ಸಾರಾಂಶ
ವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ವಿಚಾರದಲ್ಲಿ ರೈತರ ಪರವಾಗಿ ನಿಲ್ಲುತ್ತೇನೆ. ವಾಟದಹೊಸಹಳ್ಳಿ ಕೆರೆಯಿಂದ ನಗರ ಪ್ರದೇಶಕ್ಕೆ ನೀರು ತರುವ ಯೋಜನೆಯು ಅವೈಜ್ಞಾನಿಕವಾಗಿದೆ. ಜೊತೆಗೆ ಈ ಯೋಜನೆಯಲ್ಲಿ ಹಲವು ತಾಂತ್ರಿಕ ತೊಂದರೆಗಳಿವೆ. ಕೆರೆಯ ನೀರನ್ನು ನಗರಕ್ಕೆ ಹರಿಸಿದರೆ ಎರಡು ತಿಂಗಳಿನಲ್ಲಿ ಕೆರೆ ಬರಿದಾಗುತ್ತದೆ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಪದ್ಮಭೂಷಣ ಡಾ.ಹೆಚ್. ನರಸಿಂಹಯ್ಯರವರು ಶಿಕ್ಷಣ ತಜ್ಞರು ಮಾತ್ರವಲ್ಲದೆ, ವಿಚಾರವಾದಿ ಹಾಗೂ ಹಿರಿಯ ಗಾಂಧಿವಾದಿಯಾಗಿದ್ದರು. ಇಡೀ ಜೀವನವನ್ನು ಸರಳವಾಗಿ ಕಳೆಯುವ ಮೂಲಕ ಎಲ್ಲರಿಗೂ ಆದರ್ಶವಾಗಿದ್ದರು ಎಂದು ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿ ಹೇಳಿದರು.ನಗರದ ಪ್ರಜಾಸೌಧದದಲ್ಲಿ ಡಾ.ಎಚ್.ಎನ್ ಪ್ರಾಧಿಕಾರದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನರಸಿಂಹಯ್ಯನವರ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ವಾಟದಹೊಸಹಳ್ಳಿಕೆರೆ ನೀರು ಬೇಡವಾಟದಹೊಸಹಳ್ಳಿ ಕೆರೆ ಅಚ್ಚುಕಟ್ಟು ವಿಚಾರದಲ್ಲಿ ರೈತರ ಪರವಾಗಿ ನಿಲ್ಲುತ್ತೇನೆ. ವಾಟದಹೊಸಹಳ್ಳಿ ಕೆರೆಯಿಂದ ನಗರ ಪ್ರದೇಶಕ್ಕೆ ನೀರು ತರುವ ಯೋಜನೆಯು ಅವೈಜ್ಞಾನಿಕವಾಗಿದೆ. ಜೊತೆಗೆ ಈ ಯೋಜನೆಯಲ್ಲಿ ಹಲವು ತಾಂತ್ರಿಕ ತೊಂದರೆಗಳಿವೆ. ಕೆರೆಯ ನೀರನ್ನು ನಗರಕ್ಕೆ ಹರಿಸಿದರೆ ಎರಡು ತಿಂಗಳಿನಲ್ಲಿ ಕೆರೆ ಬರಿದಾಗುತ್ತದೆ ಎಂದು ಹೇಳಿದರು.
ಈ ಕೆರೆ ಎತ್ತಿನಹೊಳೆ ಯೋಜನೆಯಲ್ಲಿಲ್ಲ. ಈ ಯೋಜನೆಯಿಂದ ರೈತರಿಗೆ ತೊಂದರೆಯಾಗುತ್ತದೆ. ಈ ಬಗ್ಗೆ ಶಾಸಕರು ಎತ್ತಿನಹೊಳೆ ಮತ್ತು ಎಚ್.ಎನ್. ವ್ಯಾಲಿ ತಜ್ಞರ ತಂಡದೊಂದಿಗೆ ಚರ್ಚಿಸಲು ಸಿದ್ಧ ಎಂದರು.ಶಾಸಕರ ನಿಲುವೇ ಬೇರೆ
ಕ್ಷೇತ್ರದ ಶಾಸಕ ಕೆ.ಹೆಚ್.ಪುಟ್ಟಸ್ವಾಮಿಗೌಡರು ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ನಂತರ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಅವರ ನಿಲುವೆ ಬೇರೇ, ನಮ್ಮ ನಿಲುವು ಬೇರೆಯೇ ಆಗಿದೆ. ರಾಜಕೀಯದಲ್ಲಿ ಅವರೊಂದಿಗೆ ಹೊಂದಾಣಿಕೆ ಪ್ರಶ್ನೇಯೇ ಇಲ್ಲ, ಮುಂಬರುವ ಎಲ್ಲ ಚುನಾವಣೆಗಳಲ್ಲಿ ಕಾಂಗ್ರೆಸ್‌ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಎಂದರು.ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೇಣು ಸೇರಿದಂತೆ ಕಾರ್ಯಕರ್ತರು ಹಾಜರಿದ್ದರು.