ಇಂದಿನಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ: ರಘು ಮೊಸಳೆ

| Published : Nov 14 2025, 01:45 AM IST

ಸಾರಾಂಶ

ದಾವಣಗೆರೆ ನಗರದ ಮಹಾರಾಜ ಪೇಟೆಯ ಶ್ರೀ ವಿಠಲ ಮಂದಿರದ ಶ್ರೀ ಭಾವಸಾರ ಕ್ಷತ್ರಿಯ ದೈವಜ್ಞ ದೈವ ಮಂಡಳಿ ಮತ್ತು ಭಜನಾ ಮಂಡಳಿ ವತಿಯಿಂದ ನ.14ರಿಂದ 17 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಮಂಡಳಿ ಅಧ್ಯಕ್ಷ ಎಂ.ಎನ್. ರಘು ಮೊಸಳೆ ಹೇಳಿದ್ದಾರೆ.

- ಶ್ರೀ ಭಾವಸಾರ ಕ್ಷತ್ರಿಯ ದೈವಜ್ಞ ದೈವ ಮಂಡಳಿ-ಭಜನಾ ಮಂಡಳಿಯಿಂದ ಆಯೋಜನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ ನಗರದ ಮಹಾರಾಜ ಪೇಟೆಯ ಶ್ರೀ ವಿಠಲ ಮಂದಿರದ ಶ್ರೀ ಭಾವಸಾರ ಕ್ಷತ್ರಿಯ ದೈವಜ್ಞ ದೈವ ಮಂಡಳಿ ಮತ್ತು ಭಜನಾ ಮಂಡಳಿ ವತಿಯಿಂದ ನ.14ರಿಂದ 17 ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಮಂಡಳಿ ಅಧ್ಯಕ್ಷ ಎಂ.ಎನ್. ರಘು ಮೊಸಳೆ ಹೇಳಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಸದ್ಗುರು ಹರಿಭಕ್ತ ಪಾರಾಯಣ ಭಾಸ್ಕರ್ ಮಹಾರಾಜ್ ಪಂಡರಾಪುರ ಅವರ ಆರ್ಶಿವಾದರೊಂದಿಗೆ ಪಂಢರಾಪುರದ ಪ್ರಭಾಕರ್ ದಾದಾ ಭುವ ಬದಲಿ ಮಹಾರಾಜ್ ಸಾನ್ನಿಧ್ಯದಲ್ಲಿ ಶ್ರೀವಿಠಲ ರುಖುಮಾಯಿ ದೇವರ ದಿಂಡಿ ಉತ್ಸವ ಮತ್ತು ಶ್ರೀ ಸಂತ ಜ್ಞಾನೇಶ್ವರ ಮಹಾರಾಜರ ಸಮಾಧಿ ಸೋಹಳ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಮಾಹಿತಿ ನೀಡಿದರು.

14ರ ಶುಕ್ರವಾರ ಸಂಜೆ 6.30 ಗಂಟೆಗೆ ಪೋತಿ ಸ್ಥಾಪನೆ, ಪಲ್ಲಕ್ಕಿ ಉತ್ಸವದೊಂದಿಗೆ ನಗರ ಪ್ರದಕ್ಷಣೆ ನಂತರ ಧ್ವಜ ಪೂಜೆ ನಡೆಯಲಿದೆ. ರಾತ್ರಿ 8 ಗಂಟೆಗೆ ಮಹಾ ಮಂಗಳಾರತಿ ಅಖಂಡ ವೀಣಾ ಜಾಗರಣೆ ನಡೆಯಲಿದೆ. ನ.15ರಂದು ಬೆಳಗ್ಗೆ 5.30ಕ್ಕೆ ಕಾಕಡಾರತಿ, ಭಜನೆ ಹರಿಪಾಠ, ಪಾರಾಯಣ ನಡೆಯಲಿದೆ. ಬೆಳಗ್ಗೆ 10 ಗಂಟೆಗೆ ನಾಮಜಪ ಮತ್ತು ನಡೆಯಲಿದೆ. ಸಂಜೆ 4ರಿಂದ ರುಖುಮಾಯಿ ಮಹಿಳಾ ಮಂಡಳಿಯಿಂದ ಮಜನ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಭಾವಸಾರ ಮಂಡಳಿಯಿಂದ ಭಜನೆ ಕಾರ್ಯಕ್ರಮ ನಡೆಯಲಿದೆ. ಇದಾದ ನಂತರ ಸಂಜೆ 6 ಗಂಟೆಗೆ ಭಜನೆಯೊಂದಿಗೆ ಶೋಭಯಾತ್ರೆ ನಡೆಯಲಿದೆ. ರಥೋತ್ಸವದಲ್ಲಿ ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 8ರಿಂದ ನಿಪ್ಪಾಣಿಯ ಶ್ರೀ ತುಕಾರಾಂ ಹಜಾರೆ ಅವರಿಂದ ಕೀರ್ತನೆ ನಡೆಯಲಿದೆ. ರಾತ್ರಿ 12 ಗಂಟೆಯಿಂದ ಮಂಡಳದಿಂದ ಬಾರೂಢ ಕಾರ್ಯಕ್ರಮ ನಡೆಯಲಿದ್ದು, ಭಜನೆ ಮತ್ತು ಅಖಂಡ ವಿನ ಜಾಗರಣೆ ನಡೆಯಲಿದೆ ಎಂದು ಹೇಳಿದರು.

16ರ ಭಾನುವಾರ ಪ್ರಾತಃಕಾಲ 5 ಗಂಟೆಗೆ ಕಾಕಡಾರತಿ, ಭಜನೆ, 9ಕ್ಕೆ ವಿಠ್ಠಲ ಶ್ರೀ ವಿಠಲ ರುಖುಮಾಯಿ ದೇವತಾ ರಥೋತ್ಸವ, ಮಧ್ಯಾಹ್ನ 12ಕ್ಕೆ ಸಂತ ಪೂಜಾ, 12.30ರಿಂದ ಭಜನೆ 1.15ಕ್ಕೆ ಮಹಾಮಂಗಳಾರತಿ, ಮಧ್ಯಾಹ್ನ ಸಂತ ಸಮಾರಾಧನೆ ನಡೆಯಲಿದೆ. 17ರಂದು ಶ್ರೀಸಂತ ಜ್ಞಾನೇಶ್ವರ ಮಹಾರಾಜ ಸಮಾಧಿ ಸೋಹಳ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 5.30ಕ್ಕೆ ಕಾಕಡಾರತಿ, ಭಜನೆ, ಹರಿಪಾಠ, ಕೀರ್ತನೆ ಕಾರ್ಯಕ್ರಮ ನಡೆಯಲಿದೆ. ಪಂಡರಾಪುರದ ಪ್ರಭಾಕರ್ ದಾದಾ ಭುವಾ ಬೋಧನೆ ಮಹಾರಾಜರು ಈ ಎಲ್ಲ ಕಾರ್ಯಕ್ರಮಗಳ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎ.ವಿ. ಅಶೋಕ ಅಂಬರ್‌ಕರ್, ಸಂಜಯ ಘಟಗೆ, ಚಂದ್ರಕಾಂತ ವಾದೋನಿ, ಮಂಜುನಾಥ ಗುಜ್ಜಾರ್ ಇತರರು ಇದ್ದರು.

- - -

-13ಕೆಡಿವಿಜಿ37:

ದಾವಣಗೆರೆಯಲ್ಲಿ ಶ್ರೀ ಭಾವಸಾರ ಕ್ಷತ್ರಿಯ ದೈವಜ್ಞ ದೈವ ಮಂಡಳಿಯಿಂದ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಿರುವ ಕುರಿತು ರಘು ಮೊಸಳೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.