ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ಅಥರ್ವ’ ಬಿಲ್ಡರ್ಸ್ನ ಮತ್ತೊಂದು ವಾಣಿಜ್ಯ ಸಮುಚ್ಚಯ ‘ಕೃಷ್ಣ’ ಇದರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಮಂಗಳೂರು: ಮಂಗಳೂರಿನ ಹೆಸರಾಂತ ಕಟ್ಟಡ ನಿರ್ಮಾಣ ಸಂಸ್ಥೆ ‘ಅಥರ್ವ’ ಬಿಲ್ಡರ್ಸ್ನ ಮತ್ತೊಂದು ವಾಣಿಜ್ಯ ಸಮುಚ್ಚಯ ‘ಕೃಷ್ಣ’ ಇದರ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಶಾಸಕ ಡಿ.ವೇದವ್ಯಾಸ ಕಾಮತ್ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಲೋಟಸ್ ಪ್ರೊಪರ್ಟಿಸ್ ಮತ್ತು ಅಥರ್ವ ಬಿಲ್ಡರ್ಸ್ ಮಂಗಳೂರು ನಗರದಲ್ಲಿ ಅನೇಕ ವಸತಿ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿ ಮಂಗಳೂರಿನ ಬೆಳವಣಿಗೆಯಲ್ಲಿ ತಮ್ಮ ಗಮನಾರ್ಹ ಕೊಡುಗೆಗಳನ್ನಿತ್ತಿದ್ದಾರೆ. ಮಾತ್ರವಲ್ಲ ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಯೋಜನೆಯೂ ಯಶಸ್ಸ ಕಾಣುವುದರಲ್ಲಿ ಯಾವ ಸಂದೇಹವೂ ಇಲ್ಲ ಎಂದು, ನಿರ್ಮಾಣ ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ ಹಾಗೂ ಧನರಾಜ್ ಶೆಟ್ಟಿ ಅವರನ್ನು ಅಭಿನಂದಿಸಿದರು.ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ ಪಡೀಲ್ ಅಧ್ಯಕ್ಷ ಹಾಗೂ ಲಯನ್ಸ್ ಜಿಲ್ಲೆ ಮಾಜಿ ಗವರ್ನರ್ ಕೆ.ಸಿ.ಪ್ರಭು ಮಾತನಾಡಿ, 1978 ರಲ್ಲಿ ಸ್ಥಾಪಿತವಾದ ಲಯನ್ಸ್ ಕ್ಲಬ್ ಕಂಕನಾಡಿ ಪಡೀಲ್ ಕಳೆದ 49 ವರ್ಷಗಳಲ್ಲಿ ಪರಿಸರದ ಜನರಿಗೆ ಹಲವಾರು ಮಾನವೀಯ ಸೇವೆ ಸಹಕಾರಗಳನ್ನಿತ್ತು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದೆ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡುವ ಈ ಸಂಸ್ಥೆ ತನ್ನ ಸುವರ್ಣ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸುವ ಸಡಗರದಲ್ಲಿದೆ. ಆ ಪ್ರಯುಕ್ತ ಮುಂದಿನ ವರ್ಷಗಳಲ್ಲಿ ಹತ್ತು ಹಲವು ಸಮಾಜಮುಖಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ತಮ್ಮ ಬಹುಕಾಲದ ಕನಸಾದ ‘ಲಯನ್ ಸಮುದಾಯ ಭವನ’ದ ಯೋಜನೆಯನ್ನು ಸಾಕಾರಗೊಳಿಸಲು ಈ ದಿನ ಶಿಲಾನ್ಯಾಸವೇರ್ಪಟ್ಟ ‘ಕೃಷ್ಣ’ ವಾಣಿಜ್ಯ ಸಮುಚ್ಚಯದ ನಾಲ್ಕನೇ ಮಹಡಿಯನ್ನು ‘ಲಯನ್ಸ್ ಸೇವಾ ಟ್ರಸ್ಟ್ ಕಂಕನಾಡಿ ಪಡೀಲ್’ ಖರೀದಿಸಲು ನಿರ್ಧರಿಸಿದೆ ಎಂದರು.‘ಕೃಷ್ಣ’ ವಾಣಿಜ್ಯ ಸಂಕೀರ್ಣ ಯೋಜನೆಯ ಕರಪತ್ರವನ್ನು ಬಿಡುಗಡೆಗೊಳಿಸಿದ ಕೆನರಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಿ. ವಾಸುದೇವ ಕಾಮತ್ ಮಾತನಾಡಿ, ‘ಅಥರ್ವ’ ನಿರ್ಮಾಣ ಸಂಸ್ಥೆಯ ಪಾಲುದಾರರಾದ ಸಂಪತ್ ಕುಮಾರ್ ಶೆಟ್ಟಿ ಮತ್ತು ಧನರಾಜ್ ಶೆಟ್ಟಿ ಹಾಗೂ ಜಾಗದ ಮಾಲಕರಾದ ವಾಮನ ಶೆಣೈ ಅವರಿಗೆ ಶುಭಹಾರೈಸಿ ಶೀಘ್ರದಲ್ಲಿಯೇ ನಿರ್ಮಾಣದ ಕಾಮಗಾರಿ ಪೂರ್ತಿಯಾಗಲಿ ಎಂದರು.
ಈ ವಾಣಿಜ್ಯ ಸಮುಚ್ಚಯ ನಂತೂರು-ಕದ್ರಿ ರಾಷ್ಟ್ರೀಯ ಹೆದ್ದಾರಿ ಎನ್.ಹೆಚ್.ನಂ.66 ರಲ್ಲಿ ನಿರ್ಮಾಣಗೊಳ್ಳಲಿದೆ. ನಿರ್ಮಾಣ ಸಂಸ್ಥೆಯ ಪರವಾಗಿ ಅಭಿಲಾಷ್ ಕಟೀಲ್ ವಂದಿಸಿದರು.