ವಾಟದಹೊಸಹಳ್ಳಿ ಗ್ರಾಮಸ್ಥರ ಧರಣಿ ಮುಂದೂಡಿಕೆ

| Published : Oct 14 2025, 01:00 AM IST

ಸಾರಾಂಶ

ಅನಿರ್ದಿಷ್ಟಾವಧಿ ಧರಣಿಯು 68ದಿನಗಳು ಮುಗಿಸಿ 69ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆವಿಗೂ ಯಾರೊಬ್ಬ ಅಧಿಕಾರಿಯಾಗಲಿ ಅಥವಾ ಈ ಭಾಗದ ಶಾಸಕರಾಗಲಿ ಹೋರಾಟಗಾರರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದೆ ಕೆರೆಯ ಅಚ್ಚುಕಟ್ಟುದಾರರನ್ನು ಮತ್ತು ಆ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ತಾಲೂಕಿನ ವಾಟದಹೊಸಹಳ್ಳಿಕೆರೆ ನೀರು ಗೌರಿಬಿದನೂರು ನಗರಕ್ಕೆ ಹರಿಸುವ ಯೋಜನೆ ವಿರೋಧಿಸಿ ನಗರಗೆರೆ ಹೋಬಳಿ ಮತ್ತು ವಾಟದಹೊಸಹಳ್ಳಿ ಗ್ರಾಮದವರು ಕಳೆದ ಆಗಸ್ಟ್ 5ರಿಂದ ಗ್ರಾಮಸ್ಥರು ತಾಲೂಕು ಆಡಳಿತ ಕಚೇರಿ ಬಳಿ ಅರಂಭಿಸಿದ್ದ ಅನಿರ್ದಿಷ್ಟಾವಧಿ ಧರಣಿ 69ನೇ ದಿನಕ್ಕೆ ಕಾಲಿಟ್ಟಿದ್ದು ಸೋಮವಾರ ಅಪರ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಯಿತು. ಅಧಿಕಾರಿಗಳು, ಶಾಸಕರು ವಿಫಲ

ಅನಿರ್ದಿಷ್ಟಾವಧಿ ಧರಣಿಯು 68ದಿನಗಳು ಮುಗಿಸಿ 69ನೇ ದಿನಕ್ಕೆ ಕಾಲಿಟ್ಟಿದೆ. ಇಲ್ಲಿಯವರೆವಿಗೂ ಯಾರೊಬ್ಬ ಅಧಿಕಾರಿಯಾಗಲಿ ಅಥವಾ ಈ ಭಾಗದ ಶಾಸಕರಾಗಲಿ ಹೋರಾಟಗಾರರ ಮನವೊಲಿಸುವಲ್ಲಿ ವಿಫಲರಾಗಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸದೆ ಕೆರೆಯ ಅಚ್ಚುಕಟ್ಟುದಾರರನ್ನು ಮತ್ತು ಆ ಭಾಗದ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಾಮಗಾರಿಯನ್ನು ಮುಂದುವರೆಸಿದರೆ ಮುಂದನ ದಿನಗಳಲ್ಲಿ ಹೋರಾಟಗಳು ತೀರ್ವ ಸ್ವರೂಪ ತಾಳಲಿವೆ ಎಂದು ಧರಣಿ ನಿರತರು ಎಚ್ಚರಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಡಾ.ಭಾಸ್ಕರ್‌.ಎನ್. ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು. ಕ್ರಮ ಕೈಗೊಳ್ಳುವ ಭರವಸೆ

ಡಾ.ಭಾಸ್ಕರ್‌.ಎನ್. ಮಾತನಾಡಿ, ರೈತರ ಬೆಡಿಕೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದೇವೆ, ಜಿಲ್ಲಾಉಸ್ತವಾರಿ ಸಚಿವರ ಗಮನಕ್ಕೆ ತಂದು ನಂತರ ನೀರಾವರಿ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೈತ ಮುಖಂಡ ಮಾಳಪ್ಪ, ಹರ್ಷವರ್ಧನ್ ರೆಡ್ಡಿ, ರಾಜ್ಯ ರೈತ ಅಧ್ಯಕ್ಷರಾದ ಭಕ್ತರಳ್ಳಿ ಬೈರೇಗೌಡ, ಗುಡಿಬಂಡೆ ತಾಲೂಕು ರೈತಸಂಘದ ಅಧ್ಯಕ್ಷ ರಾಮನಾಥ, ಗೌರಿಬಿದನೂರು ತಾಲೂಕು, ರೈತ ಸಂಘದ ತಾಲ್ಲೂಕು ಅಧ್ಯಕ್ಷ ರಮಣರಡ್ಡಿ, ಹರ್ಷವರ್ಧನ್ರೆಡ್ಡಿ, ಸಿದ್ದಗಂಗಪ್ಪ, ರೈತ ಮುಖಂಡರಗಳು ಭಾಗವಹಿಸಿದರು.