ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ದೇರೆಬೈಲ್ ನೈರುತ್ಯ ವಾರ್ಡಿನ ಚಿಲಿಂಬಿ ಶ್ರೀ ಮಲರಾಯ ದೈವಸ್ಥಾನದ ದ್ವಾರದಿಂದ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿ 50 ಲಕ್ಷ ರು. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ನಡೆಯಿತು.
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 26ನೇ ದೇರೆಬೈಲ್ ನೈರುತ್ಯ ವಾರ್ಡಿನ ಚಿಲಿಂಬಿ ಶ್ರೀ ಮಲರಾಯ ದೈವಸ್ಥಾನದ ದ್ವಾರದಿಂದ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿ 50 ಲಕ್ಷ ರು. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಗುದ್ದಲಿ ಪೂಜೆ ಶಾಸಕ ವೇದವ್ಯಾಸ ಕಾಮತ್ ಉಪಸ್ಥಿತಿಯಲ್ಲಿ ನಡೆಯಿತು.ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್, ಈ ಭಾಗದ ಸ್ಥಳೀಯರ ಬೇಡಿಕೆಯ ಮೇರೆಗೆ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಉಂಟಾಗುವ ಅಡಚಣೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ಸೂಚನೆ ನೀಡಿದರು.
ನಿಕಟಪೂರ್ವ ಪಾಲಿಕೆ ಸದಸ್ಯರಾದ ಗಣೇಶ್ ಕುಲಾಲ್, ಸೋಮಶೇಖರ್ ಚಿಲಿಂಬಿ, ರಾಕೇಶ್ ಸಾಲ್ಯಾನ್, ಸುರೇಶ್ ರಾವ್, ಅರುಣ್ ಉರ್ವ, ಪ್ರವೀಣ್ ನಿಡ್ಡೆಲ್, ಗಣೇಶ್ ಭಟ್, ಸುರೇಶ್ ಬಾಳಿಗ, ಶ್ರೀಪಾದ್ ರಾಯತ್, ಚನ್ನಕೇಶವ, ರಜತ್ ಚಿಲಿಂಬಿ, ರಾಜ್ ಕುಮಾರ್ ಶೆಟ್ಟಿ, ಮನೋಜ್ ಕುಮಾರ್ ಶೆಟ್ಟಿ, ರಜತ್ ಕುಲಾಲ್, ದೀಪಕ್ ಶೆಟ್ಟಿ, ಪರಿಸರದ ನಿವಾಸಿಗಳು, ವಾರ್ಡ್ ಕಾರ್ಯಕರ್ತರು ಇದ್ದರು.