಾಮಾಜಿಕ ಶಾಂತಿ ನೆಲೆಸಲು ಪ್ರಥಮ ಆದ್ಯತೆ ನೀಡಬೇಕು ಎಂದರು.ನಂದೀಶ ಮಠದ, ಸಂಗಪ್ಪ ಪೂಜಾರ ಮಾತನಾಡಿದರು. ಕೃಷ್ಣ ಮಹಾಲಿನಮನಿ, ಸಂಗಪ್ಪ ಪೂಜಾರ, ಮಹಾಂತೇಶ ಹಂಪಣ್ಣವರ, ನಿರಂಜನ ಮಡಿವಾಳರ, ಶ್ರೀನಿವಾಸಪ್ರಸಾದ ಗುಜಮಾಗಡಿ, ಸಚಿನ್ ಸಾಬಳೆ, ಎಚ್.ಪಿ. ಮುದ್ದನಗೌಡ್ರ, ಮಂಜು ಪವಾರ, ಮುತ್ತು ಯಲಿಗಾರ, ಅಭಿಷೇಕ ನವಲಗುಂದ, ಮಂಜುನಾಥ ಮೆಣಸಗಿ, ಚಂದ್ರಗೌಡ ಪಾಟೀಲ, ಗಿರೀಶ ಯಾದವ, ಅಣ್ಣಪ್ಪ ಮಾನೆ, ರಾಜು ಕಲ್ಲಾಪೂರ, ರಾಜೇಶ ಕೊಣ್ಣೂರ ಮುಂತಾದವರು ಇದ್ದರು. ಇಂದು 111 ಮುತ್ತೈದೆಯರಿಂದ ಕುಂಕುಮಾರ್ಚನೆಗದಗ: ಅಧಿಕ ಮಾಸದ ಅಂಗವಾಗಿ ಎಸ್‌ಎಸ್‌ಕೆ ಸಮಾಜ ಬೆಟಗೇರಿ ವತಿಯಿಂದ ಮೇ 27ರಂದು ಅಂಬಾಭವಾನಿ ದೇವಸ್ಥಾನದಲ್ಲಿ 111 ಮುತ್ತೈದೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ, ತರುಣ ಸಂಘ ಹಾಗೂ ಜಗದಂಬಾ ಮಹಿಳಾ ಮಂಡಳದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ದೇವಿಯ ವಿಶೇಷ ಅಲಂಕಾರ, ಮಹಾಪೂಜೆ, ಮಹಾಮಂಗಳಾರತಿ ಹಾಗೂ ಕುಂಕುಮಾರ್ಚನೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.