ಸಾರಾಂಶ
ಮಳೆ, ಬೆಳೆ ಉತ್ತಮವಾಗಲಿ ಎಂದು ವೀಣಾ ಪ್ರಾರ್ಥನೆ
ಕಲಾದಗಿ:
ಜಿಲ್ಲೆಯ ಜನರ ಒಳಿತಿಗಾಗಿ, ಮಳೆ, ಬೆಳೆ ಸಮೃದ್ಧಿಗಾಗಿ ಶನಿವಾರ ರಾಜ್ಯ ಕೆಪಿಸಿಸಿ ಉಪಾಧ್ಯಕ್ಷೆ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಬಾಗಲಕೋಟೆ ನಗರದ ಕೊತ್ತಲೇಶ್ವರ ದೇವ ಸ್ಥಾನದಿಂದ ಸುಕ್ಷೇತ್ರ ತುಳಸಿಗೇರಿ ಆಂಜನೇಯ ದೇವಸ್ಥಾನದವರೆಗೆ ಹಮ್ಮಿಕೊಂಡಿದ್ದ ಸಂಕಲ್ಪಯಾತ್ರೆ ಶನಿವಾರ ಸಂಜೆ ತುಳಸಿಗೇರಿ ಹನಮಾನ ದೇವಸ್ಥಾನ ತಲುಪಿತು. ಈ ವೇಳೆ ವೀಣಾ ಕಾಶಪ್ಪನವರ ರಾಜ್ಯ, ಜಿಲ್ಲೆಯಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ಆಂಜನೇಯನಲ್ಲಿ ಬೇಡಿಕೊಂಡು ವಿಶೇಷ ಪೂಜೆ ಮಾಡಿದರು. ಬಾಗಲಕೋಟೆಯ ಕಿಲ್ಲಾ ಕೊತ್ತಲೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಪಾದಯಾತ್ರೆ, ವಲ್ಲಭಬಾಯಿ ವೃತ್ತ, ಬಸವೇಶ್ವರ ವೃತ್ತ, ಹೊಳೆ ಆಂಜನೇಯ ದೇವಸ್ಥಾನ, ವಿದ್ಯಾಗಿರಿ, ಗದ್ದನಕೇರಿ ಕ್ರಾಸ್, ರಾಮರೂಢ ಮಠ ಮಾರ್ಗವಾಗಿ ಆಗಮಿಸಿ ತುಳಸಿಗೇರಿ ಬಂದು ತಲುಪಿತು.