ವಿವಿಧ ಸ್ತಬ್ಧಚಿತ್ರ: ಛದ್ಮವೇಷಧಾರಿಗಳ ಭವ್ಯ ಮೆರವಣಿಗೆ

| Published : Jan 22 2024, 02:17 AM IST

ವಿವಿಧ ಸ್ತಬ್ಧಚಿತ್ರ: ಛದ್ಮವೇಷಧಾರಿಗಳ ಭವ್ಯ ಮೆರವಣಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಅಯ್ಯೋಧ್ಯೆ ನಗರಿಯಲ್ಲಿ ಪ್ರತಿಷ್ಠಾಪನೆಗೊಳ್ಳುತ್ತಿರುವ ಶ್ರೀರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಭಾನುವಾರ ತಾಳಿಕೋಟೆ ಪಟ್ಟಣದಲ್ಲಿ ಅಸಂಖ್ಯಾತ ರಾಮಭಕ್ತರು ಒಗ್ಗೂಡಿ ಪಟ್ಟಣದ ಪೊಲೀಸ್ ಠಾಣಾ ಹತ್ತಿರವಿರುವ ಶ್ರೀಹನುಮಾನ ಮಂದಿರದಿಂದ ರಾಮಾಯಣಕ್ಕೆ ಸಂಬಂಧಪಟ್ಟಂತಹ ವಿವಿಧ ಸ್ತಬ್ಧ ಚಿತ್ರಗಳು ಹಾಗೂ ಛದ್ಮವೇಷದಾರಿಗಳನ್ನು ಹೊತ್ತುಕೊಂಡೊಯುತ್ತಿರುವ ವಾಹನಗಳಲ್ಲಿಯ ಭವ್ಯ ಮೆರವಣಿಗೆಗೆ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ಶಾಲಾ ಮಕ್ಕಳ ಕೋಲಾಟ, ರಾಮ, ರಾವಣರ ಯುದ್ಧದ ಸನ್ನಿವೇಶವನ್ನು ಪ್ರದರ್ಶಿ ಸಲು ಆಗಮಿಸಿದ ಕಲಾತಂಡ ರಾವಣನ ತಂಗಿ ಸೂರ್ಪಾನಿಕಿಗೆ ಒದೆ ಮಾಡುವ ಸನ್ನಿವೇಶವೂ ಕೂಡಾ ನೋಡುಗರಿಗೆ ಇಡೀ ರಾಮಾಯಣವೇ ಮರುಕಳಿಸಿದಂತೆಭಾಸವಾಗುತಿತ್ತು.

ವಿವಿಧ ವಾಧ್ಯಮೇಳಗಳೊಂದಿಗೆ ಮಹಿಳೆಯರ ಭಜನಾ ತಂಡ ಜೈಶ್ರೀರಾಮ ಎಂಬ ಘೋಷಣೆಯೊಂದಿಗೆ ಸುಮಾರು ೧ ಕೀಲೋಮೀಟರದಂತೆ ಪುರುಷರು ಹಾಗೂ ಮಹಿಳೆಯರು ಒಗ್ಗೂಡಿ ಶ್ರೀರಾಮಲಲ್ಲಾನನ್ನು ನೆನೆಯುತ್ತ ಜೈ ಘೋಷಣೆಗಳನ್ನು ಹಾಕಿ ಸಾಗಿ ಬಂದ ಈ ಭವ್ಯ ಮೆರವಣಿಗೆಯ ಸಾರೋಟಿನಲ್ಲಿ ಶ್ರೀರಾಮನ ಮೂರ್ತಿಯ ಜೊತೆಗೆ ಛದ್ಮವೇಷಧಾರಿಗಳ ಮೆರವಣಿಗೆಯು ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಮಾರ್ಗವಾಗಿ ಶ್ರೀಅಂಬಾಭವಾನಿ ಮಂದಿರ, ಕತ್ರಿ ಬಜಾರ, ಮಾರ್ಗವಾಗಿ ಶ್ರೀಬಾಲಾಜಿ ಮಂದಿರ ರಸ್ತೆ, ಶ್ರೀವಿಠ್ಠಲ ಮಂದಿರ ರಸ್ತೆ, ಶಿವಾಜಿ ಮಹಾರಾಜರ ವೃತ್ತದ ಮೂಲಕ ಮಹಾರಾಣಾಪ್ರತಾಪಸಿಂಹ ಸರ್ಕಲ್‌ದಲ್ಲಿ ಏರ್ಪಡಿಸಲಾದ ಭವ್ಯ ವೇದಿಕೆಯಲ್ಲಿ ಸಭೆಯಾಗಿ ಮಾರ್ಪಟ್ಟಿತು.

ಇದು ಅಲ್ಲದೇ ಇಡೀ ತಾಳಿಕೋಟೆ ಪಟ್ಟಣದಲ್ಲಿ ಇರತಕ್ಕಂತಹ ಡೋಣಿ ಹನುಮಾನ ಮಂದಿರ, ಬಜಾರ ಹನುಮಾನ ಮಂದಿರ, ಶ್ರೀ ಶಿವಭವಾನಿ ಮಂದಿರ, ಗ್ರಾಮದೇವತೆ(ದ್ಯಾವಮ್ಮದೇವಿ) ಮಂದಿರ, ನಗರೇಶ್ವರ ದೇವಸ್ಥಾನ, ರಜಪೂತ ಸಮಾಜದ ಶ್ರೀ ಭವಾನಿ ಮಂದಿರ, ಒಳಗೊಂಡು ಪುರಾತನ ಕಾಲದ ಇತಿಹಾಸವನ್ನು ಹೇಳುತ್ತಾ ಸಾಗಿರುವ ಪುರಾತನ ದೇವಾಲಯವಾದ ಶ್ರೀರಾಮ ಮಂದಿರವನ್ನು ಎಲ್ಲ ರಾಮಭಕ್ತರು ಒಗ್ಗೂಡಿ ಸ್ವಚ್ಚಗೊಳಿಸಿದರಲ್ಲದೇ ಫಲಾಪುಷ್ಪ ಹಾರ ಅಲ್ಲದೇ ವಿದ್ಯುತ್ ದ್ವೀಪಗಳ ಅಲಂಕಾರವು ಇಡೀ ದೇವಾಲಯದ ಮೇಲ್ಭಾಗ ಮತ್ತು ಇಡೀ ರಸ್ತೆಗುಂಟಾ ದ್ವೀಪಾಲಂಕಾರ ರಾರಾಜಿಸುವಂತೆ ಮಾಡಿ ನೋಡುಗರಿಗೆ ಆಕರ್ಷಮಯದಂತೆ ಕಾಣುತ್ತಿತ್ತಲ್ಲದೇ ಎಲ್ಲ ರಾಮ ಭಕ್ತರ ಕೈಯಲ್ಲಿ ಶ್ರೀರಾಮಚಂದ್ರ ಧ್ವಜ, ಶ್ರೀಹನುಮಾನ ಧ್ವಜ ಈ ಎಲ್ಲವುಗಳು ನೋಡುಗರಿಗೆ ಎದ್ದುಕಾಣುತ್ತಿದ್ದವಲ್ಲದೇ ಮುಖ್ಯರಸ್ತೆಗುಂಟಾ ಕೇಸರಿ ದ್ವಜಗಳು, ಕೇಸರಿ ಪರಪರಿಗಳನ್ನು ಅಲ್ಲಲ್ಲಿ ಆಕರ್ಷಮಯವಾಗುವಂತೆ ಸುತ್ತಿದ್ದ ರಾಮ ಭಕ್ತರು ತಾಳಿಕೋಟೆ ಪಟ್ಟಣದ ಈ ಹಿಂದಿನ ಇತಿಹಾಸ ಘತವೈಭವದಿಂದ ಮೇರೆದಂತಹ ರಾಮರಾಜ್ಯ ಪುನಃ ಆಗಮಿಸಿತೇನೋ ಎಂಬಂತೆ ಭಾಸವಾಗಿದೆ.

ಈ ಬೃಹತ್ ಮೆರವಣಿಗೆ ಸಮಯದಲ್ಲಿ ಯಾವುದೇ ತರಹದ ಘಟನೆ ಜರುಗದಂತೆ ರಾಮಭಕ್ತರು ತಮ್ಮ ತಮ್ಮ ಬಡಾವಣೆಯ ಸ್ವಯಂ ಸೇವಕರನ್ನು ನೇಮಿಸಿಕೊಂಡು ಸಾಗಿದ್ದು ವಿಶೇಷವಾಗಿತ್ತು.