ಸಾರಾಂಶ
ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿ ಬಾಬಾ ದೇವಾಲಯದಲ್ಲಿ ಅ.3 ರಿಂದ 12 ರ ತನಕ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕುಶಾಲನಗರ
ಶ್ರೀ ಶಿರಡಿ ಸಾಯಿ ಟ್ರಸ್ಟ್ ಆಶ್ರಯದಲ್ಲಿ ಕುಶಾಲನಗರ ಸಾಯಿ ಬಾಬಾ ದೇವಾಲಯದಲ್ಲಿ ಅ.3 ರಿಂದ 12 ರ ತನಕ ವಿವಿಧ ಪೂಜಾ ಕಾರ್ಯಕ್ರಮಗಳು ಜರುಗಲಿವೆ ಎಂದು ಟ್ರಸ್ಟ್ ಅಧ್ಯಕ್ಷ ಧರೇಶ್ ಬಾಬು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರುವಾರ ದೇವಾಲಯದಲ್ಲಿ ಅಲಂಕಾರ ಪೂಜಾ ಕಾರ್ಯಕ್ರಮ, 4 ರಂದು ಗಾಯತ್ರಿ ದೇವಿ ಪೂಜಾ ಕಾರ್ಯಕ್ರಮ, 5 ರಂದು ಅನ್ನಪೂರ್ಣ ದೇವಿ, 6 ರಂದು ಲಲಿತ ತ್ರಿಪುರ ಸುಂದರಿ ದೇವಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.
7 ರಂದು ಮಹಾ ಚಂಡಿಕಾ ದೇವಿ ಪೂಜಾ ಕಾರ್ಯಕ್ರಮ, 8 ರಂದು ಮಹಾಲಕ್ಷ್ಮಿ ದೇವಿ ವಿಶೇಷ ಪೂಜಾ ಕಾರ್ಯಕ್ರಮಗಳು, 9 ರಂದು ಸರಸ್ವತಿ ದೇವಿ ಆರಾಧನೆ 10 ರಂದು ದುರ್ಗಾದೇವಿ ಅಲಂಕಾರ ಪೂಜೆ ಮತ್ತು ನಾಗದೇವರ ಹಾಗೂ ಸುಬ್ರಹ್ಮಣ್ಯೇಶ್ವರ ಸ್ವಾಮಿ ವಿಗ್ರಹ ಪ್ರತಿಷ್ಠಾಪನೆ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 11 ರಂದು ಮಹಿಷಾಸುರ ಮರ್ದಿನಿ ಪೂಜಾ ಕಾರ್ಯಕ್ರಮ ಮರುದಿನ ರಾಜರಾಜೇಶ್ವರಿ ಪೂಜಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ದೇವಾಲಯದಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಾಂಸ್ಕೃತಿಕ ಸಮಿತಿ ಸಂಚಾಲಕ ಎಂ.ಕೃಷ್ಣ ಮಾತನಾಡಿ, ಅ.10 ರಿಂದ 12 ರ ತನಕ ಮೂರು ದಿನಗಳ ಕಾಲ ಭಕ್ತಿಗೀತೆ, ಭರತನಾಟ್ಯ ಸ್ಪರ್ಧೆ ಜಾನಪದ ನೃತ್ಯ ಸ್ಪರ್ಧೆಗಳು ನಡೆಯಲಿವೆ.ಭಾಗವಹಿಸುವ ಆಸಕ್ತರು ಅ. 8 ರ ಒಳಗಾಗಿ ನೊಂದಾಯಿಸಿಕೊಳ್ಳುವಂತೆ ಕೋರಿದ್ದಾರೆ.
ಹೆಸರು ನೋಂದಾಯಿಸಲು 9164881186, 8861550444 ಅಥವಾ 6364639776 ಸಂಪರ್ಕಿಸುವಂತೆ ಕೋರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಲ್ಬರ್ಟ್ ಇದ್ದರು.