ಇಂದಿನಿಂದ ಅ.2ರ ವರೆಗೆ ದ.ಕ.ಜಿಲ್ಲೆಯಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮ

| Published : Sep 18 2024, 01:56 AM IST

ಇಂದಿನಿಂದ ಅ.2ರ ವರೆಗೆ ದ.ಕ.ಜಿಲ್ಲೆಯಾದ್ಯಂತ ಬಿಜೆಪಿ ವಿವಿಧ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಎಲ್ಲೆಡೆ ಕಾರ್ಯಕ್ರಮ ಆಯೋಜನೆಯೊಂದಿಗೆ ಪ್ರತಿಯೊಬ್ಬರೂ ಕನಿಷ್ಠ ಒಂದು ಖಾದಿ ಉತ್ಪನ್ನ ಖರೀದಿಸಿ ಖಾದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಸತೀಶ್‌ ಕುಂಪಲ ಹೇಳಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ, ಪಂಡಿತ್‌ ದೀನ್‌ ದಯಾಳ್‌ ಉಪಾಧ್ಯಾಯ ಜನ್ಮ ದಿನಾಚರಣೆ ಮತ್ತು ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಸೆ.18ರಿಂದ ಅ.2ರವರೆಗೆ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಮತ್ತು ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್‌ ಕುಂಪಲ ಹೇಳಿದ್ದಾರೆ.ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜಿಲ್ಲಾ ಯುವಮೋರ್ಚಾ ಈಗಾಗಲೇ ರಕ್ತದಾನದ ಮೂಲಕ ಸೇವಾ ಕಾರ್ಯಕ್ರಮವನ್ನು ಆರಂಭಿಸಿದೆ. ಇನ್ನು ಪ್ರತಿ ಮಂಡಲ, ಎಂಟು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲೂ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಸೇವಾ ಕಾರ್ಯದ ಮೂಲಕ ಪ್ರಧಾನಿ ಮೋದಿಯವರ ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದರು.ಸ್ವಚ್ಛತಾ ಕಾರ್ಯಕ್ರಮ, ಕ್ರೀಡಾ ಸಾಧಕರಿಗೆ ಅಭಿನಂದನೆ, ಅರ್ಹರಿಗೆ ಆಯುಷ್ಮಾನ್‌ ಕಾರ್ಡ್‌ ಮಾಡಿಸಿಕೊಡುವುದು, ರಸಪ್ರಶ್ನೆ, ವಿವಿಧ ಗೋಷ್ಠಿಗಳ ಆಯೋಜನೆ, ಪ್ರತಿ ಬೂತ್‌ ವ್ಯಾಪ್ತಿಯಲ್ಲಿ ಐದು ಗಿಡಗಳನ್ನು ನೆಟ್ಟು ಪೋಷಿಸುವುದು, ಬಿಜೆಪಿ ಸದಸ್ಯತನಾ ಅಭಿಯಾನ ಮುಂದುವರಿಸುವುದು ಇತ್ಯಾದಿ ಕಾರ್ಯಕ್ರಮಗಳ ಜೋಡನೆಯಾಗಿದೆ ಎಂದವರು ಹೇಳಿದರು.ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಎಲ್ಲೆಡೆ ಕಾರ್ಯಕ್ರಮ ಆಯೋಜನೆಯೊಂದಿಗೆ ಪ್ರತಿಯೊಬ್ಬರೂ ಕನಿಷ್ಠ ಒಂದು ಖಾದಿ ಉತ್ಪನ್ನ ಖರೀದಿಸಿ ಖಾದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎಂದು ಸತೀಶ್‌ ಕುಂಪಲ ಹೇಳಿದರು.ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ, ಬಿಜೆಪಿ ಯುವಮೋರ್ಚಾ ದ.ಕ.ಜಿಲ್ಲಾಧ್ಯಕ್ಷ ನಂದನ್‌ ಮಲ್ಯ, ಬಿಜೆಪಿ ಪ್ರಮುಖರಾದ ಪೂಜಾ ಪೈ, ಪ್ರಸನ್ನ ಮಾರ್ತಾ, ಪುರುಷೋತ್ತಮ, ರಾಕೇಶ್‌ ರೈ ಕಡೆಂಜಿ ಇದ್ದರು.