ಜ.14ರಿಂದ ಯಡೂರಿನಲ್ಲಿ ವಿವಿಧ ಕಾರ್ಯಕ್ರಮ

| Published : Nov 21 2025, 03:15 AM IST

ಸಾರಾಂಶ

2026ರ ಜನವರಿ 14ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಾರ್ಚ್ 6 ರವರೆಗೆ ನಡೆಯಲಿವೆ. ಒಟ್ಟು 51 ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

2026ರ ಜನವರಿ 14ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿದ್ದು, ಮಾರ್ಚ್ 6 ರವರೆಗೆ ನಡೆಯಲಿವೆ. ಒಟ್ಟು 51 ದಿನಗಳ ಕಾಲ ಕಾರ್ಯಕ್ರಮಗಳು ನಡೆಯಲಿದೆ ಎಂದು ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿನ ಶಿವಾನುಭವ ಮಂಟಪದಲ್ಲಿ ನಡೆದ ಪೂರ್ವಭಾವಿ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರಿನಲ್ಲಿ ವೀರಭದ್ರೇಶ್ವರ ದೇವಸ್ಥಾನದ ಕುಂಭೋತ್ಸವ, ಕೃಷ್ಣಾರತಿ, ಇಷ್ಟಲಿಂಗ ಪೂಜೆ, ವೀರಭದ್ರೇಶ್ವರ ಕಲ್ಯಾಣೋತ್ಸವ ವಿವಿಧ ಕಾರ್ಯಕ್ರಮಗಳ ನಡೆಯಲಿವೆ ಎಂದರು. ಮಾರ್ಚ್ 1ರಿಂದ 6 ರವರೆಗೆ ಬಹಳ ವಿಶೇಷವಾದ ಕಾರ್ಯಕ್ರಮಗಳು ಇರುತ್ತವೆ. ಮಾರ್ಚ್ 1 ರಿಂದ 3 ರವರೆಗೆ ನೂತನ ಕಾಶಿ ಜಗದ್ಗುರುಗಳಿಂದ ಇಷ್ಟಲಿಂಗ ಮಹಾಪೂಜೆ. ವೀರಭದ್ರೇಶ್ವರ ಗುಗ್ಗಳೋತ್ಸವ, ವೀರಭದ್ರೇಶ್ವರ ಕಲ್ಯಾಣೋತ್ಸವ, ಅಗ್ನಿ ಪ್ರವೇಶ, ಪುರವಂತರಿಗೆ ವಿಶೇಷವಾದ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಯಡೂರಿನಲ್ಲಿ ನಡೆಯುತ್ತಿರುವ ಪಾಠಶಾಲೆ ವಾರ್ಷಿಕೋತ್ಸವ ಕೂಡ ಹಮ್ಮಿಕೊಳ್ಳಲಾಗಿದೆ. ಮಾರ್ಚ್ 6ರ ಬೆಳಗ್ಗೆ 6 ರಿಂದ 5 ಶಿಖರಗಳಿಗೆ ಪಂಚಪೀಠಾಧೀಶ್ವರರಿಂದ ಕುಂಭೋತ್ಸವ, ತದನಂತರ ಸಂಜೆ ಕೃಷ್ಣಾರ್ತಿ, ಲಕ್ಷ ದೀಪೋತ್ಸವ ಕೂಡ ಜರುಗಲಿದೆ. ಕಾರಣ ಎಲ್ಲ ಭಕ್ತಾದಿಗಳು ಭಾಗವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕರಭಂಟನಾಳ ಶ್ರೀಗಳು, ಜೈನಾಪುರ ಶ್ರೀಗಳು, ಶಿರಶ್ಯಾಡ ಶ್ರೀಗಳು, ಕನ್ನೂರ ಶ್ರೀಗಳು ಹಾಗೂ ಹನುಮಂತಗೌಡ ಬಿರಾದಾರ, ಈರಣ್ಣ ನಾಶಿ, ಪುರವಂತರ ಬಳಗ, ಸಂಜು ಪಂಚಾಳ, ಬಸವರಾಜ ಕಬ್ಬಿನ, ಈರಯ್ಯ ಶಾಸ್ತ್ರೀಗಳು, ಈರಣ್ಣ ಕೋಟ್ಯಾಳ, ಮಲ್ಲು ಹಿಟ್ನಳ್ಳಿ, ಕಾಶಿನಾಥ ಕೋರೆಗೋಳ, ಅನ್ನದಾನೇಶ್ವರ ಶಾಸ್ತ್ರಿಗಳು ಇದ್ದರು.