ಚಿಮ್ಮಾಇದಲಾಯಿ: ವೀರಭದ್ರೇಶ್ವರ ಜಾತ್ರೆ, ರಥೋತ್ಸವ ಅದ್ಧೂರಿ

| Published : May 13 2024, 12:03 AM IST

ಚಿಮ್ಮಾಇದಲಾಯಿ: ವೀರಭದ್ರೇಶ್ವರ ಜಾತ್ರೆ, ರಥೋತ್ಸವ ಅದ್ಧೂರಿ
Share this Article
  • FB
  • TW
  • Linkdin
  • Email

ಸಾರಾಂಶ

ಚಿಂಚೋಳಿ ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಆರಾಧ್ಯದೇವ ವೀರಭದ್ರೇಶ್ವರ ಜಾತ್ರೆಯ ರಥೋತ್ಸವ ಅದ್ಧೂರಿಯಾಗಿ ಜರುಗಿತು. ದೇವಸ್ಥಾನ ಆವರಣದಲ್ಲಿ ಅಗ್ನಿ ಪೂಜೆ, ಹೋಮ ಕುಂಭಾಭಿಷೇಕ, ವಿಶೇಷ ಪೂಜೆ ನಡೆಸಲಾಯಿತು.

ಚಿಂಚೋಳಿ: ತಾಲೂಕಿನ ಚಿಮ್ಮಾಇದಲಾಯಿ ಗ್ರಾಮದ ಪ್ರಸಿದ್ದ ವೀರಭದ್ರೇಶ್ವರ ದೇವಾಲಯ ಜಾತ್ರೆಯ ರಥೋತ್ಸವ ಭಾನುವಾರ ಸಾವಿರಾರು ಭಕ್ತರ ಸಡಗರ ಸಂಭ್ರಮದ ಜಯಘೋಷದೊಂದಿಗೆ ಅದ್ಧೂರಿಯಾಗಿ ಜರುಗಿತು.

ಚಿಮ್ಮಾಇದಲಾಯಿ ಗ್ರಾಮದ ಆರಾಧ್ಯದೇವ ವೀರಭದ್ರೇಶ್ವರ ಜಾತ್ರೆ ರಥೋತ್ಸವ ಅಂಗವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಿವಿಧ ಹೂವುಗಳಿಂದ ಅಲಕಂರಿಸಿದ ಪಲ್ಲಕ್ಕಿ ಮತ್ತು ಉಚ್ಛಾಯಿ ಮೆರವಣಿಗೆ ನಡೆಯಿತು. ದೇವಸ್ಥಾನ ಆವರಣದಲ್ಲಿ ಅಗ್ನಿ ಪೂಜೆ, ಹೋಮ ಕುಂಭಾಭಿಷೇಕ, ವಿಶೇಷ ಪೂಜೆ ನಡೆಸಲಾಯಿತು. ಸಂಜೆ ೬ಗಂಟೆಗೆ ರಂಗು ರಂಗಿನ ವಿವಿಧ ಹೂವುಗಳಿಂದ ಅಲಂಕರಿಸಿದ ತೇರನ್ನು ಗ್ರಾಮದ ಅನೇಕ ಭಕ್ತರು ಎಳೆದು ತಮ್ಮ ಭಕ್ತಿಯ ಹರಕೆ ಅರ್ಪಿಸಿದರು.

ತೇರಿನ ಮೇಲೆ ಭಕ್ತರು ಹೂವು, ಉತ್ತತ್ತಿ, ಬಾಳೆಹಣ್ಣು, ನಾರಿನ ಉಂಡೆ, ಬೆಂಡು ಬತಾಸು ಎಸೆದು ತಮ್ಮ ಭಕ್ತಿಯ ಹರಕೆ ಅರ್ಪಿಸಿದರು. ರಥೋತ್ಸವಕ್ಕೆ ಪೂಜ್ಯ ವಿಜಯ ಮಹಾಂತೇಶ್ವರ ಶಿವಾಚಾರ್ಯರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.ಗ್ರಾಮದ ಮುಖಂಡರಾದ ಶಿವಶರಣಪ್ಪ ದೇಸಾಯಿ, ಶಿವರಾಜ ದೇಸಾಯಿ, ಶಿವರಾಜ ಮಾಲಿಪಾಟೀಲ, ಶಿವಶರಣಪ್ಪ ಡೆಂಗಿ, ರಾಜಕುಮಾರ ಕಮಲ ಸೋಲಾರ, ಮಲ್ಲಿಕಾರ್ಜುನ ದಳಪತಿ, ಮಲ್ಲಿಕಾರ್ಜುನ ಕೊಟಪಳ್ಳಿ, ಶ್ರೀನಿವಾಸ ಚಿಂಚೋಳಿಕರ, ಮೊಗಲಪ್ಪ ದಾಸ, ಅಮೃತಪ್ಪ, ಗುಂಡಪ್ಪ ಅವರಾದಿ, ಶಿವಯೋಗಿ ರುಸ್ತಂಪೂರ, ಬಂಡೆಪ್ಪ ಹೊಳ್ಕರ, ಚೆನ್ನಪ್ಪ ನಿರಾಳಕರ, ಉಮೇಶ ಧೂಳಪ್ಪನೋರ, ಮಡೆಯ್ಯ ಸ್ವಾಮಿ, ಶಿವಕುಮಾರ ರಾಮಗೊಂಡ ಇನ್ನಿತರಿದ್ದರು.